Nepal Landslide: ಭೀಕರ ಮಳೆಗೆ ಭೂಕುಸಿತ; ಉಕ್ಕಿ ಹರಿಯುತ್ತಿರುವ ನೀರಿಗೆ ಬಿದ್ದ 63 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್; ಕಣ್ಮರೆ
Nepal Landslide: 63 ಜನರನ್ನು ಸಾಗಿಸುತ್ತಿದ್ದ ಎರಡು ಬಸ್‌ಗಳು ಭೂ ಕುಸಿತ ಉಂಟಾದ ಪರಿಣಾಮ, ಉಕ್ಕಿ ಹರಿಯುತ್ತಿದ್ದ ನದಿಗೆ ಬಿದ್ದು, ಬಸ್‌ನಲ್ಲಿ ಇದ್ದವರೆಲ್ಲ ಕಣ್ಮರೆಯಾಗಿರುವ ಆಘಾತಕಾರಿ ಘಟನೆಯೊಂದು ನೇಪಾಳದಲ್ಲಿ ನಡೆದಿದೆ.
ನೇಪಾಳದ ಮದನ್-ಆಶ್ರಿತ್ ಹೆದ್ದಾರಿಯಲ್ಲಿ ಇಂದು ಮುಂಜಾನೆ ಈ ಭಯಾನಕ ಘಟನೆ ನಡೆದಿದೆ. ಕಠ್ಮಂಡುವಿನಿಂದ ಹೊರಟಿದ್ದ ಏಂಜೆಲ್ ಬಸ್ ಮತ್ತು ಗಣಪತಿ ಡಿಲಕ್ಸ್ ಬಸ್‌ನಲ್ಲಿ 63 ಮಂದಿ ಇದ್ದರು. ಭಾರೀ ಮಳೆಯ ಕಾರಣ ಇಂದು ಮುಂಜಾನೆ 3.30 ರ ಸುಮಾರಿಗೆ ಭೂಕುಸಿತ ಉಂಟಾಗಿದೆ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಎರಡೂ ಬಸ್‌ಗಳಲ್ಲಿ ಬಸ್ ಚಾಲಕರು ಸೇರಿ 63 ಮಂದಿ ಪ್ರಯಾಣ ಮಾಡುತ್ತಿದ್ದು, ಮುಂಜಾನೆ 3.30 ರ ಸುಮಾರಿಗೆ ಭೂಕುಸಿತ ಉಂಟಾಗಿ ಈ ಭಾರೀ ಅವಘಡ ಸಂಭವಿಸಿದೆ. ಬಸ್ ಹುಡುಕುವ ಪ್ರಯತ್ನ ನಡೆಯುತ್ತಿದೆ, ರಕ್ಷಣಾ ಕಾರ್ಯ ಮುಂದುವರಿದಿದೆ. ಆದರೆ ನಿರಂತರ ಸುರಿಯುತ್ತಿರುವ ಮಳೆಯು ಅಡ್ಡಿಪಡಿಸುತ್ತಿದೆ ಎಂದು ಹೇಳಲಾಗಿದೆ.
ಪ್ರಯಾಣಿಕರನ್ನು ಹುಡುಕಲು ಮತ್ತು ಕೂಡಲೇ ರಕ್ಷಿಸಲು ಗೃಹ ಆಡಳಿತ ಸೇರಿ ಸರಕಾರದ ಎಲ್ಲಾ ಏಜೆನ್ಸಿಗಳಿಗೆ ನಿರ್ದೇಶನ ನೀಡಿರುವುದಾಗಿ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರು ಹೇಳಿದ್ದಾರೆ.
Anchor Aparna: ನಿರೂಪಕಿ ಅಪರ್ಣಾ ನಿಧನ; ಕವನದ ಮೂಲಕದ ತನ್ನ ದುಃಖ ತೋಡಿಕೊಂಡ ಪತಿ ನಾಗರಾಜ್ ವಸ್ತಾರೆ