ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Kuwait: ರಜೆ ಮುಗಿಸಿ ಕುವೈತ್‌ಗೆ ಹೋದ ದಿನವೇ ಮನೆಯಲ್ಲಿ ಅಗ್ನಿ ಅವಘಡ; ಭಾರತೀಯ ದಂಪತಿ, ಮಕ್ಕಳು ಸಾವು

Kuwait: ರಜೆಗೆಂದು ಭಾರತಕ್ಕೆ ಬಂದಿದ್ದ ಕುಟುಂಬವೊಂದು ಕುವೈತ್‌ಗೆ ಮರಳಿದ ಅದೇ ದಿನ ತಮ್ಮ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ.
09:33 AM Jul 21, 2024 IST | ಸುದರ್ಶನ್
UpdateAt: 09:33 AM Jul 21, 2024 IST
Advertisement

Kuwait: ರಜೆಗೆಂದು ಭಾರತಕ್ಕೆ ಬಂದಿದ್ದ ಕುಟುಂಬವೊಂದು ಕುವೈತ್‌ಗೆ ಮರಳಿದ ಅದೇ ದಿನ ತಮ್ಮ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ. ಕುವೈತ್‌ನ ಭಾರತೀಯ ರಾಯಭಾರ ಕಚೇರಿಯು "ಕಳೆದ ರಾತ್ರಿ ಅಬಾಸಿಯಾದಲ್ಲಿನ ತಮ್ಮ ಫ್ಲಾಟ್‌ನಲ್ಲಿ ಬೆಂಕಿಯಿಂದಾಗಿ ಮ್ಯಾಥ್ಯೂಸ್ ಮುಲಕ್ಕಲ್, ಅವರ ಪತ್ನಿ ಮತ್ತು 2 ಮಕ್ಕಳ ದುರಂತ ಸಾವಿನ ಬಗ್ಗೆ ಕುವೈತ್‌ನ ಭಾರತೀಯ ರಾಯಭಾರ ಕಚೇರಿ ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ.

Advertisement

Kerala: ಕೇರಳದಲ್ಲಿ 14 ರ ಬಾಲಕನಿಗೆ ನಿಫಾ ವೈರಸ್‌ ದೃಢ; ಕರ್ನಾಟಕದಲ್ಲಿ ಡೆಂಗ್ಯೂ ಜೊತೆ ನಿಫಾ ಅಪಾಯ?

Advertisement

ಅಬ್ಬಾಸಿಯಾ ಪ್ರದೇಶದ ಒಂದು ಕಟ್ಟಡದಲ್ಲಿ ಇರು ಎರಡನೇ ಮಹಡಿಯಲ್ಲಿ ಈ ದಂಪತಿ ವಾಸವಾಗಿದ್ದರು. ಶುಕ್ರವಾರ (ಜುಲೈ 19) ರಾತ್ರಿ ಎ.ಸಿ ಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿಯಿಂದಾಗಿ ಉಸಿರುಗಟ್ಟಿ ನಾಲ್ವರು ಮೃತ ಹೊಂದಿದ್ದಾರೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಕುವೈತ್‌ನಲ್ಲಿ ವಾಸವಾಗಿದ್ದು, ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ. ಮೃತ ಹೊಂದಿದವರನ್ನು ಮ್ಯಾಥ್ಯೂ ಮುಜಕ್ಕಲ್, ಅವರ ಪತ್ನಿ ಲಿನ್ ಅಬ್ರಹಾಂ ಮತ್ತು ಅವರ ಮಕ್ಕಳಾದ ಐಸಾಕ್ ಮತ್ತು ಎರಿನ್ ಎಂದು ಗುರುತಿಸಲಾಗಿದೆ.

ಮ್ಯಾಥ್ಯೂ ಅವರು ಕಳೆದ 15 ವರ್ಷಗಳಿಂದ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರ ಪತ್ನಿ ನರ್ಸ್ ಆಗಿದ್ದು, ಮಕ್ಕಳು ಅಲ್ಲಿ ಓದುತ್ತಿದ್ದರು. ಪತ್ತನಂತಿಟ್ಟದಲ್ಲಿರುವ ಸಂತ್ರಸ್ತೆಯ ಕುಟುಂಬಕ್ಕೆ ಮೃತದೇಹಗಳು ತಮ್ಮ ಊರು ತಲುಪಿರುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ದೃಢೀಕರಣವನ್ನು ಪಡೆದಿಲ್ಲ. ಮ್ಯಾಥ್ಯೂ ಅವರ ತಾಯಿ ಮತ್ತು ಮೂವರು ಒಡಹುಟ್ಟಿದವರನ್ನು ಅಗಲಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಕೊಠಡಿಯಲ್ಲಿ ಅಳವಡಿಸಿದ್ದ ಎಸಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ.

SBI SCO Recruitment 2024: ಎಸ್‌ಬಿಐನಲ್ಲಿ 1040 ಎಸ್‌ಸಿಒ ಹುದ್ದೆಗಳ ಭರ್ತಿ; ಈ ಕೂಡಲೇ ಅರ್ಜಿ ಸಲ್ಲಿಸಿ

Advertisement
Advertisement