Kushalanagara: ಬೀಗರೂಟ ಸೇವಿಸಿ ವಧು-ವರ ಸೇರಿ 500ಕ್ಕೂ ಹೆಚ್ಚು ಮಂದಿ ಅಸ್ವಸ್ಥ!!
Kushalanagara: ಬೀಗರ ಊಟ ಸೇವಿಸಿ ಮಧುಮಕ್ಕಳು ಸೇರಿ 500ಕ್ಕೂ ಹೆಚ್ಚು ಮಂದಿ ವಾಂತಿ ಭೇದಿಗೆ ತುತ್ತಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣ ಕುಶಾಲನಗರ(Kushalanagara) ಸಮೀಪದ ಕೊಪ್ಪದಲ್ಲಿ ಗುರುವಾರ ಸಂಜೆ ನಡೆದಿದೆ.
ಕುಶಾಲಗನಗರದಲ್ಲಿ ಕೊಪ್ಪದಲ್ಲಿ(Koppa) ನುತನವಾಗಿ ಮದುವೆಯಾಗಿದ್ದ ವಧು-ವರರು ಖಾಸಗಿ ರೆಸಾರ್ಟ್‌ನಲ್ಲಿ ಬೀಗರ ಊಟ ಏರ್ಪಡಿಸಿದ್ದರು. ಈ ಸಮಾರಂಭದಲ್ಲಿ ಸಾವಿರಕ್ಕೂ ಅಧಿಕ ಅತಿಥಿಗಳು ಪಾಲ್ಗೊಂಡಿದ್ದರು. ಸಂಜೆ ಸುಮಾರು 5 ಗಂಟೆ ವೇಳೆಗೆ ಆಹಾರ ಸೇವಿಸಿದ ಮಂದಿಯಲ್ಲಿ ವಾಂತಿ ಭೇದಿ ಕಂಡುಬಂತು. ವೃದ್ಧರು, ಮಹಿಳೆ ಯರು, ಮಕ್ಕಳ ಸಹಿತ ಅಸ್ವಸ್ಥಗೊಂಡವರನ್ನು ಕುಶಾಲನಗರ, ಪಿರಿಯಾಪಟ್ಟಣ(Piriyapattana) ಸೇರಿ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Job Alert: ವಿಸಿಟಿಂಗ್ ಕನ್ಸಲ್ಟೆಂಟ್ ನಲ್ಲಿ ಉದ್ಯ್ಯೋಗವಿದೆ! ಈಗಲೇ ಅರ್ಜಿ ಸಲ್ಲಿಸಿ
ಇಷ್ಟೇ ಅಲ್ಲದೆ ಮದು ಮಕ್ಕಳೂ ಆಹಾರ ಸೇವಿಸಿ ಅನಾರೋಗ್ಯಕೀಡಾಗಿದ್ದು, ಪೋಷಕರ ಸಹಿತ ಪಿರಿಯಾಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮುಖ್ಯವಾದ ವಿಚಾರ ಅಂದ್ರೆ ಬೀಗರೂಟದಲ್ಲಿ ಅಧಿಕಾರಿಗಳು, ಜನಪ್ರತಿ ನಿಧಿಗಳೂ ಕೂಡಾ ಪಾಲ್ಗೊಂಡಿದ್ದರು. ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಕೂಡಾ ಪಾಲ್ಗೊಂಡಿದ್ದರು ಎನ್ನಲಾಗಿದೆ. ಆದರೆ ಈ ಸ್ಥಿತಿಗೆ ಕಾರಣ ಏನೆಂದು ತಿಳಿದುಬಂದಿಲ್ಲ.