For the best experience, open
https://m.hosakannada.com
on your mobile browser.
Advertisement

KSRTC Special Bus: ಯುಗಾದಿ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ ಪ್ರಯಾಣಿಕರಿಗೆ ಶುಭ ಸುದ್ದಿ

KSRTC Special Bus: ಶಾಲಾ ಮಕ್ಕಳಿಗೂ ರಜೆ ಇರುವುದರಿಂದ ಪ್ರವಾಸಕ್ಕೆಂದು ಯೋಜನೆ ಹಾಕಿಕೊಂಡವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಹಿ ಸುದ್ದಿ.
10:29 AM Apr 05, 2024 IST | ಸುದರ್ಶನ್
UpdateAt: 10:33 AM Apr 05, 2024 IST
ksrtc special bus  ಯುಗಾದಿ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ ಪ್ರಯಾಣಿಕರಿಗೆ ಶುಭ ಸುದ್ದಿ

KSRTC Special Bus: ಯುಗಾದಿ, ರಂಝಾನ್‌, ಹೀಗೆ ಸಾಲು ಸಾಲು ರಜೆಗಳು ಇನ್ನು ಇರಲಿರುವುದರಿಂದ ಹಾಗೂ ಶಾಲಾ ಮಕ್ಕಳಿಗೂ ರಜೆ ಇರುವುದರಿಂದ ಪ್ರವಾಸಕ್ಕೆಂದು ಯೋಜನೆ ಹಾಕಿಕೊಂಡವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಹಿಸುದ್ದಿಯೊಂದನ್ನು ನೀಡಿದೆ. ಹೌದು, ಸಾರ್ವಜನಿಕರಿಗೆ ನಾಲ್ಕೂ ನಿಗಮಗಳಿಂದ ಒಟ್ಟಾಗಿ 2000 ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಯೋಜನೆಯಾಗಿದೆ.

Advertisement

ಇದನ್ನೂ ಓದಿ: Assault Case: ಹನುಮಾನ್‌ ಚಾಲೀಸ ಹಾಕಿದ ಪ್ರಕರಣ; ಹಲ್ಲೆಗೊಳಗಾದವನ ಮೇಲೆಯೇ ಎಫ್‌ಐಆರ್‌ ದಾಖಲು

ಕೆಎಸ್‌ಆರ್‌ಟಿಸಿಯಿಂದ 1,750ಬಸ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 145 ಬಸ್, ಕೆಕೆಆರ್‌ಟಿಸಿಯ 200 ಬಸ್ ಹಾಗೂ ಬಿಎಂಟಿಸಿಯ 180 ವಿಶೇಷ ಬಸ್‌ಗಳು ಓಡಾಟ ಮಾಡಲಿದೆ. ನಾಲ್ಕು ನಿಗಮಗಳಿಂದ ಒಟ್ಟು 2,275 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

Advertisement

ಇದನ್ನೂ ಓದಿ: Illicit Relationship: ಲವರ್‌ನ ಮನೆಗೆ ಕರೆದುಕೊಂಡು ಬರಲು ಗಂಡ ಒಪ್ಪದ್ದಕ್ಕೆ ವಿದ್ಯುತ್‌ ಕಂಬ ಏರಿ ಕುಳಿತ ಪತ್ನಿ

ವಿಶೇಷ ಬಸ್‌ ಎಲ್ಲಿಗೆಲ್ಲ?

ನಗರದ ಕೆಂಪೇಗೌಡ ನಿಲ್ದಾಣ, ಸ್ಯಾಟಲೈಟ್ ನಿಲ್ದಾಣ, ಶಾಂತಿನಗರದಿಂದ ವಿಶೇಷ ಬಸ್‌ ಇರಲಿದೆ. ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ ಸೇರಿ‌ ಹಲವು ಸ್ಥಳಗಳಿಗೆ ಹೆಚ್ಚುವರಿ ಬಸ್ ಸಂಚಾರ ನಡೆಸಲಿದೆ. ನೆರೆರಾಜ್ಯಗಳ ನಗರಗಳಾದ ಹೈದರಾಬಾದ್, ಚೆನ್ನೈ,‌ ಗೋವಾ ಪಣಜಿ, ಶಿರಡಿ, ಎರ್ನಾಕುಲಂಗೆ ವಿಶೇಷ ಬಸ್ ಸೇವೆ ಇರಲಿದೆ.

Advertisement
Advertisement