For the best experience, open
https://m.hosakannada.com
on your mobile browser.
Advertisement

Kerala: ವಯನಾಡಿನಲ್ಲಿ ಗೆದ್ದರೆ ಸುಲ್ತಾನ್‌ ಬತ್ತೇರಿ ನಗರದ ಹೆಸರು ಬದಲಾವಣೆ- ಬಿಜೆಪಿ ಅಧ್ಯಕ್ಷ

Kerala: ಸುಲ್ತಾನ್‌ ಬತ್ತೇರಿ ನಗರದ ಹೆಸರನ್ನು ಗಣಪತಿ ವಟ್ಟಾಂ ಎಂದು ಬದಲಾಯಿಸುವುದಾಗಿ ಕೇರಳ ಬಿಜೆಪಿ ಅಧ್ಯಕ್ಷ, ವಯನಾಡ್‌ ಕ್ಷೇತ್ರದ ಅಭ್ಯರ್ಥಿ ಕೆ.ಸುರೇಂದ್ರನ್‌ ಹೇಳಿಕೆ
04:14 PM Apr 11, 2024 IST | ಮಲ್ಲಿಕಾ ಪುತ್ರನ್
UpdateAt: 04:14 PM Apr 11, 2024 IST
kerala  ವಯನಾಡಿನಲ್ಲಿ ಗೆದ್ದರೆ ಸುಲ್ತಾನ್‌ ಬತ್ತೇರಿ ನಗರದ ಹೆಸರು ಬದಲಾವಣೆ  ಬಿಜೆಪಿ ಅಧ್ಯಕ್ಷ
Advertisement

Kerala: ಒಂದು ವಯನಾಡ್‌ ಲೋಕಸಭಾ ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿದರೆ ಸುಲ್ತಾನ್‌ ಬತ್ತೇರಿ ನಗರದ ಹೆಸರನ್ನು ಗಣಪತಿ ವಟ್ಟಾಂ ಎಂದು ಬದಲಾಯಿಸುವುದಾಗಿ ಕೇರಳ ಬಿಜೆಪಿ ಅಧ್ಯಕ್ಷ, ವಯನಾಡ್‌ ಕ್ಷೇತ್ರದ ಅಭ್ಯರ್ಥಿ ಕೆ.ಸುರೇಂದ್ರನ್‌ ನೀಡಿರುವ ಹೇಳಿಕೆ ಇದೀಗ ಭಾರೀ ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿದೆ.

Advertisement

ಕಾಂಗ್ರೆಸ್‌ನಿಂದ ರಾಹುಲ್‌ ಗಾಂಧಿ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದು, ಬಿಜೆಪಿಯಿಂದ ಕೆ.ಸುರೇಂದ್ರನ್‌ ಸ್ಪರ್ಧೆ ಮಾಡಲಿದ್ದಾರೆ.

ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನ್‌ ವಯನಾಡ್‌ ಸೇರಿದಂತೆ ಅಂದು ಲಕ್ಷಾಂತರ ಮಂದಿ ಹಿಂದುಗಳನ್ನು ಮತಾಂತರ ಮಾಡಿದ್ದ. ಟಿಪ್ಪು ಸುಲ್ತಾನ್‌ ಯಾರು. ಆತ ವಯನಾಡಿಗೆ ಯಾವಾಗ ಬಂದಿದ್ದು? ಆತನಿಗೆ ಏಕೆ ಮಹತ್ವ ನೀಡಬೇಕು? ಇದು ಗಣಪತಿ ವಟ್ಟಂ ಎಂದೇ ಖ್ಯಾತಿ ಪಡೆದ ಸ್ಥಳ. ಇದರ ಬಗ್ಗೆ ಜನರಿಗೆ ಅರಿವು ಇದೆ. ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ಟಿಪ್ಪು ಸುಲ್ತಾನ್‌ ಪರ ಇದೆ. ಈ ಸರಕಾರಗಳೇ ಹೆಸರನ್ನು ಬದಲಾಯಿಸಿ ಸುಲ್ತಾನ್‌ ಬತ್ತೇರಿ ಎಂದು ಮಾಡಿರುವುದಾಗಿ ಸುರೇಂದ್ರನ್‌ ಅವರು ಗಂಭೀರ ಆರೋಪ ಮಾಡಿದರು.

Advertisement

ಇದನ್ನೂ ಓದಿ: BJP MP Kissing: ಚುನಾವಣಾ ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಮುತ್ತಿಕ್ಕಿದ ಬಿಜೆಪಿ ಸಂಸದ

Advertisement
Advertisement
Advertisement