For the best experience, open
https://m.hosakannada.com
on your mobile browser.
Advertisement

Kerala Road Mashup: ಕೇರಳದಲ್ಲಿ ಭೀಕರ ಅಪಘಾತ; ಶಿಕ್ಷಕಿ-ಚಾಲಕ ಸಾವು; ಅಪಘಾತ ಪ್ರಕರಣಕ್ಕೆ ಟ್ವಿಸ್ಟ್‌

Kerala Road Mashup: ಕೇರಳದಲ್ಲಿ ಕಾರು-ಟ್ರಕ್‌ ನಡುವೆ ಅಪಘಾತ ಸಂಭವಿಸಿದ್ದು, ಟೀಚರ್‌ ಮತ್ತು ಚಾಲಕ ಮೃತರಾಗಿದ್ದು, ಆಕ್ಸಿಡೆಂಟ್‌ ಪ್ರಕರಣಕ್ಕೆ ರೋಚಕ ತಿರುವು ದೊರಕಿದೆ.
01:36 PM Mar 31, 2024 IST | ಸುದರ್ಶನ್
UpdateAt: 01:38 PM Mar 31, 2024 IST
kerala road mashup  ಕೇರಳದಲ್ಲಿ ಭೀಕರ ಅಪಘಾತ  ಶಿಕ್ಷಕಿ ಚಾಲಕ ಸಾವು  ಅಪಘಾತ ಪ್ರಕರಣಕ್ಕೆ ಟ್ವಿಸ್ಟ್‌
Image Credit Source: Mathrubhumi.com

Kerala Road Mashup: ಗುರುವಾರ ರಾತ್ರಿ ಕೇರಳದಲ್ಲಿ ಕಾರು-ಟ್ರಕ್‌ ನಡುವೆ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಅಲಪ್ಪುಳದ ನೂರನಾಡ್‌ನ ಶಿಕ್ಷಕಿ ಅನುಜಾ ರವೀಂದ್ರನ್‌ (37) ಆಕೆಯ ಸ್ನೇಹಿತ ಹಾಶಿಮ್‌ (31) ಮೃತ ಹೊಂದಿರುವ ಘಟನೆಯೊಂದು ನಡೆದಿತ್ತು. ಈ ಘಟನೆಗೆ ಇದೀಗ ರೋಚಕ ಟ್ವಿಸ್ಟೊಂದು ದೊರಕಿದೆ.

Advertisement

ಅನುಜಾ ಹಾಗೂ ಖಾಸಗಿ ಬಸ್‌ ಚಾಲಕನಾಗಿದ್ದ ಹಾಶಿಮ್‌ ಇಬ್ಬರು ಪರಿಚಯಸ್ಥರು. ಮಾ.29 (ಗುರುವಾರ) ಶಾಲಾ ಪ್ರವಾಸದಿಂದ ವಾಪಸಾಗುತ್ತಿದ್ದ ಬಸ್ಸಿಗೆ ತನ್ನ ಕಾರನ್ನು ಅಡ್ಡ ನಿಲ್ಲಿಸಿದ ಹಾಶಿಮ್‌ ಬಸ್‌ನೊಳಗೆ ಹೋಗಿ ಅನುಜಾ ಅವರನ್ನು ಕರೆದುಕೊಂಡು ಹೋಗಿದ್ದಾನೆ. ಈ ಸಮಯದಲ್ಲಿ ಅನುಜಾ ಹಾಶೀಮ್‌ ನನ್ನ ಸಹೋದರ ಸಂಬಂಧಿ ಈತನ ಹೆಸರು ವಿಷ್ಣು ಎಂದು ಹೇಳಿದ್ದಾಳೆ.

ನಂತರ ಇಬ್ಬರು ಕಾರಿನಲ್ಲಿ ಹೋಗಿದ್ದಾರೆ. ಅನುಜಾರಿಗೆ ಕೆಲ ಸಮಯದ ಬಳಿಕ ಆಕೆಯ ಸಹೋದ್ಯೋಗಿಗಳು ಕರೆ ಮಾಡಿದಾಗ, ಈಕೆ ಅಳುತ್ತಾ ನಾನು ಮತ್ತು ವಿಷ್ಣು (ಹಾಶಿಮ್‌) ತಮ್ಮ ಜೀವನ ಕೊನೆಗಾಣಿಸುತ್ತಿದ್ದೇವೆ ಎಂದು ಹೇಳಿ ಫೋನ್‌ ಕಟ್‌ ಮಾಡುತ್ತಾರೆ. ಇದರಿಂದ ಸಂಶಯಗೊಂಡ ಸಹದ್ಯೋಗಿ ಆಕೆಯ ಮನೆಗೆ ಹಾಗೂ ಪತಿಗೆ ಮಾಹಿತಿ ನೀಡುತ್ತಾರೆ.

Advertisement

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಅನುಜಾರ ಮೊಬೈಲ್‌ ಪತ್ತೆ ಹಚ್ಚಲು ಪ್ರಯತ್ನಪಡಲಾಗುತ್ತದೆ. ಈ ಸಮಯದಲ್ಲಿ ಅನುಜಾ ಹಾಶಿಮ್‌ ತೆರಳುತ್ತಿದ್ದ ಕಾರು ಟ್ರಕ್‌ವೊಂದಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತವಾಗುತ್ತದೆ. ಈ ಭೀಕರ ಅಪಘಾತದಲ್ಲಿ ಅನುಜಾ ಸ್ಥಳದಲ್ಲಿ ಸಾವಿಗೀಡಾಗುತ್ತಾಳೆ. ಹಾಶಿಮ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವಿಗೀಡಾಗುತ್ತಾನೆ.

ಆತ್ಮಹತ್ಯೆ ಮಾಡಿಕೊಳ್ಳುವ ಇವರಿಬ್ಬರ ಮಧ್ಯೆ ಪ್ಲ್ಯಾನ್‌ ನಡೆದಿತ್ತೇ?
ಪೊಲೀಸರು ಮೊದಲಿಗೆ ಇದನ್ನು ಅಪಘಾತ ಪ್ರಕರಣ ಎಂದು ದೂರು ದಾಖಲಿಸಿ ತನಿಖೆ ಮಾಡಿದ್ದರು. ಕೆಲವೊಂದು ವಿಚಾರಗಳು ಅನಂತರ  ಬೆಳಕಿಗೆ ಬಂತು. ಅನುಜಾ ಆತನೊಂದಿಗೆ ಹೋಗಿದ್ದು, ಇದ್ದಕ್ಕಿದ್ದಂತೆ ಸಾಯುವ ಮಾತನ್ನು ಹೇಳಿದ್ದೇಕೆ? ಕಾರಿನಲ್ಲಿ ಮದ್ಯದ ಬಾಟಲಿ ಕೂಡಾ ದೊರಕಿದೆ.

ಕಾರನ್ನು ಬೇಕಂತಲೇ ರಾಂಗ್‌ ಸೈಡ್‌ನಿಂದ ಬಂದು ಟ್ರಕ್‌ಗೆ ಡಿಕ್ಕಿ ಹೊಡದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಅನುಜಾ ಅವರು ಕಾರಿನಿಂದ ಇಳಿಯಲು ಎರಡು ಮೂರು ಸಲ ಕಾರಿನ ಡೋರನ್ನು ಓಪನ್‌ ಮಾಡಿದ್ದರು ಎಂದು ಹೇಳಲಾಗಿದೆ. ಆದರೆ ಚಾಲಕ ಹಶೀಮ್‌ ಕಾರನ್ನು ಬಹಳ ಸ್ಪೀಡ್‌ನಿಂದ ಚಲಾಯಿಸುತ್ತಿದ್ದ ಎನ್ನಲಾಗಿದೆ.

ಅಂದ ಹಾಗೆ ಅನುಜಾ ಕುಟುಂಬದಲ್ಲಿ ವಿಷ್ಣು ಎಂಬ ಹೆಸರಿನ ವ್ಯಕ್ತಿಯೇ ಇಲ್ಲ ಎಂದು ಹೇಳಲಾಗಿದೆ. ಹಾಶಿಮ್-ಅನುಜಾ ನಡುವೆ ಸಂಬಂಧವಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇಬ್ಬರ ಮೊಬೈಲ್‌ ಅಪಘಾತದಲ್ಲಿ ಸಂಪೂರ್ಣ ಹಾನಿಯಾಗಿದೆ. ಅದರಲ್ಲಿ ಏನಿದೆ ಎನ್ನುವುದು ತನಿಖೆ ನಂತರ ಬಯಲಿಗೆ ಬರಲಿದೆ.

ಅನುಜಾ ಹಾಶಿಮ್‌ ಕಳೆದ ನಾಲ್ಕು ವರ್ಷದಿಂದ ಆತ್ಮೀಯರಾಗಿದ್ದರು ಎನ್ನಲಾಗಿದೆ. ಅನುಜಾ ಪತಿ ಉದ್ಯಮಿಯಾಗಿದ್ದು, ಇವರಿಬ್ಬರಿಗೆ 11 ವರ್ಷದ ಮಗನಿದ್ದಾನೆ. ಹಾಶಿಮ್‌ ಮೂರು ವರ್ಷದಿಂದ ತನ್ನ ಪತ್ನಿಯಿಂದ ದೂರ ಇದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: Terror Attack: ದಶಮಾನೋತ್ಸವ ಸಂಭ್ರಮ ಹಿನ್ನೆಲೆ : ವಿಶ್ವದೆಲ್ಲೆಡೆ ದಾಳಿಗೆ ಕರೆ ನೀಡಿದ ಐಸಿಸ್ ಉಗ್ರ ಸಂಘಟನೆ

Advertisement
Advertisement