JDS: ಜೆಡಿಎಸ್ ನಿಂದ ರಾಷ್ಟ್ರಾಧ್ಯಕ್ಷ ದೇವೇಗೌಡರ ಉಚ್ಚಾಟನೆ !! ಇವರೇ ನೋಡಿ ಮುಂದಿನ ಅಧ್ಯಕ್ಷ
JDS : ರಾಜ್ಯದಲ್ಲಿ ಜೆಡಿಎಸ್ ಒಡೆದು ಇಬ್ಬಾಗವಾಗಿದೆ. ಒಂದೆಡೆ ಪಕ್ಷ ಸ್ಥಾಪಕ ಎಚ್ ಡಿ ದೇವೇಗೌಡರು(HD Devegowda) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದರೆ ಇತ್ತ ನಾನೇ ಜೆಡಿಎಸ್( JDS) ರಾಜ್ಯಾಧಕ್ಷ ಎಂದು ಘೋಷಿಸಿಕೊಂಡು ಓಡಾಡುತ್ತಿರುವ ಸಿ ಎಂ ಇಬ್ರಾಹಿಂ(CM Ibrahim) ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನೇ ಪಕ್ಷದಿಂದ ಉಚ್ಚಾಟನೆ ಮಾಡಿ ಹೊಸ ಅಧ್ಯಕ್ಷರ ನೇಮಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ರಾಜ್ಯದಲ್ಲಿ ಏನೆಲ್ಲಾ ಅವಾಂತರಗಳು ನಡೆದಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮುನಿಸಿಕೊಂಡು, ವರಿಷ್ಠರ ಎದುರು ಬಂಡಾಯ ಎದ್ದು, ಕೊನೆಗೆ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಉಚ್ಚಾಟನೆ ಮಾಡಿದ್ದು ಎಲ್ಲರಿಗೂ ತಿಳಿದಿದೆ. ಆದರೆ ಇದರ ಹೊರತಾಗಿಯೂ ಇಬ್ರಾಹಿಮ್ ಅವರು ನಿಜವಾದ ಜೆಡಿಎಸ್ ನಮ್ಮದು, ನಾನೇ ಅದರ ರಾಜ್ಯಾಧ್ಯಕ್ಷ, ಯಾರೂ ನನ್ನನ್ನು ಉಚ್ಚಾಟನೆ ಮಾಡಲು ಸಾಧ್ಯವಿಲ್ಲ. ದೇವೇಗೌಡರು ಉದ್ಧಟತನ ತೋರಿದರೆ ಅವರನ್ನೇ ಪಕ್ಷದಿಂದ ಹೊರಹಾಕುತ್ತೇನೆ ಎಂದಿದ್ದರು. ಅಂತೆಯೇ ಇದೀಗ ಇಬ್ರಾಹಿಮ್ ಅವರು ಪಕ್ಷದಿಂದ ದೇವೇಗೌಡರನ್ನು ಉಚ್ಚಾಟಿಸಿದ್ದು, ಹೊಸ ಅಧ್ಯಕ್ಷರನ್ನೂ ನೇಮಕ ಮಾಡಿದ್ದಾರೆ.
ಹೌದು, ಧಳಪತಿಗಳ ವಿರುದ್ಧ ತೊಡೆ ತಟ್ಟಿರುವ ಸಿ ಎಂ ಇಬ್ರಾಹಿಂ ಅವರು ಕೆಲ ನಾಯಕರೊಂದಿಗೆ ಸೇರಿಕೊಂಡು ಎಚ್ಡಿ ದೇವೆಗೌಡರಿಗೆ ಪರ್ಯಾಯವಾಗಿ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ ನಾಣು ಅವರನ್ನು ಆಯ್ಕೆ ಮಾಡಿದ್ದಾರೆ. ಮೂಲಕ ದೇವೇಗೌಡರ ಕುಟುಂಬದ ಪ್ರಾಬಲ್ಯ ಕೇವಲ ಹಳೇ ಮೈಸೂರು ಭಾಗಕ್ಕೆ ಸೀಮಿತವಾಗಿದೆ, ಬಿಜೆಪಿಗೆ ನೆರೆ ರಾಜ್ಯದ ನಾಯಕರ ಬೆಂಬಲ ಇಲ್ಲ ಎಂಬ ಸಂದೇಶ ರವಾನೆ ಮಾಡಲು ಮುಂದಾಗಿದ್ದಾರೆ. ಇಷ್ಟೇ ಅಲ್ಲದೆ ತೆನೆ ಹೊತ್ತ ಮಹಿಳೆಯ ಪಕ್ಷದ ಗುರುತನ್ನು ನಮಗೇ ನೀಡಬೇಕೆಂದು ಅವರು ಚುನಾವಣಾ ಆಯೋಗಕ್ಕೆ ಪತ್ರವನ್ನೂ ಬರೆದಿದ್ದಾರೆ.
ಇನ್ನು ಈ ಕುರಿತು ಮಾತನಾಡಿದ ಅವರು ದೇವೇಗೌಡರಿಗೆ ಈಗ 87 ವರ್ಷ, ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ದೇವೇಗೌಡರನ್ನ ಬದಲಾವಣೆ ಮಾಡಲಾಗಿದೆ. ಇದು ನನ್ನ ನಿರ್ಧಾರ ಅಲ್ಲ, ಪಕ್ಷದ ಕೌನ್ಸಿಲ್ ನಿರ್ಧಾರ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಅಂದಿನ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಯವರಿಗೂ ಆಹ್ವಾನ ನೀಡಲಾಗುತ್ತದೆ. ಒಟ್ಟಾರೆ ಎಲ್ಲಾ ರೀತಿಯಿಂದಲೂ ಚರ್ಚಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಸ್ಪರ್ಧಿಸಲು ರೆಡಿಯಾಗುತ್ತೇವೆ ಎಂದಿದ್ದಾರೆ.
ಒಟ್ಟಾರೆ ಇದನ್ನು ಗಮನಿಸಿದರೆ ಕರ್ನಾಟಕದಲ್ಲಿ ಮಹರಾಷ್ಟ್ರದ ಪರಿಸ್ಥಿತಿ ಮತ್ತೆ ಮರುಕಳಿಸಬಹುದು. ಯಾಕೆಂದರೆ ಅಲ್ಲಿಯೂ ಶಿವಸೇನೆ ಪಕ್ಷ ಒಡೆದು ಇಬ್ಬಗವಾಗಿದೆ. ಇದೇ ರೀತಿ ಪಕ್ಷದಲ್ಲಿ ಎರಡು ಬಣಗಳು ಹುಟ್ಟಿ, ಎರಡನೆಯದಾಗಿ ಮೂಡಿದ ಬಣಕ್ಕೆ ಪಕ್ಷದ ಚಿಹ್ನೆ, ಸಿದ್ದಾಂತ ಎಲ್ಲವೂ ಹೋದದ್ದನ್ನು ನಾವು ಗಮನಿಸಿಬಹುದು.