ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

New rules for bikers: ಬೈಕ್ ಸವಾರರಿಗೆ ಬಂತು ಹೊಸ ಟಫ್ ರೂಲ್ಸ್ - ನಂಬರ್ ಪ್ಲೇಟ್ ವಿಚಾರದಲ್ಲಿ ಈ ಕೆಲಸ ಮಾಡಿದ್ರೆ ನಿಮಗಿನ್ನು ಜೈಲು ಫಿಕ್ಸ್ !!

12:06 PM Nov 27, 2023 IST | ಹೊಸ ಕನ್ನಡ
UpdateAt: 12:06 PM Nov 27, 2023 IST
Advertisement

New rules for bikers: ವಾಹನ ಸಂಚಾರದ ಕುರಿತಂತೆ, ಜನರ ಹಾಗೂ ಸವಾರರ ಹಿತದೃಷ್ಟಿಯಿಂದ ಸರ್ಕಾರ ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಜೊತೆಗೆ ಇದನ್ನು ಪಾಲಿಸದಿದ್ದರೆ ಅಷ್ಟೇ ಕಠಿಣವಾದ ಶಿಕ್ಷೆಯನ್ನೂ ವಿಧಿಸುತ್ತದೆ. ಅಂತೆಯೇ ಇದೀಗ ರಾಜ್ಯ ಸಾರಿಗೆ ಇಲಾಖೆಯು ಬೈಕ್ ಸವಾರರಿಗೆ ಹೊಸ ನಿಯಮವನ್ನು( New rules for bikers) ಜಾರಿಗೊಳಿಸಿದೆ.

Advertisement

ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಸವಾರರು ಹೊಸ ಚಾಳಿಯೊಂದನ್ನು ಶುರುಮಾಡಿಕೊಂಡಿದ್ದಾರೆ. ಏನೆಂದರೆ ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟಬೇಕಾದೀತು ಎಂದು ತಮ್ಮ ಬೈಕಿನ ನಂಬರ್ ಪ್ಲೇಟ್ ಅನ್ನು ಮುಚ್ಟಿಕೊಂಡೋ, ಅದರ ಮೇಲೆ ಬೇರೆ ರೀತಿ ಸ್ಟಿಕ್ಕರ್ ಅಂಟಿಸಿ ಮರೆಮಾಚಿಕೊಂಡು ಓಡಾಡುತ್ತಾರೆ. ಆದರೀಗ ಇಂತವರಿಗೆ ಬುದ್ಧಿ ಕಲಿಸಲು ಸರ್ಕಾರ ಹೊಸ ರೂಲ್ಸ್ ಜಾರಿಗೊಳಿಸಿದ್ದು ಈ ರೀತಿ ನಂಬರ್ ಪ್ಲೇಟ್ ಗಳನ್ನು ಮುಚ್ಚಿ ಓಡಾಡುವವರನ್ನು ಜೈಲಿಗಟ್ಟಲು ಸಿದ್ದತೆ ನಡೆಸಿದೆ. ಅಂದರೆ ಇಂತವರ ಮೇಲೆ ಟ್ರಾಫಿಕ್ ಪೊಲೀಸರು ಇನ್ಮುಂದೆ 420 ಕೇಸ್‌ ದಾಖಲಿಸಲಿದ್ದಾರೆ.

ಅಂದಹಾಗೆ ಈ ಕಾನೂನು ಈಗಾಗಲೇ ಜಾರಿಯಾಗಿದ್ದು ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್ ನ ನಂಬರ್ ಪ್ಲೇಟ್ ಗೆ ಸ್ಟಿಕ್ಕರ್ ಅಂಟಿಸಿದ್ದನು. ಹೀಗೆ ಸ್ಟಿಕ್ಕರ್ ಅಳವಡಿಸಿದ್ದ ಬೈಕ್ ಸವಾರನೇ ಮೇಲೆ 420 ಕೇಸ್ ದಾಖಲಿಸಲಾಗಿದೆ. ಇದೇ ಆಧಾರದಲ್ಲಿ ಪೋಲೀಸರು ಬೈಕ್ ಸವಾರನ ಬಂಧಿಸಿ ಜೈಲಿಗಟ್ಟಿದ್ದಾರೆ. ಹೀಗಾಗಿ ಬೈಕ್ ಸವಾರರು ಇನ್ಮುಂದೆ ಅತಿ ಬುದ್ಧಿವಂತಿಕೆ ತೋರಿದರೆ ಜೈಲು ಪಾಲಾಗಬೇಕಾದೀತು ಹುಷಾರ್!!

Advertisement

ಇದನ್ನೂ ಓದಿ: Adhar card: ಆಧಾರ್ ಕಾರ್ಡ್ ಇರುವವರಿಗೆ ದೇಶಾದ್ಯಂತ ಬಂತು ಹೊಸ ರೂಲ್ಸ್ - ಡಿ. 14 ರೊಳಗೆ ಈ ಕೆಲಸ ಕಡ್ಡಾಯ!!

Advertisement
Advertisement