For the best experience, open
https://m.hosakannada.com
on your mobile browser.
Advertisement

Adhar card: ಇನ್ಮುಂದೆ ಸುಲಭವಾಗಿ ಸಿಗಲ್ಲ ಹೊಸ ಆಧಾರ್ - ದೇಶಾದ್ಯಂತ ಹೊಸ ರೂಲ್ಸ್ ಜಾರಿ

07:14 AM Dec 23, 2023 IST | ಹೊಸ ಕನ್ನಡ
UpdateAt: 10:12 AM Dec 23, 2023 IST
adhar card  ಇನ್ಮುಂದೆ ಸುಲಭವಾಗಿ ಸಿಗಲ್ಲ ಹೊಸ ಆಧಾರ್   ದೇಶಾದ್ಯಂತ ಹೊಸ ರೂಲ್ಸ್ ಜಾರಿ
Advertisement

Adhar card: ಆಧಾರ್ ಕಾರ್ಡ್ ಅಪ್ಡೇಟ್, ತಿದ್ದು ಪಡಿ ಮಾಡುವ ಸರ್ಕಾರ ನಿರಂತರವಾಗಿ ಸೂಚನೆ ನೀಡುತ್ತಾ ಬರುತ್ತಿದೆ. ಆದರೆ ಈ ನಡುವೆಯೇ ಹೊಸ ಆಧಾರ್ ಪಡೆಯಲು ಸರ್ಕಾರ ಹೊಹ ನಿಯಮವೊಂದನ್ನು ಜಾರಿಗೊಳಿಸಿ ಕಡ್ಡಾಯಗೊಳಿಸಿದೆ.

Advertisement

ಹೌದು, ಆಧಾರ್ ಕಾರ್ಡ್(Adhar Card) ಕುರಿತು UIDAI ಹೊಸ ನಿಯಮ ಜಾರಿಗೊಳಿಸಿದ್ದು, ಇನ್ಮುಂದೆ ಹೊಸ ಆಧಾರ್ ಕಾರ್ಡ್ ಯಾವಾಗಬೇಕೆಂದಾಗ ಆವಾಗ, ಸುಲಭದಲ್ಲಿ ಮಾಡಿಸಲಾಗುವುದಿಲ್ಲ. ಯಾಕೆಂದರೆ ಇನ್ನು 18 ವರ್ಷ ಮೇಲ್ಪಟ್ಟವರು ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು ಪಾಸ್‌ಪೋರ್ಟ್ ರೀತಿ ಹಲವು ಹಂತದ ವೆರಿಫಿಕೇಶನ್ ಎದುರಿಸುದು ಕಡ್ಡಾಯವಾಗಿದೆ. ದೇಶದ ಭದ್ರತೆ ಸವಾಲಾಗುತ್ತಿರುವ ಕಾರಣ ಇದೀಗ ಆಧಾರ್ ಕಾರ್ಡ್‌ನಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ ಅಂತಾ ಮೂಲಗಳು ತಿಳಿಸಿವೆ.

Advertisement

ಇದನ್ನು ಓದಿ: ದ.ಕ: ಮತ್ತೆ ನೈತಿಕ ಪೊಲೀಸ್‌ಗಿರಿ : ಭಿನ್ನ ಕೋಮಿನ ಜೋಡಿಯ ತರಾಟೆ

ಅಂದಹಾಗೆ ಬಾಂಗ್ಲಾದೇಶ, ಮಯನ್ಮಾರ್ ಸೇರಿದಂತೆ ಹಲವು ಗಡಿ ಪ್ರದೇಶಗಳಿಂದ ಭಾರತಕ್ಕೆ ಹಲವರು ಅಕ್ರಮವಾಗಿ ನುಸುಳಿ ಮೊದಲು ಆಧಾರ್ ಕಾರ್ಡ್ ಮಾಡಿಸಿಕೊಳ್ಳುತ್ತಾರೆ. ಸುಲಭವಾಗಿ ಆಧಾರ್ ಕಾರ್ಡ್ ಎಲ್ಲರ ಕೈ ಸೇರುತ್ತಿತ್ತು. ದೇಶದ ಭದ್ರತೆ ಸವಾಲಾಗುತ್ತಿರುವ ಕಾರಣ ಇದೀಗ ಆಧಾರ್ ಕಾರ್ಡ್‌ನಲ್ಲಿ ಮಾಡಿಸುವ ಕ್ರಮದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಇನ್ಮುಂದೆ 18 ವರ್ಷ ಮೇಲ್ಪಟ್ಟವರು ಹೊಸ ಆಧಾರ್ ಕಾರ್ಡ್ ಪಡೆಯುವುದು ಸುಲಭವಲ್ಲ. ನೀವು ಆಧಾರ್ ಕಾರ್ಡ್‌ಗೆ ನೀಡುವ ವಿಳಾಸವನ್ನು ಅಧಿಕಾರಿಗಳ ಬಂದು ವೆರಿಫಿಕೇಶನ್ ನಡೆಸಲಿದ್ದಾರೆ.

ಇಷ್ಟೇ ಅಲ್ಲದೆ UIDAI ಇದೀಗ ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ನೊಡಲ್ ಅಧಿಕಾರಿಗಳನ್ನು ನೇಮಕ ಮಾಡಲಿದೆ. ಈ ಅಧಿಕಾರಿಗಳ ತಂಡ ಆಧಾರ್ ಕಾರ್ಡ್ ವಿಳಾಸದ ವೆರಿಫಿಕೇಶನ್ ಮಾಡಲಿದ್ದು, ವಿಳಾಸ, ವಯಸ್ಸು, ಸೇರಿದಂತೆ ಎಲ್ಲಾ ದಾಖಲೆಗಳ ಪರಿಶೀಲನೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement
Advertisement
Advertisement