For the best experience, open
https://m.hosakannada.com
on your mobile browser.
Advertisement

Bengaluru kambala: ಜನಾಕ್ರೋಶಕ್ಕೆ ಮಣಿದ ಬೆಂಗಳೂರು ಕಂಬಳ ಸಮಿತಿ, ಕಂಬಳಕ್ಕೆ ಬರಲ್ಲ ಬ್ರಿಜ್ ಭೂಷಣ್, ಇನ್ವಿಟೇಷನ್ ಕೂಡ ಬದಲಾವಣೆ !!

11:07 AM Nov 22, 2023 IST | ಹೊಸ ಕನ್ನಡ
UpdateAt: 11:07 AM Nov 22, 2023 IST
bengaluru kambala  ಜನಾಕ್ರೋಶಕ್ಕೆ ಮಣಿದ ಬೆಂಗಳೂರು ಕಂಬಳ ಸಮಿತಿ  ಕಂಬಳಕ್ಕೆ ಬರಲ್ಲ ಬ್ರಿಜ್ ಭೂಷಣ್  ಇನ್ವಿಟೇಷನ್ ಕೂಡ ಬದಲಾವಣೆ
Advertisement

Bengaluru kambala: ಹಲವು ಸಯಮದಿಂದ ನಾಡಿನ ಜನ ಕಾತರದಿಂದ ಕಾಯುತ್ತಿದ್ದ ಬೆಂಗಳೂರು ಕಂಬಳಕ್ಕೆ(Bengaluru kambala) ಕ್ಷಣಗಣನೆ ಶುರುವಾಗಿದೆ. ಮುಂದಿನ ಶನಿವಾರ, ಭಾನುವಾರ ಅರಮನೆ ಮೈದಾನದಲ್ಲಿ ಕರಾವಳಿಯ ಕಂಬಳ ವಿಜೃಂಭಿಸಲಿದೆ. ಈ ನಡುವೆಯೆ ಅತಿಥಿ ವಿಚಾರದಲ್ಲಿ ಕಂಬಳ ಸಮಿತಿಯು ವಿವಾದಕ್ಕೆ ಕಾರಣವಾಗಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಕೊನೆಗೂ ಜನಾಕ್ರೋಶಕ್ಕೆ ಮಣಿದ ಸಮಿತಿಯು ಇದೀಗ ತನ್ನ ನಿರ್ಧಾರವನ್ನು ಕೈ ಬಿಟ್ಟಿದ್ದು ಆಮಂತ್ರಣ ಪತ್ರಿಕೆಯನ್ನೂ ಬದಲಾಯಿಸಲು ಮುಂದಾಗಿದೆ.

Advertisement

ಹೌದು, ಇತಿಹಾಸದಲ್ಲೆ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿರುವ ತುಳುನಾಡಿನ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳಕ್ಕೆ (Bengaluru Kambala 2023) ಅತ್ಯಾಚಾರ ಆರೋಪಿ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ಗೆ (Bhrij Bhushan Sharan Singh) ಆಹ್ವಾನ ನೀಡಿ ಯಡವಟ್ಟು ಮಾಡಿಕೊಂಡ ಕಂಬಳ ಸಮಿತಿಯು ಕೊನೆಗೂ ಎಚ್ಟೆತ್ತುಕೊಂಡಿದೆ. ಇದೀಗ ಪುತ್ತೂರಿನ ಕಾಂಗ್ರೆಸ್ ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ರೈ, ಬ್ರಿಜ್ ಭೂಷಣ್ ಕಾರ್ಯಕ್ರಮಕ್ಕೆ ಬರುವುದಿಲ್ಲ ಜೊತೆಗೆ ಆಮಂತ್ರಣ ಪತ್ರಿಕೆಯನ್ನೂ ಬದಲಾಯಿಸುತ್ತೇವೆ ಎಂದಿದ್ದಾರೆ.

ಅಂದಹಾಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇದು ದೊಡ್ಡ ಕಾರ್ಯಕ್ರಮ ಆಗಿರುವ ಕಾರಣ ಬೇರೆ ಬೇರೆ ಸಂಘಟನೆಯವರು ಬಂದು ಅನೇಕ ಮನವಿ ಮಾಡುತ್ತಾರೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬಂದು ವೇದಿಕೆಗೆ ಅವರ ಹೆಸರನ್ನು ಇಡಲು ಹೇಳುತ್ತಾರೆ. ಸಿದ್ದಿ ಜನಾಂಗದವರು ಬಂದು ಅವರನ್ನು ಆಹ್ವಾನಿಸುವಂತೆ ಕೇಳಿದ್ದರು. ಆದರೆ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಮೊನ್ನೆಯೇ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ. ಪತ್ರಿಕೆಯನ್ನು ಕೂಡ ನಾವು ಬದಲು ಮಾಡುತ್ತೇವೆ ಎಂದು ಹೇಳಿದರು.

Advertisement

ಇನ್ನು ಕಾರ್ಯಕ್ರಮಕ್ಕೆ ಹಲವು ಅತಿಥಿಗಣ್ಯರು, ಸಿನಿಮಾ ತಾರೆಯರು ಭಾಗವಹಿಸುತ್ತಾರೆ. ಇದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್, ಜೆಡಿಎಸ್ ಎಲ್ಲಾ ಶಾಸಕರು ಒಟ್ಟಾಗಿ ಪಾಲ್ಗೊಳ್ಳುತ್ತಾರೆ. ಯಾವ ರಾಜಕೀಯ ಬಣ್ಣ ಇಲ್ಲ. ತುಳುನಾಡ ಸಂಸ್ಕೃತಿ, ಜಾನಪದವನ್ನು ಬಿಂಬಿಸುವ ಆಚರಣೆಯಾಗಲಿದೆ ಎಂದರು.

ಇದನ್ನೂ ಓದಿ; High Court : ಮುರುಘಾ ಶ್ರೀ ಕೇಸ್ ಕುರಿತು ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್ !!

Advertisement
Advertisement
Advertisement