For the best experience, open
https://m.hosakannada.com
on your mobile browser.
Advertisement

Bengaluru Kambala: 'ಬೆಂಗಳೂರು ಕಂಬಳ' ಆಯೋಜಕರ ವಿರುದ್ಧು ದೂರು ದಾಖಲು ಪ್ರಕರಣ - ಸಂಘಟಕರು ಪಾವತಿಸಿದ ದಂಡವೆಷ್ಟು ?!

12:21 PM Dec 02, 2023 IST | ಹೊಸ ಕನ್ನಡ
UpdateAt: 12:21 PM Dec 02, 2023 IST
bengaluru kambala   ಬೆಂಗಳೂರು ಕಂಬಳ  ಆಯೋಜಕರ ವಿರುದ್ಧು ದೂರು ದಾಖಲು ಪ್ರಕರಣ   ಸಂಘಟಕರು ಪಾವತಿಸಿದ ದಂಡವೆಷ್ಟು
Advertisement

Bengaluru Kambala 2023: ಇತಿಹಾಸ ಪುಟಗಳಲ್ಲಿ ದಾಖಲಾದ ಬೆಂಗಳೂರು ಕಂಬಳ(Bengaluru kambala 2023)ಆಯೋಜಕರ ವಿರುದ್ಧ ದೂರು ದಾಖಲಾಗಿದ್ದು, ಎಲ್ಲರಿಗೂ ತಿಳಿದೇ ಇದೆ. ಈ ದೂರಿನನ್ವಯ ಕಂಬಳ ಆಯೋಜಕರು ಪಾವತಿಸಿದ ದಂಡವೆಷ್ಟು ಗೊತ್ತಾ?! ಇಲ್ಲಿದೆ ನೋಡಿ ಡೀಟೇಲ್ಸ್

Advertisement

ಹೌದು, ಅನುಮತಿ ಪಡೆಯದೇ ಬೆಂಗಳೂರು ಕಂಬಳದ ಬ್ಯಾನರ್, ಫ್ಲೆಕ್ಸ್​ ಅವಳಡಿಸಿದ್ದಕ್ಕೆ ಬಿಬಿಎಂಪಿ ವಾರ್ಡ್ ನ ಕಂದಾಯ ನಿರೀಕ್ಷಕ ನೀಡಿದ ದೂರಿನ ಮೇರೆಗೆ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ಕಂಬಳ ಆಯೋಜಕರ ವಿರುದ್ಧ ದೂರು ದಾಖಲಾಗಿತ್ತು. ಹೀಗಾಗಿ ಅನುಮತಿ ಪಡೆಯದೆ ಬ್ಯಾನರ್ ಅಳವಡಿಸಿದ್ದಕ್ಕೆ ಬಿಬಿಎಂಪಿ ಕಂಬಳ ಸಂಘಟಕರಿಗೆ ದಂಡ ವಿಧಿಸಿದ್ದು, 50,000 ರೂ. ಹಣ ಪಾವತಿ ಮಾಡಲು ತಿಳಿಸಿದೆ.

ಅಂದಹಾಗೆ ಕಳೆದ ನವೆಂಬರ್ 25 ರಂದು ಸಂಘಟಕರಿಗೆ 50,000 ರೂ ದಂಡವನ್ನು ವಿಧಿಸಲಾಗಿದೆ. ಅವರು ಬಿಬಿಎಂಪಿ ಮುಖ್ಯ ಆಯುಕ್ತರ ಬ್ಯಾಂಕ್ ಖಾತೆಗೆ ಪಾವತಿಸಬೇಕು ಎಂದು ಅರಮನೆ ನಗರ ವಾರ್ಡ್ ಅಧಿಕಾರಿಗಳು ಹೇಳಿದ್ದಾರೆ.

Advertisement

ಇದನ್ನೂ ಓದಿ: KSRTC: ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಡಿಸೆಂಬರ್ ನಲ್ಲಿ ಎದುರಾಯ್ತು ಹೊಸ ಸಂಕಷ್ಟ- ಇದು ಸರ್ಕಾರ ತಂದ ಹೊಸ ರೂಲ್ಸ್'ನ ಅವಾಂತರ !!

Advertisement
Advertisement
Advertisement