For the best experience, open
https://m.hosakannada.com
on your mobile browser.
Advertisement

Farmers Subsidy: ಕೇಂದ್ರದಿಂದ ರೈತರಿಗೆ ಸಹಾಯ ಧನ ಘೋಷಣೆ- ತಕ್ಷಣ ಹೀಗೆ ಅರ್ಜಿ ಸಲ್ಲಿಸಿ

03:44 PM Nov 18, 2023 IST | ಕಾವ್ಯ ವಾಣಿ
UpdateAt: 11:08 PM Nov 18, 2023 IST
farmers subsidy  ಕೇಂದ್ರದಿಂದ ರೈತರಿಗೆ ಸಹಾಯ ಧನ ಘೋಷಣೆ  ತಕ್ಷಣ ಹೀಗೆ ಅರ್ಜಿ ಸಲ್ಲಿಸಿ
Advertisement

Farmers Subsidy: ಕೇಂದ್ರ ಸರ್ಕಾರವು ರೈತರಿಗೆ ಸಹಾಯಧನ (Farmers Subsidy) ನೀಡುವ ಸಲುವಾಗಿ ಕಲಬುರಗಿ ಹಾಗೂ ಕಮಲಾಪುರ ತಾಲೂಕುಗಳ ರೈತರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. ಹೌದು, ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮೂಲಕ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಮಿತ ಬಳಕೆಗಾಗಿ ಹನಿ ನೀರಾವರಿ ಅಳವಡಿಸಲು ಹಾಗೂ ಎನ್‌ಹೆಚ್‌ಎಮ್ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ, ಪ್ಲಾಸ್ಟಿಕ್ ಮಲ್ಚಿಂಗ್ ಹಾಗೂ ಈರುಳ್ಳಿ ಶೇಖರಣ ಘಟಕ ಮತ್ತು ಎಂ.ಜಿ.ಎನ್.ಆರ್.ಇ.ಜಿ.ಎ. ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆಗಾಗಿ 2023-24ನೇ ಸಾಲಿಗೆ ಕಲಬುರಗಿ ಹಾಗೂ ಕಮಲಾಪುರ ತಾಲೂಕುಗಳ ರೈತರಿಗೆ ಸಹಾಯಧನ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿಪಂ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Advertisement

ಮುಖ್ಯವಾಗಿ ಸಾಮಾನ್ಯ ವರ್ಗದ ರೈತರಿಗೆ ಶೇ.75 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನ ನಿಗದಿಪಡಿಸಿದ್ದು, ಇಲಾಖೆಯಿಂದ ಕಂಪನಿಗಳನ್ನು ಅನುಮೋದಿಸಲಾಗಿದೆ. ಸದ್ಯ ಅನುಮೋದಿತ ಕಂಪನಿಯವರಿಂದ ಆಸಕ್ತ ರೈತರು ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಹಾಗೂ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ, ಪ್ಲಾಸ್ಟಿಕ್ ಮಲ್ಚಿಂಗ್ ಹಾಗೂ ಈರುಳ್ಳಿ ಶೇಖರಣ ಘಟಕ ನಿರ್ಮಿಸಿಕೊಳ್ಳಲು ತಿಳಿಸಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ರೈತರು ಸಂಬಂಧಪಟ್ಟ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಈ ಕೆಳಗಿನ ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ:
ಕಲಬುರಗಿ - 900810303,
ಪಟ್ಟಣ- 9164835917, ಫರಹತಾಬಾದ- 9686214111, ಅವರಾದ (ಬಿ) - 6366591631, ಮಹಾಗಾಂವ - 9738416930,
ಕಮಲಾಪುರ - 7259866723.

Advertisement

ಇದನ್ನು ಓದಿ: Indian Railways Recruitment 2023: ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ- ರೈಲ್ವೆ ಇಲಾಖೆಯಲ್ಲಿ 1,664 ಹುದ್ದೆಗಳಿಗೆ ಅರ್ಜಿ ಆಹ್ವಾನ !!

Advertisement
Advertisement
Advertisement