For the best experience, open
https://m.hosakannada.com
on your mobile browser.
Advertisement

HSRP ನಂಬರ್‌ ಪ್ಲೇಟ್‌ ದರ ಎಷ್ಟು ಗೊತ್ತೇ?

06:22 PM Feb 12, 2024 IST | ಹೊಸ ಕನ್ನಡ
UpdateAt: 06:22 PM Feb 12, 2024 IST
hsrp ನಂಬರ್‌ ಪ್ಲೇಟ್‌ ದರ ಎಷ್ಟು ಗೊತ್ತೇ
Advertisement

HSRP Number Plate: HSRP ಪ್ಲೇಟ್ ಹಾಕಿಸಲು ಇನ್ನು ಕೇವಲ ಐದು ದಿನಗಳು ಡೆಡ್ ಲೈನ್ ಮಾತ್ರ ಉಳಿದಿದೆ. ಇನ್ನೂ ಒಂದು ಕೋಟಿಗೂ ಅಧಿಕ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಬೇಕಿದೆ. ಹೀಗಾಗಿ ಮತ್ತೊಂದು ಬಾರಿ ಡೆಡ್‌ಲೈನ್‌ವಿಸ್ತರಿಸುವಂತೆ ವಾಹನ ಸವಾರರು ಸಾರಿಗೆ ಇಲಾಖೆಗೆ ಮನವಿ ಮಾಡುತ್ತಿದ್ದಾರೆ. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಲು ವಾಹನ ಸವಾರರು ಪರದಾಡುತ್ತಿದ್ದಾರೆ. 2019ರ ಏ. 1ಕ್ಕೂ ಮುನ್ನ 2 ಕೋಟಿ ವಾಹನಗಳು ನೋಂದಣಿಯಾಗಿವೆ. ಗಡುವು ವಿಸ್ತರಿಸಿದರೂ ಈವರೆಗೆ ಕೇವಲ 12 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಹಾಕಲಾಗಿದೆ. ಇನ್ನೂ 1.88 ಕೋಟಿ ವಾಹನಗಳು ಬಾಕಿ ಇದೆ. ಇದರ ಜೊತೆಗೆ ನಂಬರ್‌ ಪ್ಲೇಟ್‌ ಬದಲಿಸದೇ ಇದ್ದರೆ ಭಾರೀ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.

Advertisement

HSRP ನಂಬರ್‌ ಪ್ಲೇಟ್‌ ಶುಲ್ಕ ಎಷ್ಟು? ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಲು ದ್ವಿಚಕ್ರ ವಾಹನಗಳ ದರ 400 ರೂನಿಂದ 600 ರೂ ವರೆಗೆ ಇದೆ. ನಾಲ್ಕು ಚಕ್ರದ ವಾಹನಗಳಿಗೆ ಜೋಡಿ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಶುಲ್ಕವು 650 ರೂಪಾಯಿನಿಂದ 800 ರೂಪಾಯಿ ವರೆಗೂ ಇರಲಿದೆ ಎನ್ನಲಾಗಿದೆ. ವಾಹನ ಮಾಲೀಕರು ಅಧಿಕೃತ www.siam.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ, ಅಲ್ಲಿ ಬುಕ್‌ ಎಚ್‌ಎಸ್‌ಆರ್‌ಪಿ ಎಂಬ ಆಯ್ಕೆ ಕ್ಲಿಕ್ ಮಾಡಿ ವಿವರಗಳನ್ನು ದಾಖಲಿಸಿ ನಂಬರ್‌ ಪ್ಲೇಟ್‌ ಅನ್ನು ಸುಲಭವಾಗಿ ಪಡೆಯಬಹುದಾಗಿದೆ.

ಎಚ್‌ಎಸ್‌ಆರ್‌ಪಿ ಅಳವಡಿಲು ಅನುಸರಿಸಬೇಕಾದ ಕ್ರಮ ಏನು
https://transport.karnataka.gov.in ಅಥವಾ www.siam.in ವೆಬ್‌ ಸೈಟ್‌ಗೆ ಭೇಟಿ ನೀಡಿ Book HSRP & ಕ್ಲಿಕ್ ಮಾಡಿ.
ನಿಮ್ಮ ವಾಹನ ತಯಾರಕರು ಯಾರು ಎಂದು ಆಯ್ಕೆಮಾಡಿ.
ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲ‌ರ್ ಸ್ಥಳವನ್ನು ಆಯ್ಕೆಮಾಡಿ.
HSRP ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಿ. ಗಮನಿಸಿ: ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ. ಬರುತ್ತದೆ.
ನಿಮ್ಮ ಅನುಕೂಲಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
ವಾಹನ ಮಾಲೀಕರ ಕಚೇರಿ ಆವರಣ / ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ ಮಾಡಬಹುದು.
ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.

Advertisement

Advertisement
Advertisement
Advertisement