For the best experience, open
https://m.hosakannada.com
on your mobile browser.
Advertisement

Fact Check Unit: ಸರ್ಕಾರದಿಂದ ಸುಳ್ಳು ಸುದ್ದಿ ತಡೆಗಟ್ಟಲು ಮಹತ್ವದ ಹೆಜ್ಜೆ: ಫ್ಯಾಕ್ಟ್ ಚೆಕ್ ಯುನಿಟ್ ಪ್ರಾರಂಭ!

11:25 AM Nov 20, 2023 IST | ಅಶ್ವಿನಿ ಹೆಬ್ಬಾರ್
UpdateAt: 11:33 AM Nov 20, 2023 IST
fact check unit   ಸರ್ಕಾರದಿಂದ ಸುಳ್ಳು ಸುದ್ದಿ ತಡೆಗಟ್ಟಲು ಮಹತ್ವದ ಹೆಜ್ಜೆ   ಫ್ಯಾಕ್ಟ್ ಚೆಕ್ ಯುನಿಟ್ ಪ್ರಾರಂಭ
Advertisement

Fact Check Unit: ರಾಜ್ಯ ಸರ್ಕಾರ (Karnataka Government) ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಮಾಹಿತಿ ಅಸ್ವಸ್ಥತೆ ನಿಭಾಯಿಸುವ ಘಟಕವನ್ನು (Information Disorder Tackling Unit) ಸ್ಥಾಪಿಸಲು ತೀರ್ಮಾನ ಕೈಗೊಂಡಿದೆ.

Advertisement

ಈ ಘಟಕಕ್ಕೆ ಕಂಪನಿಗಳ ನೋಂದಣಿ ಮಾಡುವ ಸಲುವಾಗಿ ಸರ್ಕಾರ ಟೆಂಡರ್ ಕರೆದಿದ್ದು, ಇದೀಗ ಏಳು ಕಂಪನಿಗಳು ನೊಂದಾಯಿಸಿಕೊಂಡಿದೆ. ಇದರಲ್ಲಿ ಐದು ಕಂಪನಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದ್ದು, ಇಲಾಖೆಯು ಕಂಪನಿಗಳ ಕುರಿತು ಪರಿಶೀಲನೆ ನಡೆಸಿ ಕಂಪನಿಗಳ ಹೆಸರುಗಳನ್ನು ಬಹಿರಂಗಪಡಿಸಲಾಗುವ ಕುರಿತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. ಈ ಐದು ಕಂಪನಿಗಳೇ ಅಂತಿಮವಾಗುವ ಸಾಧ್ಯತೆಯಿದೆ. ಈ ಕಂಪನಿಗಳು ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ ಮತ್ತು ನಕಲಿ ಸುದ್ದಿಗಳನ್ನು ತಡೆಯುವ ಮತ್ತು ಫ್ಯಾಕ್ಟ್ ಚೆಕ್ನಲ್ಲಿ ಹೆಚ್ಚಿನ ಅನುಭವ ಹೊಂದಿದೆ ಎನ್ನಲಾಗಿದೆ.

ಸರ್ಕಾರದ ಶಾರ್ಟ್ಲಿಸ್ಟ್ನಲ್ಲಿರುವ ಕಂಪನಿಗಳು ಮತ್ತು ವ್ಯಕ್ತಿಗಳನ್ನು ಮೂರು ಪ್ರಮುಖ ಕ್ಷೇತ್ರಗಳಾಗಿ ವಿಂಗಡಿಸಲಾಗುತ್ತದೆ. ಇದಕ್ಕೆ ನೋಂದಾಯಿಸಿಕೊಳ್ಳುವ ಕಂಪನಿಗಳು ಭಾರತೀಯ ಮೂಲದವುಗಳಾಗಿದ್ದು, ಆಗಸ್ಟ್ 31, 2023 ರಂತೆ ಫ್ಯಾಕ್ಟ್‌ಚೆಕಿಂಗ್ ಸೇವೆಗಳು ಇಲ್ಲವೇ ಇದೆ ರೀತಿಯ ಚಟುವಟಿಕೆಗಳಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವವನ್ನು ಒಳಗೊಂಡಿರಬೇಕು. ಈ ರೀತಿ ವಿಶ್ವಾಸಾರ್ಹ ಕೆಲಸ ಮಾಡಿದ ಕಂಪನಿಯನ್ನು ಸರ್ಕಾರ ಗುರುತಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Advertisement

ಇದನ್ನು ಓದಿ: Crime News: ಮತ್ತೊಂದು ಸೂಟ್‌ಕೇಸ್‌ ಕೃತ್ಯ ಬಯಲು ! ಬೀದಿ ಬದಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ !

Advertisement
Advertisement
Advertisement