K.S.Eshwarappa: ಬಿಜೆಪಿ ಪಕ್ಷದಿಂದ ಕೆ.ಎಸ್.ಈಶ್ವರಪ್ಪ 6 ವರ್ಷ ಉಚ್ಛಾಟನೆ
K S Eshwarappa: 6 ವರ್ಷಗಳಕಾಲ ಕೆ.ಎಸ್ ಈಶ್ವರಪ್ಪ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಕೆ.ಎಸ್ ಈಶ್ವರಪ್ಪ ಅವರು ಬಂಡಾಯ ಸ್ಪರ್ಧಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.
ಈಶ್ವರಪ್ಪ ನಾಮಪತ್ರ ಹಿಂಪಡೆಯದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಆರು ವರ್ಷಗಳ ಕಾಲ ಪಕ್ಷದಿಂದಲೇ ಬ್ಯಾನ್ ಮಾಡಿದೆ.
"ಪಕ್ಷದ ಸೂಚನೆಯಯ ಕಡೆಗಣಿಸಿ ಪ್ರಸಕ್ತ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ" ಎಂದು ಹೇಳಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಯಜೇಂದ್ರ ಮನವಿ ಮಾಡಿದ್ದರೂ, ಈಶ್ವರಪ್ಪ ಅವರು ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಈಶ್ವರಪ್ಪ ಅವರ ಮನವೊಲಿಕೆಗೆ ಕೇಂದ್ರ ನಾಯಕರ ತಂಡ, ರಾಜ್ಯ ನಾಯಕರು, ಸ್ಥಳೀಯರ ಮುಖಂಡರು ಪ್ರಯತ್ನ ಮಾಡಿದ್ದರು. ಆದರೂ ಈಶ್ವರಪ್ಪ ಅವರು ತಮ್ಮ ಅಸಮಾಧಾನ ಹೊರಹಾಕಿ, ಯಾರ ಮಾತಿಗೂ ಒಪ್ಪಲಿಲ್ಲ.
ಇದನ್ನೂ ಓದಿ: Yadgiri: ನೇಹಾ ಹತ್ಯೆ ಬಳಿಕ ಫಯಾಜ್ ಅಂಡ್ ಗ್ಯಾಂಗ್ ನಿಂದ ಹಿಂದೂ ಯುವಕನ ಬರ್ಬರ ಹತ್ಯೆ !!