For the best experience, open
https://m.hosakannada.com
on your mobile browser.
Advertisement

K S Eshwarappa: ಶಿವಮೊಗ್ಗದಿಂದ ಸ್ಪರ್ಧೆ ಕುರಿತು ಮತ್ತೊಂದು ಬಿಗ್ ಅಪ್ಡೇಟ್ ಕೊಟ್ಟ ಈಶ್ವರಪ್ಪ - ಬಿಜೆಪಿ ನಾಯಕರಿಗೆ ಮತ್ತೊಂದು ಎಚ್ಚರಿಕೆ ರವಾನೆ.

08:46 AM Mar 20, 2024 IST | ಹೊಸ ಕನ್ನಡ
UpdateAt: 09:38 AM Mar 20, 2024 IST
k s eshwarappa  ಶಿವಮೊಗ್ಗದಿಂದ ಸ್ಪರ್ಧೆ ಕುರಿತು ಮತ್ತೊಂದು ಬಿಗ್ ಅಪ್ಡೇಟ್ ಕೊಟ್ಟ ಈಶ್ವರಪ್ಪ   ಬಿಜೆಪಿ ನಾಯಕರಿಗೆ ಮತ್ತೊಂದು ಎಚ್ಚರಿಕೆ ರವಾನೆ
Advertisement

K S Eshwarappa: ತಮ್ಮ ಮಗ ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪನವರು(KS Eshwarappa) ಶಿವಮೊಗ್ಗದಿಂದ ಪಕ್ಷೇತರ ಸ್ಪರ್ಧೆಗಿಳಿಯುತ್ತೇನೆಂದು ಮುಂದಾಗಿದ್ದು, ಇದೀಗ ಈ ಬಗ್ಗೆ ಈಶ್ವರಪ್ಪನವರು ಬಿಗ್ ಅಪ್ಡೇಟ್ ನೀಡಿದ್ದಾರೆ.

Advertisement

ಇದನ್ನೂ ಓದಿ: Congress Manifesto: ಲೋಕ ಸಮರಕ್ಕೆ ಕಾಂಗ್ರೆಸ್‌ನಿಂದ "5 'ನ್ಯಾಯ' ಮತ್ತು 25 'ಗ್ಯಾರಂಟಿ' ಘೋಷಣೆ"!!! ಮತದಾರರನ್ನು ಓಲೈಸಲು ಹೊಸ ಮಂತ್ರ

ಹೌದು, ಮನವೊಲಿಕೆಗೆ ಯಾರೇ ಬಂದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸುವ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ, ಸ್ಪರ್ಧೆ ಮಾಡುವುದು ಅಚಲ. ಈ ಬಗ್ಗೆ ಬಿಜೆಪಿ ಮುಖಂಡರು ವಿಫಲ ಪ್ರಯತ್ನ ನಡೆಸುವುದನ್ನು ನಿಲ್ಲಿಸಲಿ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಇದನ್ನೂ ಓದಿ: BJP-JDS: ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆ ಬಿರುಕು, ಕುಮಾರಸ್ವಾಮಿಯಿಂದ ಅಚ್ಚರಿ ಹೇಳಿಕೆ!!

ಅಂದಹಾಗೆ ತಾಲೂಕಿನ ಜಡೆ ಮಠಕ್ಕೆ ಭೇಟಿ ನೀಡಿ ಡಾ. ಮಹಾಂತ ಸ್ವಾಮಿಗಳ ಆಶೀರ್ವಾದ ಪಡೆದು ಮಾತನಾಡಿದ ಅವರು, ನಾನು ನನ್ನ ಪುತ್ರನಿಗಾಗಿ ಸ್ಪರ್ಧಿಸುತ್ತಿಲ್ಲ. ಪಕ್ಷ ಸರಿಪಡಿಸಲು ಈ ಸ್ಪರ್ಧೆ. ಈಗ ನನ್ನ ಪುತ್ರ ಕಾಂತೇಶ್ ಗೆ ಹಾವೇರಿಯಿಂದ ಟಿಕೆಟ್‌ ನೀಡುತ್ತೇನೆ ಎಂದರೂ ಅದು ಬೇಕಾಗಿಲ್ಲ ಬಿಜೆಪಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದವರ ಸ್ವತ್ತಲ್ಲ. ನಾನೂ ಕೂಡ ಪಕ್ಷಕ್ಕಾಗಿ ದುಡಿದಿದ್ದೇನೆ. ಇಡೀ ಪಕ್ಷವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರ ನಡೆಸಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಿವಮೊಗ್ಗ ಲೋಕಸಭಾ ಚುನಾವಣೆ ಪಾಠ ಕಲಿಸುತ್ತದೆ ಎಂದು ಹೇಳಿದ್ದಾರೆ.

Advertisement
Advertisement
Advertisement