ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Court Judge Suicide: ಪತ್ನಿಯ ಜೊತೆ ಜಗಳ; ಆತ್ಮಹತ್ಯೆ ಮಾಡಿಕೊಂಡ ನ್ಯಾಯಾಧೀಶ

Court Judge Suicide: ಕೌಟುಂಬಿಕ ಕಲಹದಿಂದ ನ್ಯಾಯಾಲಯದ ನ್ಯಾಯಾಧೀಶರು ನೇಣು ಬಿಗಿದಿದ್ದಾರೆ. ಈ ಘಟನೆ ನಡೆದಿರುವುದು ಹೈದಾರಾಬಾದ್‌ನ ನಾಂಪಲ್ಲಿಯಲ್ಲಿ. 
12:51 PM Mar 25, 2024 IST | ಸುದರ್ಶನ್
UpdateAt: 12:56 PM Mar 25, 2024 IST

Court Judge Suicide: ನ್ಯಾಯಾಧೀಶರೊಬ್ಬರು ತಮ್ಮ ಸ್ವಂತ ಜೀವನದ ಪ್ರಮುಖ ಸಮಸ್ಯೆಯಿಂದಾಗಿ ಕ್ಷುಲ್ಲಕ ಜಗಳಕ್ಕೆ ನಿನ್ನೆ ಭಾನುವಾರ (ಮಾ.24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೌದು, ಕೌಟುಂಬಿಕ ಕಲಹದಿಂದ ನ್ಯಾಯಾಲಯದ ನ್ಯಾಯಾಧೀಶರು ನೇಣು ಬಿಗಿದಿದ್ದಾರೆ. ಈ ಘಟನೆ ನಡೆದಿರುವುದು ಹೈದಾರಾಬಾದ್‌ನ ನಾಂಪಲ್ಲಿಯಲ್ಲಿ.

Advertisement

ಇದನ್ನು ಓದಿ: Shimoga: ರಸ್ತೆ ದಾಟುವ ಸಂದರ್ಭ ಅಪಘಾತ; ಪರೀಕ್ಷೆ ಬರೆಯಬೇಕಾಗಿದ್ದ SSLC ವಿದ್ಯಾರ್ಥಿನಿ ಸಾವು

ಮಣಿಕಂಠ(36) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು. ಇವರು ನಾಂಪಲ್ಲಿ ನ್ಯಾಯಾಲಯದಲ್ಲಿ ಜುಡಿಷಿಯಲ್‌ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ (ಅಬಕಾರಿ) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಏಳು ವರ್ಷಗಳ ಹಿಂದೆ ಮಹೆಬೂಬ್‌ ನಗರ ಜಿಲ್ಲೆಯ ಭೂತ್‌ಪುರ ಮಂಡಲ ಕೇಂದ್ರದ ಲಲಿತಾ ಅವರನ್ನು ಇವರು ಮದುವೆಯಾಗಿದ್ದು, ಈ ದಂಪತಿಗೆ ಓರ್ವ ಮಗನಿದ್ದಾನೆ.

Advertisement

ಇದನ್ನೂ ಓದಿ: Parliment Election: ಟಿಕೆಟ್ ಮಿಸ್ ಆಗಿದ್ದಕ್ಕೆ ತಮಿಳುನಾಡು ಸಂಸದ ವಿಷ ಕುಡಿದು ಆತ್ಮಹತ್ಯೆಗೆ ಯತ್ನ!!

ಆದರೆ ಅದೇನಾಯ್ತೋ ಇವರಿಬ್ಬರ ಮಧ್ಯೆ ಎರಡು ವರ್ಷದಿಂದ ನಿರಂತರ ಜಗಳ. ಹಾಗಾಗಿ ಇಬ್ಬರೂ ಬೇರೆ ಬೇರೆ ವಾಸ ಮಾಡುತ್ತಿದ್ದರು. ಮಣಿಕಂಠ ತನ್ನ ಫ್ಲ್ಯಾಟ್‌ನಲ್ಲಿ ವಾಸಮಾಡುತ್ತಿದ್ದ. ಮಣಿಕಂಠನ ತಾಯಿ ಅನಾರೋಗ್ಯದ ಕಾರಣ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದು, ತಂದೆ ಆಸ್ಪತ್ರೆಯಲ್ಲಿಯೇ ಉಳಿದು ತಾಯಿಯನ್ನು ನೋಡಿಕೊಳ್ಳುತ್ತಿದ್ದರು. ಮಣಿಕಂಠ ತನ್ನ ಪತ್ನಿಗೆ ಭಾನುವಾರ ಕರೆ ಮಾಡಿ ಜಗಳ ಮಾಡಿದ್ದು, ಅನಂತರ ಈ ದುಡುಕಿನ ನಿರ್ಧಾರ ತಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement
Advertisement
Next Article