For the best experience, open
https://m.hosakannada.com
on your mobile browser.
Advertisement

JEE Mains 2 Result: ಜೆಇಇ ಮೈನ್ಸ್ 2 ಫಲಿತಾಂಶ ಪ್ರಕಟ, JEE ಅಡ್ವಾನ್ಸ್ಡ್ ಬರೆಯಲು ಕಟ್ ಆಫ್ ಮಾರ್ಕ್ ಚೆಕ್ ಮಾಡಲು ಇಲ್ಲಿದೆ ಲಿಂಕ್ !

JEE Mains 2 Result: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ರಾತ್ರಿ ಪ್ರಕಟಿಸಿದೆ. ನಿನ್ನೆ ಮಧ್ಯರಾತ್ರಿ 12 ಗಂಟೆಯ ಸಮಯಕ್ಕೆ JEE Mains Result ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ.
09:02 AM Apr 25, 2024 IST | ಸುದರ್ಶನ್
UpdateAt: 09:42 AM Apr 25, 2024 IST
jee mains 2 result  ಜೆಇಇ ಮೈನ್ಸ್ 2 ಫಲಿತಾಂಶ ಪ್ರಕಟ  jee ಅಡ್ವಾನ್ಸ್ಡ್ ಬರೆಯಲು ಕಟ್ ಆಫ್ ಮಾರ್ಕ್ ಚೆಕ್ ಮಾಡಲು ಇಲ್ಲಿದೆ ಲಿಂಕ್
Advertisement

JEE Mains 2 Result: ಹೊಸದಿಲ್ಲಿ: ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ-ಮೇನ್‌ನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ದಾಖಲೆಯ ಒಟ್ಟು 56 ಅಭ್ಯರ್ಥಿಗಳು 100 ಎನ್‌ಟಿಎ ಅಂಕಗಳನ್ನು ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ರಾತ್ರಿ ಪ್ರಕಟಿಸಿದೆ. ನಿನ್ನೆ ಮಧ್ಯರಾತ್ರಿ 12 ಗಂಟೆಯ ಸಮಯಕ್ಕೆ JEE Mains Result ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ.

Advertisement

ಇದನ್ನೂ ಓದಿ:  Kundapura: ಬಡಗುತಿಟ್ಟಿನ ಯಕ್ಷಗಾನ ಭಾಗವತ ಶ್ರೇಷ್ಠ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಆ ಮೂಲಕ ದೇಶದಲ್ಲಿರುವ 23 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (ಐಐಟಿ) ಪ್ರವೇಶಕ್ಕಾಗಿ ಜೆಇಇ (ಅಡ್ವಾನ್ಸ್‌ಡ್) ಅರ್ಹತಾ ಶೇಕಡಾವಾರು ಸ್ಲಾಬ್ ಐದು ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಜನವರಿಯಲ್ಲಿ ನಡೆದ ಜೆಇಇ (ಮುಖ್ಯ 1) ಪರೀಕ್ಷೆಯಲ್ಲಿ ಒಟ್ಟು 23 ಅಭ್ಯರ್ಥಿಗಳು 100 ಎನ್‌ಟಿಎ ಸ್ಕೋರ್ ಗಳಿಸಿದರೆ, ಏಪ್ರಿಲ್ ನಲ್ಲಿ ಬರೋಬ್ಬರಿ 33 ಅಭ್ಯರ್ಥಿಗಳು ಅದನ್ನು ಸಾಧಿಸಿದ್ದಾರೆ. ಒಟ್ಟು 56 ಟಾಪರ್‌ಗಳಲ್ಲಿ ಜನರಲ್ ವರ್ಗದಿಂದ 40, OBC ವರ್ಗದಿಂದ 10 ಮತ್ತು gen-EWS ವರ್ಗದಿಂದ 6 ಮಂದಿ ಸೇರಿದ್ದಾರೆ. SC ಮತ್ತು ST ವರ್ಗಗಳ ಯಾವುದೇ ಅಭ್ಯರ್ಥಿಯು ಕೂಡಾ ಈ ವರ್ಷ 100 NTA ಸ್ಕೋರ್ ಪಡೆಯಲು ಸಾಧ್ಯವಾಗಿಲ್ಲ.

Advertisement

ಇದನ್ನೂ ಓದಿ:  Acid Attack: ವರನ ಮೇಲೆ ಮದುವೆ ಮೆರವಣಿಗೆಯಲ್ಲೇ ಆಸಿಡ್‌ ಎರಚಿದ ಪ್ರಿಯತಮೆ

ಈ ವರ್ಷ, 2,50,284 ಅಭ್ಯರ್ಥಿಗಳು JEE (ಅಡ್ವಾನ್ಸ್ಡ್) ಬರೆಯಲು ಅರ್ಹತೆ ಪಡೆದಿದ್ದಾರೆ, ಗರಿಷ್ಠ ಸಂಖ್ಯೆಯ ಯಶಸ್ವಿ ಅಭ್ಯರ್ಥಿಗಳು ಉತ್ತರ ಪ್ರದೇಶದಿಂದ ಬಂದಿದ್ದಾರೆ, ನಂತರ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದಿಂದ ಪ್ರತಿನಿಧಿಸುತ್ತಿದ್ದಾರೆ. ಒಟ್ಟು 14.1 ಲಕ್ಷ ಅಭ್ಯರ್ಥಿಗಳಲ್ಲಿ ಸುಮಾರು 96% ಆಕಾಂಕ್ಷಿಗಳು ಕೇಂದ್ರೀಯ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಪ್ರವೇಶಕ್ಕಾಗಿ ಪರೀಕ್ಷೆಯನ್ನು JEE MAIN ಪರೀಕ್ಷೆ ತೆಗೆದುಕೊಂಡಿದ್ದು, JEE (ಅಡ್ವಾನ್ಸ್ಡ್) ಗೆ ಹಾಜರಾಗಲು ಇದು ಅರ್ಹತಾ ಪರೀಕ್ಷೆ ಆಗಲಿದೆ. ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (NIT) ಸುಮಾರು 24,000 ಸೀಟುಗಳಿದ್ದು, ಅವುಗಳನ್ನು ಪಡೆಯಲು ಈ ಹೋರಾಟ.

NTA ನಡೆಸಿದ ಜೆಎ ಮೈನ್ಸ್ ಪರೀಕ್ಷೆಯ ಮಾರ್ಕುಗಳನ್ನು ಪರೀಕ್ಷಾರ್ಥಿಗಳ ಪ್ರತಿ ಸೆಷನ್‌ಗೆ 100 ರಿಂದ 0 ವರೆಗಿನ ಸ್ಕೇಲ್‌ಗೆ ಪರಿವರ್ತಿಸಲಾಗುತ್ತದೆ. ಆ ಮೂಲಕ ಟಾಪರ್ಗಳ ನಿರ್ಧಾರವಾಗುತ್ತದೆ. ಟಾಪ್ ಸ್ಕೋರರ್ ಪಟ್ಟಿಯಲ್ಲಿ ತೆಲಂಗಾಣ ರಾಜ್ಯವು 15 ಅಭ್ಯರ್ಥಿಗಳೊಂದಿಗೆ ಸತತ ಮೂರನೇ ವರ್ಷ ಮುನ್ನಡೆಯಲ್ಲಿದೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ, ತಲಾ ಏಳು ಅಭ್ಯರ್ಥಿಗಳೊಂದಿಗೆ 100 ಪರ್ಸೆಂಟೈಲ್‌ನೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿವೆ. 6 ಆಕಾಂಕ್ಷಿಗಳೊಂದಿಗೆ ದೆಹಲಿ ನಂತರದ ಸ್ಥಾನದಲ್ಲಿದೆ.

ಪರೀಕ್ಷೆಯನ್ನು 13 ಭಾಷೆಗಳಲ್ಲಿ ( ಕನ್ನಡ ಕೂಡಾ ಸೇರಿದಂತೆ, ಅಸ್ಸಾಮಿ, ಬೆಂಗಾಲಿ, ಇಂಗ್ಲಿಷ್, ಗುಜರಾತಿ, ಹಿಂದಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು) , ಒಟ್ಟು 571 ಕೇಂದ್ರಗಳಲ್ಲಿ ನಡೆಸಲಾಯಿತು, ಇದರಲ್ಲಿ ಭಾರತದ ಹೊರಗಿನ 22 (ಕೇಪ್ ಟೌನ್, ದೋಹಾ, ದುಬೈ, ಮನಾಮ, ಓಸ್ಲೋ, ಸಿಂಗಾಪುರ, ಕೌಲಾಲಂಪುರ್, ಲಾಗೋಸ್/ಅಬುಜಾ, ಜಕಾರ್ತ, ವಿಯೆನ್ನಾ, ಮಾಸ್ಕೋ, ಮತ್ತು ವಾಷಿಂಗ್ಟನ್ D.C ಮುಂತಾದ ಕಡೆಗಳಲ್ಲಿ ಕೂಡಾ ಪರೀಕ್ಷೆ ನಡೆಸಿರುವುದು ವಿಶೇಷ.

ಜೆಇಇ (advanced) ಗಾಗಿ ಅರ್ಹತಾ ಶೇಕಡಾವಾರು ಐದು ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಈ ವರ್ಷ ಸಾಮಾನ್ಯ ವರ್ಗಕ್ಕೆ ಕನಿಷ್ಠ ಕಟ್-ಆಫ್ 93.2 ಆಗಿದ್ದರೆ, 2023 ರಲ್ಲಿ 90.7 ಮತ್ತು 2022 ರಲ್ಲಿ 88.4 ಕಟ್ ಆಪ್ ಆಗಿತ್ತು. ಈ ವರ್ಷ ಸಾಮಾನ್ಯ-EWS ಗೆ ಕಟ್-ಆಫ್ 81.3 ಆಗಿದೆ, ಕಳೆದ ವರ್ಷ 75.6 ಮತ್ತು 2022 ರಲ್ಲಿ 63.1. ಈ ಮೂಲಕ ವರ್ಷಗಳು ಕಳೆದಂತೆ ವಿದ್ಯಾರ್ಥಿಗಳು ಬುದ್ಧಿವಂತರಾಗುತ್ತಿದ್ದಾರೆ ಅನ್ನಬಹುದು.

OBC ವರ್ಗದ ಅರ್ಹತಾ ಶೇಕಡಾವಾರು 2022 ರಲ್ಲಿ 68 ರಿಂದ 79.6 ಮತ್ತು 2023 ರಲ್ಲಿ 73.6 ಗೆ ಏರಿದೆ. ಅರ್ಹತಾ ಸ್ಕೋರ್‌ನಲ್ಲಿ ದೊಡ್ಡ ಜಿಗಿತವು SC ಮತ್ತು ST ವರ್ಗಗಳಿಗೆ ಆಗಿದೆ ಅನ್ನೋದು ಕೂಡಾ ಈ ಸಾರಿಯ ಫಲಿತಾಂಶದ ವಿಶೇಷ.
JEE ರಿಸಲ್ಟ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ : jeemain.nta.ac.in

Advertisement
Advertisement
Advertisement