For the best experience, open
https://m.hosakannada.com
on your mobile browser.
Advertisement

School Holiday: ಜನವರಿ 22ರಂದು ಈ ರಾಜ್ಯಗಳಲ್ಲಿ ಶಾಲೆಗಳಿಗೆ ರಜೆ! ನಿಮ್ಮ ರಾಜ್ಯಕ್ಕೂ ಉಂಟಾ ಚೆಕ್ ಮಾಡಿ!!

10:25 AM Jan 20, 2024 IST | ಅಶ್ವಿನಿ ಹೆಬ್ಬಾರ್
UpdateAt: 10:34 AM Jan 20, 2024 IST
school holiday  ಜನವರಿ 22ರಂದು ಈ ರಾಜ್ಯಗಳಲ್ಲಿ ಶಾಲೆಗಳಿಗೆ ರಜೆ  ನಿಮ್ಮ ರಾಜ್ಯಕ್ಕೂ ಉಂಟಾ ಚೆಕ್ ಮಾಡಿ
Advertisement

School Holiday: ಜನವರಿ 22ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ (Ram Mandir Latest News) ನಡೆಯಲಿರುವ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಇದರ ನಡುವೆ, ಅಯೋಧ್ಯಾ ರಾಮವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆ ಅನೇಕ ಕಡೆಗಳಲ್ಲಿ ಶಾಲೆಗಳಿಗೆ ರಜೆಯನ್ನು (School Holiday)ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಕೇಂದ್ರ ಕಚೇರಿಗಳಿಗೆ ಅರ್ಧ ದಿನ ರಜೆ (Half Day Holiday)ಘೋಷಿಸಿದೆ. ಉತ್ತರ ಪ್ರದೇಶ ಮಾತ್ರವಲ್ಲದೇ ಹಲವು ರಾಜ್ಯಗಳು ರಜೆ ಘೋಷಿಸಿವೆ.

Advertisement

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದ ಹಿನ್ನೆಲೆ ಉತ್ತರ ಪ್ರದೇಶದ ಎಲ್ಲಾ ಶಾಲಾ ಕಾಲೇಜುಗಳಿಗೆ ಜನವರಿ 22 ರಂದು ರಜೆಯನ್ನು ಘೋಷಣೆ ಮಾಡಲಾಗಿದೆ. ಜನವರಿ 22 ರಂದು ಛತ್ತೀಸ್‌ಗಢದ ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ. ಇದರ ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ಅರ್ಧ ದಿನ ರಜೆ ಇರಲಿದೆ. ಅಂದರೆ, ಎಲ್ಲಾ ಸರ್ಕಾರಿ ಕಚೇರಿಗಳು ಮಧ್ಯಾಹ್ನ 2:30 ರವರೆಗೆ ಮುಚ್ಚಿರಲಿದೆ.

ಕೇಂದ್ರ ಸರ್ಕಾರ ಕೇಂದ್ರ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಿದೆ. ದೇಶಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ ಮಧ್ಯಾಹ್ನ 2.30 ರವರೆಗೆ ರಜೆ ಇರುತ್ತದೆ.ಜನವರಿ 22 ರಂದು ಗೋವಾ ಸರ್ಕಾರವು ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ರಜೆ ಘೋಷಿಸಿದೆ. ಮಧ್ಯಪ್ರದೇಶದ ಎಲ್ಲಾ ಶಾಲಾ-ಕಾಲೇಜುಗಳಿಗೆ ಜನವರಿ 22 ರಂದು ರಜೆ ಇರಲಿದೆ.ಅದೇ ರೀತಿ ಸರ್ಕಾರಿ ಕಚೇರಿಗಳಲ್ಲಿ ಜನವರಿ 22 ರಂದು ಅರ್ಧ ದಿನ ರಜೆ ಇರುತ್ತದೆ.

Advertisement

ಉತ್ತರಾಖಂಡ ಸರ್ಕಾರವು ಜನವರಿ 22 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.ಅದೇ ರೀತಿ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನದ ರಜೆ ಘೋಷಿಸಿದ್ದು, ಮಧ್ಯಾಹ್ನ 2.30ರವರೆಗೆ ಸರ್ಕಾರಿ ಕಚೇರಿಗಳು ಮುಚ್ಚಿರುತ್ತವೆ. ರಾಮಮಂದಿರದ ಪ್ರತಿಷ್ಠಾಪನೆ ಹಿನ್ನೆಲೆ ಹರಿಯಾಣ ಸರ್ಕಾರವು ಜನವರಿ 22 ರಂದು ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

ರಾಜಸ್ಥಾನ ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿರುವ ಆದೇಶದ ಮೇರೆಗೆ ಎಲ್ಲಾ ಸರ್ಕಾರಿ ಕಚೇರಿಗಳು ಜನವರಿ 22 ರಂದು ಮಧ್ಯಾಹ್ನ 2 ಗಂಟೆಯವರೆಗೆ ಮುಚ್ಚಲ್ಪಡುತ್ತವೆ. ಇಡೀ ದೇಶವು ಜನವರಿ 22 ರಂದು ರಾಮನ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಆಚರಿಸಲಿರುವ ಹಿನ್ನೆಲೆ ರಾಜ್ಯ ಸರ್ಕಾರದ ಎಲ್ಲಾ ಕಚೇರಿಗಳು ಮತ್ತು ಸಂಸ್ಥೆಗಳು ಮಧ್ಯಾಹ್ನ 2.30 ರವರೆಗೆ ಡ್ಯೂಟಿಗೆ ಭಾಗವಹಿಸಬಹುದು ಎಂದು ಸರ್ಕಾರಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Advertisement
Advertisement
Advertisement