ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

IPL-2024: ಡೆಲ್ಲಿ ಕ್ಯಾಪಿಟಲ್ಸನ್ನು ಬಗ್ಗು ಬಡಿದ KKR : ಫಿಲ್ ಸಾಲ್ಸ್ ಅದ್ಭುತ ಬ್ಯಾಟಿಂಗ್ : ಕೆಕೆಆರ್ ಗೆ 7 ವಿಕೆಟ್‌ಗಳ ಭರ್ಜರಿ ಜಯ

IPL-2024: ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ 7 ವಿಕೆಟ್‌ಗಳಿಂದ ಜಯಗಳಿಸಿದೆ.
02:51 PM Apr 30, 2024 IST | ಸುದರ್ಶನ್
UpdateAt: 02:54 PM Apr 30, 2024 IST
Advertisement

 

Advertisement

IPL-2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತೊಂದು ಅದ್ಭುತ ಗೆಲುವು ಸಾಧಿಸಿದೆ. ಈ ಮೆಗಾ ಈವೆಂಟ್‌ ಭಾಗವಾಗಿ, ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ 7 ವಿಕೆಟ್‌ಗಳಿಂದ ಜಯಗಳಿಸಿದೆ.

ಇದನ್ನೂ ಓದಿ:  Hospital Dress: ಆಸ್ಪತ್ರೆಗಳಲ್ಲಿ ಹಸಿರು ಮತ್ತು ನೀಲಿ ಬಣ್ಣದ ಉಡುಪುಗಳನ್ನು ಮಾತ್ರ ಏಕೆ ಬಳಸುತ್ತಾರೆ ಗೊತ್ತಾ ? : ಇಲ್ಲಿದೆ ನೋಡಿ ಉತ್ತರ

Advertisement

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. 154 ರನ್ ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಕೆಕೆಆರ್ 16.3 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡಿತು. ಓಪನರ್ ಫಿಲ್ ಸಾಲ್ಸ್ ಕೆಕೆಆರ್ ಬ್ಯಾಟ್ಸ್‌ಮನ್‌ಗಳಲ್ಲಿ ವಿಧ್ವಂಸಕ ಪ್ರದರ್ಶನ ನೀಡಿದರು. ಅವರು ಕೇವಲ 33 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 68 ರನ್ ಗಳಿಸಿದರು.

ಇದನ್ನೂ ಓದಿ:  Central Employees : ಕೇಂದ್ರ ಸರ್ಕಾರಿ ನೌಕರರ ಭತ್ಯೆ, ಸಬ್ಸಿಡಿ ಪ್ರಮಾಣ ಭಾರಿ ಏರಿಕೆ !!

ಇವರೊಂದಿಗೆ ನಾಯಕ ಶ್ರೇಯಸ್ ಅಯ್ಯರ್ (33) ಮತ್ತು ವೆಂಕಟೇಶ್ ಅಯ್ಯರ್ (26) ಔಟಾಗದೆ ಪಂದ್ಯವನ್ನು ಮುಗಿಸಿದರು. ದೆಹಲಿ ಬೌಲರ್ಗಗಳಲ್ಲಿ ಅಕ್ಷರ್ ಪಟೇಲ್ ಎರಡು ವಿಕೆಟ್ ಪಡೆದರು.

ದೆಹಲಿ ಬ್ಯಾಟ್ಸ್ ಮನ್ ಗಳಲ್ಲಿ ಟೈಲ್ಯಾಂಡರ್ ಕುಲದೀಪ್ ಯಾದವ್ (35) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಎಲ್ಲಾ ಇತರ ಬ್ಯಾಟರ್ ಗಳು ಈ ಪಂದ್ಯದಲ್ಲಿ ವಿಫಲರಾದರು. ಕೆಕೆಆರ್ ಬೌಲ‌ಗರ್‌ಳಲ್ಲಿ ವರುಣ್ ಚಕ್ರವರ್ತಿ ವೈಭವ್ ಅರೋರಾ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಪಡೆದರು.

ಇವರೊಂದಿಗೆ ಸ್ಟಾರ್ಕ್ ಮತ್ತು ನರೈನ್ ತಲಾ ಒಂದು ವಿಕೆಟ್ ಪಡೆದರು. ಈ ಮಧ್ಯೆ, ಶೆಶೆಆರ್ ಬೌಲರ್ಗಗಳು ಎಕ್ಸ್‌ಟ್ರಾ ರೂಪದಲ್ಲಿ 13 ರನ್‌ಗಳನ್ನು ಒಟ್ಟಿಗೆ ನೀಡಿದರು.

Advertisement
Advertisement