For the best experience, open
https://m.hosakannada.com
on your mobile browser.
Advertisement

Gastrointestinal Disease: ಕರುಳು ಸಂಬಂಧಿ ರೋಗ ತೀವ್ರ ಹೆಚ್ಚಳ: ಆರೋಗ್ಯ ಇಲಾಖೆಯಿಂದ ರಾಜ್ಯದಲ್ಲಿ ವಿಶೇಷ ಕ್ರಮ ಜಾರಿ!

Gastrointestinal Disease: ನೀರು ಕಲುಷಿತಗೊಂಡಿರುವುದು ಮುಂತಾದ ಕಾರಣಗಳಿಂದ ಕರಳು ಬೇನೆ (ಗ್ಯಾಸ್ಟ್ರೋ ಎಂಟರಿಟೈಸ್) ಸೇರಿದಂತೆ ಕರುಳು ಸಂಬಂಧಿ ಖಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ ಎನ್ನಲಾಗುತ್ತಿದೆ.
11:26 AM May 12, 2024 IST | ಸುದರ್ಶನ್
UpdateAt: 11:26 AM May 12, 2024 IST
gastrointestinal disease  ಕರುಳು ಸಂಬಂಧಿ ರೋಗ ತೀವ್ರ ಹೆಚ್ಚಳ  ಆರೋಗ್ಯ ಇಲಾಖೆಯಿಂದ ರಾಜ್ಯದಲ್ಲಿ ವಿಶೇಷ ಕ್ರಮ ಜಾರಿ
Advertisement

Gastrointestinal Disease: ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಕರುಳು ಬೇನೆ, ಟೈಫಾಯಿಡ್‌, ವೈರಲ್‌ ಹೆಪಟೈಟಿಸ್‌ನಂತಹ ಕರುಳು ಸಂಬಂಧಿ ರೋಗಗಳು (Gastrointestinal Disease) ಹೆಚ್ಚುತ್ತಿರುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ವರದಿಯಾಗಿರುವ ಸೋಂಕು ಪ್ರಕರಣಗಳ ವರದಿ ಪ್ರಕಾರ, ಹವಾಮಾನ ಬದಲಾವಣೆ ಮತ್ತು ಇತ್ತೀಚೆಗೆ ಸುರಿದ ಮಳೆಯಿಂದ ನೀರು ಕಲುಷಿತಗೊಂಡಿರುವುದು ಮುಂತಾದ ಕಾರಣಗಳಿಂದ ಕರಳು ಬೇನೆ (ಗ್ಯಾಸ್ಟ್ರೋ ಎಂಟರಿಟೈಸ್) ಸೇರಿದಂತೆ ಕರುಳು ಸಂಬಂಧಿ ಖಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ ಎನ್ನಲಾಗುತ್ತಿದೆ.

Advertisement

ಇದನ್ನೂ ಓದಿ: Red Lipstick Ban: ಕೆಂಪು ಲಿಪ್‌ಸ್ಟಿಕ್ ಬ್ಯಾನ್, ಬಳಸಿದರೆ ಕಠಿಣ ಶಿಕ್ಷೆ !!

ಈಗಾಗಲೇ ಆರೋಗ್ಯ ಇಲಾಖೆಯು ಸೋಂಕು ಪ್ರಕರಣಗಳ ವರದಿ ಪ್ರಕಟಗೊಳಿಸಿದ್ದು, ಏಪ್ರಿಲ್‌ 29 ರಿಂದ ಮೇ 5ರವರೆಗಿನ ಒಂದು ವಾರದ ಅವಧಿಯಲ್ಲಿ ಬರೋಬ್ಬರಿ 4,375 ಮಂದಿಗೆ ಎಡಿಡಿ (ಅಕ್ಯುಟ್‌ ಡಯಾರಿಯಲ್‌ ಡಿಸೀಸ್‌) ಕಾಣಿಸಿಕೊಂಡಿದೆ. ಅಲ್ಲದೇ ಕಳೆದ ನಾಲ್ಕು ತಿಂಗಳಲ್ಲಿ 56,909 ಮಂದಿಗೆ ಇನ್ನಿತರ ಕರುಳಿನ ಸಮಸ್ಯೆ ಕಂಡು ಬಂದಿರುವುದು ವರದಿಯಾಗಿದೆ.

Advertisement

ಇನ್ನು ಸೊಳ್ಳೆಗಳಿಂದ ಹರಡುವ ಡೆಂಘಿ, ಚಿಕೂನ್‌ ಗುನ್ಯಾ ಪ್ರಕರಣಗಳೂ ಶುರುವಾಗಿವೆ. ಜೊತೆಗೆ ಕರುಳುಬೇನೆ ಮತ್ತಿತರ ಕರುಳು ಸಂಬಂಧಿ ಸಮಸ್ಯೆಗಳು ಪ್ರಮುಖವಾಗಿ ಕಲುಷಿತ ನೀರಿನಿಂದ, ಇಲ್ಲವೇ ಆಹಾರದಿಂದ ಹರಡುತ್ತದೆ. ನಗರದ ಹಳೇ ಮದ್ರಾಸು ರಸ್ತೆಯಲ್ಲಿರುವ ರಾಜ್ಯ ಸರಕಾರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಕರುಳುಬೇನೆ, ವೈರಲ್‌ ಹೆಪಟೈಟಿಸ್‌, ಟೈಫಾಯಿಡ್‌ ನಂತಹ ಪ್ರಕರಣಗಳು ನಿತ್ಯ 10ಕ್ಕೂ ಹೆಚ್ಚು ವರದಿಯಾಗುತ್ತಿವೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಸೇನೆಯ ಮೇಲೆ ದಾಳಿ; POKಯಲ್ಲಿ ಮೊದಲ ಸಲ ಹಾರಿದ ಭಾರತ ಧ್ವಜ ; ಭುಗಿಲೆದ್ದ ಹಿಂಸಾಚಾರ

ನಿಂತ ನೀರಿನ ಬಗ್ಗೆ ಎಚ್ಚರ:
ಮಳೆ ನೀರು ನಿಂತು ಸಂಗ್ರಹವಾಗಿರುವ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಇವುಗಳಿಂದ ಸಾಂಕ್ರಾಮಿಕ ರೋಗ ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೀಗಾಗಿ ಎಚ್ಚರಿಕೆ ವಹಿಸುವ ಅಗತ್ಯವಿದೆ. ಇನ್ನು ಇಲಾಖೆಯಿಂದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಜಾಗೃತಿಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಯೋಜನಾ ನಿರ್ದೇಶಕ ಡಾ.ಅನ್ಸರ್‌ ಅಹ್ಮದ್‌ ಹೇಳಿದ್ದಾರೆ.

ರೋಗ ಲಕ್ಷಣಗಳು:
ಕರುಳು ಸಂಬಂಧಿ ರೋಗಗಳಲ್ಲಿ ವಾಂತಿ - ಭೇದಿ, ಕಿಬ್ಬೊಟ್ಟೆಯ ಸೆಳೆತ, ಹೊಟ್ಟೆನೋವು, ಜ್ವರ ಮತ್ತಿತರೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕಲುಷಿತ ನೀರು ಅಥವಾ ಆಹಾರ ಸೇವನೆಯ ಮೂಲಕ, ಸೋಂಕಿಗೆ ಒಳಗಾದ ವ್ಯಕ್ತಿಗಳು ಅಥವಾ ಪ್ರಾಣಿಗಳೊಂದಿಗೆ ನೇರ ಸಂಪರ್ಕದಿಂದ ಇವು ಹರಡುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳು:
ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ.
ಕೈಗಳನ್ನು ಸಾಬೂನಿಂದ ತೊಳೆದುಕೊಂಡು ಆಹಾರ ಸೇವಿಸಿ.
ಬಿಸಿ ಹಾಗೂ ತಾಜಾ ಆಹಾರವನ್ನೇ ಸೇವಿಸಿ.
ಹೊರಗಿನ ಅನಾರೋಗ್ಯಕರ ಆಹಾರ ಸೇವನೆಯಿಂದ ದೂರವಿರಿ.
ಹೊಟ್ಟೆ ನೋವಿನಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

Advertisement
Advertisement
Advertisement