For the best experience, open
https://m.hosakannada.com
on your mobile browser.
Advertisement

Budget 2024: ಕೇಂದ್ರದಿಂದ ಮಹಿಳೆಯರಿಗೆ ಗುಡ್‌ನ್ಯೂಸ್‌; ಹಲವು ಯೋಜನೆಗಳ ಘೋಷಣೆ!!

12:05 PM Feb 01, 2024 IST | ಹೊಸ ಕನ್ನಡ
UpdateAt: 12:06 PM Feb 01, 2024 IST
budget 2024  ಕೇಂದ್ರದಿಂದ ಮಹಿಳೆಯರಿಗೆ ಗುಡ್‌ನ್ಯೂಸ್‌  ಹಲವು ಯೋಜನೆಗಳ ಘೋಷಣೆ
Advertisement

Interim Budget 2024 LIVE Updates: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಬೆಳಗ್ಗೆ 11 ಗಂಟೆಯಿಂದ ಹಣಕಾಸು ಸಚಿವರು ಅಧಿಕೃತ ಭಾಷಣ ಆರಂಭಿಸಿದ್ದು, ಸಂಸತ್ತಿನಲ್ಲಿ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಅನ್ನು ಮಂಡಿಸಿದ್ದಾರೆ ಮತ್ತು ಮಧ್ಯಂತರ ಬಜೆಟ್ 2024 ಗಾಗಿ ತಮ್ಮ ಬಜೆಟ್ ಭಾಷಣವನ್ನು ಪ್ರಾರಂಭಿಸಿದ್ದಾರೆ.

Advertisement

ಇದನ್ನೂ ಓದಿ: Budget 2024: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಬಜೆಟ್‌ ಮಂಡನೆ; ನೀಲಿ-ಕೆನೆ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡ ಸಚಿವೆ!!

ಬಜೆಟ್ ಭಾಷಣದ ಆರಂಭದಲ್ಲಿ ಕೇಂದ್ರ ಸರ್ಕಾರದ ಗುರಿಗಳನ್ನು ಪ್ರಸ್ತಾಪಿಸಿದ ವಿತ್ತ ಸಚಿವರು, ಮೋದಿ ಸರ್ಕಾರದ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಎಂಬುವುದರ ಕುರಿತು ಮಾತನಾಡಿದರು. ಕಳೆದ 10 ವರ್ಷಗಳು ಪರಿವರ್ತನೆಯ ಅವಧಿಯಾಗಿದ್ದು, ಭಾರತದ ಆರ್ಥಿಕತೆಯು ಅತ್ಯಂತ ವೇಗದಲ್ಲಿ ಪ್ರಗತಿ ಸಾಧಿಸಿದೆ ಎಂದು ಹೇಳಿದರು.

Advertisement

2014ರಲ್ಲಿ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದಾಗ ಹಲವು ಸವಾಲುಗಳಿದ್ದವು. ಸಾರ್ವಜನಿಕರ ಹಿತದೃಷ್ಟಿಯಿಂದ ಆರ್ಥಿಕತೆಯನ್ನು ಬಲಪಡಿಸಲು ಮತ್ತು ಜನರಿಗೆ ಉದ್ಯೋಗವನ್ನು ಪಡೆಯಲು ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಮಾಡಲಾಗಿದೆ. 2047 ರ ವೇಳೆಗೆ ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತೇವೆ. ಇತ್ತೀಚಿನ ದಿನಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಜಾಗತಿಕ ಉದ್ವಿಗ್ನತೆಯಿಂದಾಗಿ ಸವಾಲುಗಳು ಹೆಚ್ಚುತ್ತಿವೆ ಆದರೆ ಭಾರತವು ಈ ಬಿಕ್ಕಟ್ಟಿನಲ್ಲೂ ಉತ್ತಮ ಜಿಡಿಪಿ ಬೆಳವಣಿಗೆಯನ್ನು ಸಾಧಿಸಿದೆ. ಜಿಎಸ್‌ಟಿ ಅಡಿಯಲ್ಲಿ ಒನ್ ನೇಷನ್ ಒನ್ ಮಾರುಕಟ್ಟೆಯನ್ನು ಸಾಧಿಸಲಾಗಿದೆ ಮತ್ತು ಭಾರತ ಮತ್ತು ಮಧ್ಯಪ್ರಾಚ್ಯ ಯುರೋಪ್ ನಡುವೆ ಕಾರಿಡಾರ್ ನಿರ್ಮಾಣದ ಘೋಷಣೆಯು ಗೇಮ್ ಚೇಂಜರ್ ಎಂದು ಸಾಬೀತುಪಡಿಸುತ್ತದೆ. ಸರ್ಕಾರವು ಜಿಡಿಪಿ ಅಭಿವೃದ್ಧಿಯತ್ತ ಗಮನ ಹರಿಸಿದ್ದು, ಇದಕ್ಕಾಗಿ ಸರ್ಕಾರದ ಪ್ರಯತ್ನಗಳು ಫಲ ನೀಡುತ್ತಿವೆ ಎಂದು ಹಣಕಾಸು ಸಚಿವರು ಹೇಳಿದರು.

ಜನ್ ಧನ್ ಖಾತೆಗಳಲ್ಲಿ ಹಣ ಜಮಾ ಮಾಡುವ ಮೂಲಕ 2.7 ಲಕ್ಷ ಕೋಟಿ ರೂಪಾಯಿ ಉಳಿತಾಯವಾಗಿದೆ ಮತ್ತು ಸರ್ಕಾರದ ಆರ್ಥಿಕ ನಿರ್ವಹಣೆಯು ಉನ್ನತ ಮಟ್ಟದಲ್ಲಿದ್ದು ದೇಶಕ್ಕೆ ಹೊಸ ದಿಕ್ಕು ಮತ್ತು ಹೊಸ ಭರವಸೆಯನ್ನು ನೀಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

3 ಕೋಟಿ ಮನೆ ನಿರ್ಮಿಸುವ ಸರಕಾರದ ಗುರಿ ಸಾಧಿಸಲಾಗಿದ್ದು, ಮುಂದಿನ 5 ವರ್ಷಗಳಲ್ಲಿ ಇನ್ನೂ 2 ಕೋಟಿ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ. ರೂಫ್ ಟಾಪ್ ಸೋಲಾರ್ ಯೋಜನೆಯಡಿ 300 ಯೂನಿಟ್ ವಿದ್ಯುತ್ ಜನರಿಗೆ ಉಚಿತವಾಗಿ ಲಭ್ಯವಾಗಲಿದೆ - ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು ಹೇಳಿದರು.

ಪ್ರಧಾನಮಂತ್ರಿ ಆವಾಸ್ ಅಡಿಯಲ್ಲಿ ಶೇ 70ರಷ್ಟು ಮನೆಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಪ್ರಧಾನ ಮಂತ್ರಿ ಸಂಪದ ಯೋಜನೆಯಿಂದ 38 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ಲಸಿಕೆಯನ್ನು 9 ರಿಂದ 14 ವರ್ಷ ವಯಸ್ಸಿನ ಹುಡುಗಿಯರಿಗೆ ನೀಡಲಾಗುತ್ತದೆ. ಆಯುಷ್ಮಾನ್ ಭಾರತ್‌ನ ಪ್ರಯೋಜನಗಳನ್ನು ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುವುದು. ಮಧ್ಯಮ ವರ್ಗದವರಿಗೆ ವಸತಿ ಯೋಜನೆಯನ್ನು ಪ್ರಾರಂಭಿಸಲಾಗುವುದು ಮತ್ತು 1 ಕೋಟಿ ಸೋಲಾರ್ ಪ್ಯಾನಲ್ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಸರ್ಕಾರದ ಯೋಜನೆ.

ದೇಶದಲ್ಲಿ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ನಡೆಸಲಾಗುತ್ತಿದೆ ಅದು ಅವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದರು.

ಮಹಿಳಾ ಉದ್ಯಮಿಗಳಿಗೆ 30 ಕೋಟಿ ಮುದ್ರಾ ಯೋಜನೆ ಸಾಲ ನೀಡಲಾಗಿದೆ.

ಉನ್ನತ ಶಿಕ್ಷಣದಲ್ಲಿ ಮಹಿಳಾ ದಾಖಲಾತಿ 10 ವರ್ಷದಲ್ಲಿ 28% ಹೆಚ್ಚಿದೆ.

ಉದ್ಯಮಶೀಲತೆ, ಸುಗಮ ಜೀವನ, ಘಟನತೆಯ ಮೂಲಕ ಮಹಿಳಾ ಸಬಲೀಕರಣವು ಕಳೆದ 10 ವರ್ಷಗಳಲ್ಲಿ ಹೆಚ್ಚಿದೆ.

ಸ್ಟೆಮ್‌ ಕೋರ್ಸ್‌ಗಳಲ್ಲಿ, ಬಾಲಕಿಯರು, ಮಹಿಳೆಯರ ದಾಖಲಾತಿ ಶೇ.43 ರಷ್ಟು ಹೆಚ್ಚಿದೆ.

ತ್ರಿವಳಿ ತಲಾಖ್‌ ಕಾನೂನು ಬಾಹಿರಗೊಳಿಸುವುದು. ಲೋಕ ಸಭೆ ರಾಜ್ಯ ಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳಾ ಮೀಸಲಾತಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪಿಎಂ ಆವಾಸ್‌ ಯೋಜನೆಯಡಿ 70% ಕ್ಕೂ ಹೆಚ್ಚು ಮನೆ ಮಹಿಳೆಯರಿಗೆ ನೀಡುವುದು, ಇದು ಮಹಿಳೆಯರ ಘನತೆಯನ್ನು ಹೆಚ್ಚಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement
Advertisement
Advertisement