ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Car Driver: ಕಾರು ಡ್ರೈವರ್ ಖಾತೆಗೆ ಬಂದು ಬಿತ್ತು ಬರೋಬ್ಬರಿ 9 ಸಾವಿರ ಕೋಟಿ !! ನಂತ್ರ ಬ್ಯಾಂಕ್ ಕೊಡ್ತು ಬಿಗ್ ಶಾಕ್

03:40 PM Sep 21, 2023 IST | ಅಶ್ವಿನಿ ಹೆಬ್ಬಾರ್
UpdateAt: 06:43 AM Mar 28, 2024 IST

Cash Transfer To Bank Account: ಕುರುಡು ಕಾಂಚಾಣದ ವ್ಯಾಮೋಹ ಯಾರಿಗಿಲ್ಲ ಹೇಳಿ!! ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ! ಎಂಬ ಮಾತು ಹೆಚ್ಚು ಪ್ರಚಲಿತ. ನಿಮಗೇನಾದರೂ ಏಕಾಏಕಿ ಕೋಟಿಗಟ್ಟಲೆ ಹಣ ಬ್ಯಾಂಕ್ ಅಕೌಂಟ್ ಗೆ (Bank Account)ಜಮೆ ಆದರೆ ಹೇಗಿರಬಹುದು? ಖುಷಿಯಲ್ಲಿ ಜಗವೇ ಕಾಣದು.ಇದೆ ರೀತಿ, ತಮಿಳುನಾಡಿನಲ್ಲಿ ಕಾರು ಚಾಲಕನಾಗಿರುವ ರಾಜ್ ಕುಮಾರ್ ಎಂಬುವವರ ಖಾತೆಗೆ ಇದ್ದಕ್ಕಿದ್ದಂತೆ 9,000 ಕೋಟಿ ರೂ. ಬಂದಿದೆಯಂತೆ. ತಕ್ಷಣವೇ ಚಾಲಕ (Car Driver)ಈ ಮೊತ್ತದಿಂದ 21,000 ರೂ.ಗಳನ್ನು ತನ್ನ ಸ್ನೇಹಿತನ ಖಾತೆಗೆ ವರ್ಗಾವಣೆ ಮಾಡಿದ್ದನಂತೆ.

Advertisement

ಪಳನಿ ನಿವಾಸಿ ರಾಜ್ ಕುಮಾರ್ ಎಂಬುವವರುಕಾರು ಚಾಲಕನಾಗಿ ಕಾರ್ಯ ನಿರ್ವಹಿಸುತ್ತ ತಮ್ಮ ಸ್ನೇಹಿತನೊಂದಿಗೆ ಕೋಡಂಬಕ್ಕಂನಲ್ಲಿ ನೆಲೆಸಿದ್ದರು. ಸೆಪ್ಟೆಂಬರ್ 9ರಂದು ರಾಜ್ ಕುಮಾರ್ ಅವರ ಖಾತೆಗೆ 9,000 ಕೋಟಿ ಹಣ ಬಂದಿರುವುದನ್ನು ಕಂಡು ಖುಷಿಯ ಜೊತೆಗೆ ಅಚ್ಚರಿಗೆ ಒಳಗಾಗಿದ್ದಾರೆ. ರಾಜ್ ಕುಮಾರ್ ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಅವರ ಖಾತೆಯಲ್ಲಿ ಕೇವಲ 105 ರೂಪಾಯಿಗಳಿತ್ತಂತೆ. ಈ ನಡುವೆ ಏಕಾಏಕಿ 9 ಸಾವಿರ ಕೋಟಿ ಖಾತೆಗೆ ಜಮಾ ಆಗಿದೆ.

Aditi Rao Hydari Wedding: ನಟಿ ಅದಿತಿ ರಾವ್-ಸಿದ್ಧಾರ್ಥ್‌ ದೇವಸ್ಥಾನದಲ್ಲಿ ಮದುವೆ

ಹಣ ಸಿಕ್ಕ ಖುಷಿಯಲ್ಲಿ ಚಾಲಕ 21,000 ರೂ.ಗಳನ್ನು ತನ್ನ ಸ್ನೇಹಿತನ ಖಾತೆಗೆ ವರ್ಗಾಯಿಸಿದ್ದಾರೆ.

Advertisement

ಆದರೆ, ಬ್ಯಾಂಕ್ ಅಧಿಕಾರಿಗಳು ರಾಜ್ ಕುಮಾರ್ ಅವರನ್ನು ಸಂಪರ್ಕಿಸಿ, ಹಣವನ್ನು ತಪ್ಪಾಗಿ ನಿಮ್ಮ ಖಾತೆಗೆ ವರ್ಗಾಯಿಸಲಾಗಿದ್ದು, ಈ ಹಣವನ್ನು ಬೇರೆ ಯಾರಿಗೂ ವರ್ಗಾಯಿಸದಂತೆ ಸೂಚಿಸಿದ್ದಾರೆ.

Aditi Rao Hydari Wedding: ನಟಿ ಅದಿತಿ ರಾವ್-ಸಿದ್ಧಾರ್ಥ್‌ ದೇವಸ್ಥಾನದಲ್ಲಿ ಮದುವೆ

ಆ ಬಳಿಕ ತಪ್ಪಾಗಿ ಜಮೆ ಆದ ಹಣವನ್ನು ಬ್ಯಾಂಕ್ ಮತ್ತೆ ಕಡಿತಗೊಳಿಸಿದ್ದು, ಬ್ಯಾಂಕ್ ಆಡಳಿತ ಮಂಡಳಿ ರಾಜ್ ಕುಮಾರ್ ಅವರಿಗೆ ಸ್ನೇಹಿತನಿಗೆ ಕಳುಹಿಸಿದ 21,000 ರೂ.ಗಳನ್ನು ಹಿಂದಿರುಗಿಸುವಂತೆ ಸೂಚಿಸಿದೆ ಎಂದು ವರದಿಯಾಗಿದೆ.

Advertisement
Advertisement
Next Article