For the best experience, open
https://m.hosakannada.com
on your mobile browser.
Advertisement

Deadly Killer: ಒಂದೇ ಕುಟುಂಬದ 6 ಜನರನ್ನು ಕೊಂದ ಕಿರಾತಕ! ಸ್ನೇಹಕ್ಕೇ ಸ್ನೇಹ ಎಂದವನು ಮಾಡಿದ್ದೇನು? ಇಲ್ಲಿದೆ ಆ ಶಾಕಿಂಗ್‌ ಸ್ಟೋರಿ!!!

09:44 AM Dec 22, 2023 IST | ಮಲ್ಲಿಕಾ ಪುತ್ರನ್
UpdateAt: 10:41 AM Dec 22, 2023 IST
deadly killer  ಒಂದೇ ಕುಟುಂಬದ  6 ಜನರನ್ನು ಕೊಂದ ಕಿರಾತಕ  ಸ್ನೇಹಕ್ಕೇ ಸ್ನೇಹ ಎಂದವನು ಮಾಡಿದ್ದೇನು  ಇಲ್ಲಿದೆ ಆ ಶಾಕಿಂಗ್‌ ಸ್ಟೋರಿ
Advertisement

Deadly Crime: ಕುಚುಕು ಕುಚುಕು ಕುಚುಕು ನೀ ಚಡ್ಡಿ ದೋಸ್ತಿ ಕಣೋ ಕುಚುಕು....ಎಂಬ ಹಾಡು ಎಷ್ಟೊಂದು ಫೇಮಸ್‌ ಆಗಿತ್ತು. ಆದರೆ ಈ ಹಾಡಿಗೆ ವಿರುದ್ಧವಾಗಿ ಓರ್ವ ಸ್ನೇಹಿತ ಇನ್ನೋರ್ವ ಸ್ನೇಹಿತನ ಕುಟುಂಬದ ಕಗ್ಗೊಲೆ ಮಾಡಿದ ಹೃದಯ ವಿದ್ರಾವಕ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.

Advertisement

ತನ್ನ ಸ್ನೇಹಿತನ ಆಸ್ತಿ ದೋಚಲು ಇನ್ನೋರ್ವ ಸ್ನೇಹಿತ, ಆತ ಕುಟುಂಬದ ಆರು ಮಂದಿಯ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ. ಪ್ರಮುಖ ಆರೋಪಿ 30 ವರ್ಷದ ಪ್ರಶಾಂತ್‌ ಎಂಬಾತ ಇಬ್ಬರೊಂದಿಗೆ ಸೇರಿ 25 ಲಕ್ಷ ಮೌಲ್ಯದ ಸೊತ್ತಿಗಾಗಿ ತನ್ನ ಸ್ನೇಹಿತ, ಆತನ ಪತ್ನಿ, ಇಬ್ಬರು ಮಕ್ಕಳು ಹಾಗೂ ಇಬ್ಬರು ಸಹೋದರಿಯರನ್ನು ಕೊಂದು ಹಾಕಿದ್ದಾನೆ. ಮೇದಕ್‌, ನಿರ್ಮಲ್‌, ಕಾಮರೆಡ್ಡಿ, ನಿಜಾಮಾಬಾದ್‌ ಜಿಲ್ಲೆಗಳಲ್ಲಿ ಏಳು ದಿನಗಳ ಅಂತರದಲ್ಲಿ ಈ ಕೊಲೆಗಳು ನಡೆದಿದೆ.

ನಿಜಾಮಾಬಾದ್ ಜಿಲ್ಲೆಯ ಮಕಲೂರು ಗ್ರಾಮದ ನಿವಾಸಿಗಳಾದ 33 ವರ್ಷದ ಪ್ರಶಾಂತ್ ಮತ್ತು ಪ್ರಸಾದ್ ಬಾಲ್ಯದ ಗೆಳೆಯರು ಎಂದು ಕಾಮರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಂಧು ಶರ್ಮಾ ತಿಳಿಸಿದ್ದಾರೆ.

Advertisement

ಪ್ರಸಾದ್ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದು, ಅವರು 2022 ರಲ್ಲಿ ಮನೆಗೆ ವಾಪಾಸ್‌ ಬಂದಿದ್ದರು. ಗಲ್ಫ್‌ಗೆ ಹೋಗಲು ಪ್ರಶಾಂತ್‌ ಪ್ರಸಾದ್‌ಗೆ 3.5 ಲಕ್ಷ ಸಾಲ ನೀಡಿದ್ದ ಎಂದು ಎಸ್‌ಪಿ ತಿಳಿಸಿದ್ದಾರೆ. ಪ್ರಸಾದ್ ಬಳಿ ಹಣ ವಾಪಸ್ ಕೇಳಿದ್ದಾರೆ. ಸಾಲ ಮರುಪಾವತಿಸಲು ಪ್ರಸಾದ್ ಆಸ್ತಿಯನ್ನು ಅಡಮಾನ ಇಡುವ ಮಾತುಕತೆಯಾಗಿದೆ. ಪ್ರಸಾದ್ ಅವರ ಮನೆಯನ್ನು ತನಗೆ ಅಡಮಾನ ಇಡುವಂತೆ ಪ್ರಶಾಂತ್‌ ಹೇಳಿದ್ದಾನೆ. ಸ್ನೇಹಿತ ಮಾತು ನಂಬಿ ಪ್ರಸಾದ್‌ ಪ್ರಶಾಂತ್‌ ಹೆಸರಿಗೆ ಮನೆಯನ್ನು ಅಡಮಾನ ಇಟ್ಟಿದ್ದಾನೆ.

ಇದನ್ನು ಓದಿ: Sullia News: ಅಯ್ಯಪ್ಪ ಮಾಲಾಧಾರಿ ನೇಣು ಬಿಗಿದು ಆತ್ಮಹತ್ಯೆ!!

ಆದರೆ ಪ್ರಸಾದ್ ಅವರ ಸಂಪೂರ್ಣ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಶಾಂತ್ ಬಯಸಿದ್ದ. ಆದರೆ ಈ ವಿಷಯ ತಿಳಿದು ಪ್ರಸಾದ್‌ ತನ್ನ ಮನೆ ತನ್ನ ಹೆಸರಿಗೆ ವಾಪಾಸ್‌ ಕೊಡಿ ಎಂದು ಕೇಳಿದ್ದಾನೆ. ಇದನ್ನು ಅರಿತ ಪ್ರಶಾಂತ್ ಪ್ರಸಾದ್‌ ಮಾತ್ರವಲ್ಲದೇ ಆತನ ಕುಟುಂಬವನ್ನೇ ಇಲ್ಲವಾಗಿಸಲು ಪ್ಲಾನ್ ಮಾಡಿದ್ದಾನೆ. ನವೆಂಬರ್ 29 ರಂದು ಪ್ರಶಾಂತ್, ವಂಶಿ ಮತ್ತು ವಿಷ್ಣು ಸಹಾಯದಿಂದ ಪ್ರಸಾದ್ ಅವರನ್ನು ಕೊಲೆ ಮಾಡಿದ್ದಾನೆ. ಅನಂತರ ಪ್ರಸಾದ್ ಅವರ ಕುಟುಂಬವು ಪೊಲೀಸರಿಗೆ ನಾಪತ್ತೆ ದೂರು ನೀಡಬಹುದೆಂಬ ಭಯದಿಂದ ಪ್ರಶಾಂತ್ ತನ್ನ ಕುಟುಂಬ ಸದಸ್ಯರ ಬಳಿ ಹೋಗಿ, ಪ್ರಸಾದ್ ವಿರುದ್ಧ ಪ್ರಕರಣ ದಾಖಲಿಸಿದ್ದರಿಂದ ಅವನು ಯಾವುದೋ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದಾಗಿಯೂ, ನೀವು ಅವರನ್ನು ನೋಡಲು ಹೋಗಬಹುದು ಎಂದು ಹೇಳಿದ್ದಾನೆ. ಹಾಗೆ ಆರೋಪಿಗಳು ಡಿ.1ರಂದು ಬಾಡಿಗೆ ಕಾರು ತೆಗೆದುಕೊಂಡು ಪ್ರಸಾದ್ ಅವರ ಪತ್ನಿ ಶಾನ್ವಿಕಾ (30) ಹಾಗೂ ಸಹೋದರಿ ಶ್ರಾವಣಿ (24) ಅವರನ್ನು ಪ್ರಸಾದ್ ಅವರನ್ನು ತೋರಿಸುವ ನೆಪದಲ್ಲಿ ನಿಜಾಮಾಬಾದ್ ಗೆ ಕರೆದೊಯ್ದು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾನೆ.

ಮಹಿಳೆಯರ ಅರೆ ಸುಟ್ಟ ಶವ ಕಂಡ ಅಲ್ಲಿನ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪ್ರಶಾಂತ್‌ ಅಷ್ಟರಲ್ಲಿ ಪ್ರಸಾದ್‌ನ ಎರಡು ಪುಟ್ಟ ಮಕ್ಕಳನ್ನು ಕೊಂದು ಶವಗಳನ್ನು ನದಿಗೆ ಎಸೆದಿದ್ದ.

ಪೊಲೀಸರು ಕೂಡಲೇ ತ್ವರಿತ ಕಾರ್ಯಾಚರಣೆ ಮಾಡಿದ್ದು, ಪ್ರಶಾಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸ್ನೇಹಿತ ಪ್ರಸಾದ್‌, ಪತ್ನಿ, ಮಕ್ಕಳು, ಸಹೋದರಿಯರು ಸೇರಿದಂತೆ ಒಟ್ಟು ಆರು ಮಂದಿಯನ್ನು ಕೊಲೆ ಮಾಡಿರುವ ಮಾಹಿತಿಯನ್ನು ಹೇಳಿದ್ದಾನೆ.

Advertisement
Advertisement
Advertisement