ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Yamaha RX100: ಮತ್ತೆ ಖದರ್ ಆಗಿ ಎಂಟ್ರಿ ಕೊಡ್ತಿದೆ ಯಮಹಾ RX100 - ಬೆಲೆ ಕೇಳಿದ್ರೆ ಇಂದೇ ಬುಕ್ ಮಾಡಿಬಿಡ್ತೀರಾ !!

Yamaha Rx 100: ಇದರ ಬೆಲೆ ಎಷ್ಟು, ಯಾವಾಗ ಬಿಡುಗಡೆಯಾಗುತ್ತೆ? ಏನಿದರ ಫೀಚರ್ಸ್ ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
11:28 PM Apr 23, 2024 IST | ಸುದರ್ಶನ್
UpdateAt: 11:28 PM Apr 23, 2024 IST
Advertisement

Yamaha RX100: ಯಮಹಾ RX100 ಭಾರತೀಯ ಬೈಕ್ ಪ್ರಿಯರಿಗೆ ಆಕರ್ಷಕ ದ್ವಿಚಕ್ರ ವಾಹನ (Two Wheeler). ಯಮಹಾ RX100 ಬೈಕ್ ಸ್ಥಗಿತಗೊಂಡು ದಶಕಗಳೇ ಉರುಳಿದೆ. ಆದರೆ ಈಗಲೂ RX100 ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇಂದಿಗೂ ಈ ಬೈಕಿನ ಅಭಿಮಾನಿಗಳು ಸಾಕಷ್ಟು ಜನ ಇದ್ದಾರೆ. ಹೀಗಾಗಿ ಯಮಹಾ ತನ್ನ ಐಕಾನಿಕ್ RX100 ಬೈಕ್‌ನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.

Advertisement

ಹೌದು, ಯಮಹಾ RX-100(Yamaha RX100) ಅತ್ಯಾಧುನಿಕ ಮಾರ್ಪಾಡುಗಳನ್ನು ಪಡೆದುಕೊಂಡು ಆಗಮಿಸಲಿದೆ. ಬೈಕ್ ಚಲಾಯಿಸುವವರ ಆರಾಮದಾಯಕತೆಗೂ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಯಮಹಾ RX-100 ಅನ್ನು ಸಿದ್ಧಪಡಿಸಲಾಗುತ್ತಿದ್ದು ವೇಗ ಹಾಗೂ ನಿಖರತೆಯಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಜೊತೆಗೆ ಇದರ ಆಕರ್ಷಕ ಬೆಲೆಯೂ ಜನರನ್ನು ಆಕರ್ಷಿಸಿದ್ದು, ಕೊಳ್ಳಲು ಕಾತರರಾಗಿದ್ದಾರೆ. ಹಾಗಿದ್ರೆ ಇದರ ಬೆಲೆ ಎಷ್ಟು, ಯಾವಾಗ ಬಿಡುಗಡೆಯಾಗುತ್ತೆ? ಏನಿದರ ಫೀಚರ್ಸ್ ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಯಮಹಾ RX 100 ಬೆಲೆ ಎಷ್ಟು, ಬಿಡುಗಡೆ ಯಾವಾಗ? 

Advertisement

• 2005ರ ವರೆಗೆ ಯಮಹಾ RX100 ಬೈಕ್ ಲಭ್ಯವಿತ್ತು. ಇದರಲ್ಲಿ RX135 ವೇರಿಯೆಂಟ್ ಕೂಡ ಬಿಡುಗಡೆಯಾಗಿತ್ತು. ಆದರೆ ಬಳಿಕ ಯಮಹಾ RX100 ಸ್ಥಗಿತಗೊಂಡಿತು. ಇದೀಗ ಈ ವರ್ಷದ ಅಂತ್ಯದಲ್ಲಿ ಯಮಹಾ RX100 ಮತ್ತೆ ಬಿಡುಗಡೆಯಾಗುವ ಸಾಧ್ಯತೆ ಇದೆ.

• ನೂತನ ಯಮಹಾ RX100 ಬೆಲೆ 1.25 ಲಕ್ಷ ರೂಪಾಯಿಂದ 1.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.

ಯಮಹಾ RX100 ಫೀಚರ್ಸ್:

• ಭಾರತದಲ್ಲಿ ಪ್ರಯಾಣಿಸಲು ಸೂಕ್ತವಾಗಿರುವ ಯಮಹಾ RX-100 ಅತ್ಯುತ್ತಮ ಆಯ್ಕೆ ಎಂದೆನಿಸಲಿದೆ. * ಹಗುರವಾಗಿರುವ ಈ ಬೈಕ್ ಸಾಗಿಸಲು ಸುಲಭವಾಗಿದೆ LCD ಮಾನಿಟರ್, ಕ್ರೂಸ್ ಕಂಟ್ರೋಲ್ ಮತ್ತು ABS ಬ್ರೇಕ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಬಂದಿದೆ.

• ಹೊಸ ಅವತಾರದ RX100 ಬೈಕ್ 225.9 ಸಿಸಿ ಎಂಜಿನ್ ಬಳಸಲಾಗುತ್ತಿದೆ.

• 20.1 bhp ಪವರ್ ಹಾಗೂ 19.93 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

• ಸಮರ್ಥ ಇಂಜಿನ್, ಕಡಿಮೆ ಬೆಲೆ ಕೂಡ ಈ ಬೈಕ್‌ನ ಇನ್ನೊಂದು ವಿಶೇಷತೆಯಾಗಿದೆ. ದೂರ ಪ್ರಯಾಣಕ್ಕೆ ಸೂಕ್ತವಾಗಿರುವ ಈ ಬೈಕ್ ನಿಮ್ಮ ಪರಿಪೂರ್ಣ ಆಯ್ಕೆಯಾಗಿರುವುದು ಖಂಡಿತ.

ಒಟ್ಟಿನಲ್ಲಿ ಈ ಬೈಕು ವಿವಿಧ ಗಾತ್ರ ಹಾಗೂ ಆಯ್ಕೆಗಳಲ್ಲಿ ಬರಲಿದೆ ಹಾಗಾಗಿಯೇ ಇದು ಬೈಕ್ ಸವಾರರಿಗೆ ಪರಿಪೂರ್ಣವಾಗಿರಲಿದೆ.

Advertisement
Advertisement