For the best experience, open
https://m.hosakannada.com
on your mobile browser.
Advertisement

Hyderabad: 60 ವರ್ಷದ ವ್ಯಕ್ತಿಯ ದೇಹದಿಂದ 418 ಕಿಡ್ನಿ ಕಲ್ಲುಗಳನ್ನು ತೆಗೆದ ವೈದ್ಯರು : ಹೈದರಾಬಾದ್ ವೈದ್ಯರ ಅಪರೂಪದ ಸಾಧನೆ

Hyderabad: ವ್ಯಕ್ತಿಯ ಮೂತ್ರಪಿಂಡದಲ್ಲಿ ಬರೋಬ್ಬರಿ 415 ಕಲ್ಲುಗಳು ಪತ್ತೆಯಾಗಿದ್ದು, ಹೈದರಾಬಾದ್ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಕಲ್ಲುಗಳನ್ನು ಹೊರ ತೆಗೆದಿದ್ದಾರೆ.
07:00 AM Apr 16, 2024 IST | ಸುದರ್ಶನ್
UpdateAt: 08:50 AM Apr 16, 2024 IST
hyderabad  60 ವರ್ಷದ ವ್ಯಕ್ತಿಯ ದೇಹದಿಂದ 418 ಕಿಡ್ನಿ ಕಲ್ಲುಗಳನ್ನು ತೆಗೆದ ವೈದ್ಯರು   ಹೈದರಾಬಾದ್ ವೈದ್ಯರ ಅಪರೂಪದ ಸಾಧನೆ
Advertisement

Hyderabad: ಸಾಮಾನ್ಯವಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ಕಂಡುಬಂದರೆ 10 ರಿಂದ 50ರವರೆಗೆ ಇರುತ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಮೂತ್ರಪಿಂಡದಲ್ಲಿ ಬರೋಬ್ಬರಿ 415 ಕಲ್ಲುಗಳು ಪತ್ತೆಯಾಗಿದ್ದು, ಹೈದರಾಬಾದ್ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಕಲ್ಲುಗಳನ್ನು ಹೊರ ತೆಗೆದಿದ್ದಾರೆ.

Advertisement

ಇದನ್ನೂ ಓದಿ: Zameer Ahmed Khan : ಎರಡು ವಡೆ ಹೆಚ್ಚಿಗೆ ತಿಂದು ಎದೆ ನೋವು ತರಿಸಿಕೊಂಡ ಸಚಿವ ಜಮೀರ್ ಅಹ್ಮದ್!!

60 ವರ್ಷ ವಯಸ್ಸಿನ ಈ ವ್ಯಕ್ತಿಯೊಬ್ಬ ಇತ್ತೀಚೆಗೆ ಬೆನ್ನು ನೋವಿನಿಂದ ಬಳಲುತ್ತಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಈ ವೇಳೆ ಅವರನ್ನು ಪರೀಕ್ಷಿಸಿದ ವೈದ್ಯರು ಅವರ ಮೂತ್ರಪಿಂಡವು ಶೇಕಡ 27ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಇತ್ತೀಚೆಗೆ ನೋವು ಹೆಚ್ಚಾಗಿದ್ದು, ಹೈದರಾಬಾದ್‌ನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಮತ್ತು ಯುರಾಲಜಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿನ ವೈದ್ಯರು ಅನೇಕ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದ ಬಳಿಕ ಮೂತ್ರಪಿಂಡದಲ್ಲಿ ಕಲ್ಲುಗಳು ಇರುವುದು ಪತ್ತೆಯಾಗಿದೆ.

Advertisement

ಇದನ್ನೂ ಓದಿ: Government New Project: ವನ್ಯಜೀವಿಗಳಿಗೆ ಸೋಲಾರ್ ವಿದ್ಯುತ್! ಸರ್ಕಾರಕ್ಕೆ ಹೇಳಲೇಬೇಕು ಬಿಗ್ ಥ್ಯಾಂಕ್ಸ್

ಬಳಿಕ ವೈದ್ಯರು ಆಪರೇಷನ್‌ ಮಾಡುವಂತೆ ಸೂಚಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವೈದ್ಯರು ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನದ ಮೂಲಕ ರೋಗಿಯ ಮೂತ್ರಪಿಂಡದಿಂದ ಕಲ್ಲುಗಳನ್ನು ಹೊರತೆಗೆದಿದ್ದಾರೆ. ಈ ಶಸ್ತ್ರ ಚಿಕಿತ್ಸೆಯಲ್ಲಿ ಬರೋಬ್ಬರಿ 418 ಕಲ್ಲುಗಳನ್ನು ಏಕಕಾಲಕ್ಕೆ ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.

ಡಾ.ಕೆ.ಪೂರ್ಣಚಂದ್ರ ರೆಡ್ಡಿ, ಡಾ.ಗೋಪಾಲ್ ಮತ್ತು ಡಾ.ದಿನೇಶ್ ಎಂ. ನೇತೃತ್ವದ ಮೂತ್ರ ಶಾಸ್ತ್ರಜ್ಞರ ತಂಡವು ಸುಧಾರಿತ ಶಸ್ತ್ರಚಿಕಿತ್ಸಾ ತಂತ್ರಗಳನ್ನು ಬಳಸಿಕೊಂಡು ಈ ಶಸರ ಚಿಕಿತ್ಸೆಯನ್ನು ಪೂರ್ಣಗೊಳಿಸಿ ಅಪರೂಪದ ಸಾಧನೆಯನ್ನು ಮಾಡಿದೆ. ಸುಮಾರು 2 ಗಂಟೆಗಳ ಕಾಲ ಶ್ರಮವಹಿಸಿದ ನಂತರ ಶಸ್ತ್ರ ಚಿಕಿತ್ಸೆಯನ್ನು ಪೂರ್ಣಗೊಳಿಸಲಾಗಿದೆ ಎಂದು ವೈದ್ಯರು ಬಹಿರಂಗಪಡಿಸಿದರು. ಹೆಚ್ಚಿನ ಸಂಖ್ಯೆಯ ಕಲ್ಲುಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದು ವೈದ್ಯಕೀಯ ಅಭ್ಯಾಸದಲ್ಲಿ ಗಮನಾರ್ಹ ಪ್ರಗತಿಯಾಗಿದೆ ಎಂದು ವೈದ್ಯರು ಹೇಳುತ್ತಾರೆ.

Advertisement
Advertisement
Advertisement