ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

ನಿಮ್ಮ ತ್ವಚೆಯ ಕಾಂತಿ ಹೆಚ್ಚಿಸಲು ಈ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಿ!

07:49 PM Jan 12, 2023 IST | ನಿಶ್ಮಿತಾ ಎನ್.
UpdateAt: 10:35 AM Jul 06, 2024 IST
Advertisement

ಸೌಂದರ್ಯವನ್ನು ಅಚ್ಚುಕಟ್ಟಾಗಿ ಯಾವಾಗಲೂ ಕಾಪಾಡಿಕೊಳ್ಳಬೇಕು ಎಂದುಕೊಳ್ಳುವವರು ಎಂದಿಗೂ ತಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ರಾಜಿಯಾಗುವುದಿಲ್ಲ. ಆಗಾಗ ಫೇಸ್ ಪ್ಯಾಕ್ ಮಾಡಿಕೊಳ್ಳುವವರಿಗೆ ಬಹುತೇಕ ಇದು ಗೊತ್ತಿರುತ್ತದೆ. ಅದೇನೆಂದರೆ ತಮ್ಮ ಸೌಂದರ್ಯಕ್ಕೆ ತಾವು ಮಾಡಿಕೊಳ್ಳುವ ಫೇಸ್ ಪ್ಯಾಕ್ ಎಷ್ಟು ಅಗತ್ಯ ಎಂದು. ಫೇಸ್‌ಪ್ಯಾಕ್‌ಗಳನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಅನೇಕ ತ್ವಚೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ರಂಧ್ರಗಳನ್ನು ನಿವಾರಿಸಲು ಹಾಗೆಯೇ ಮುಖದಲ್ಲಿರುವ ಕಲೆಗಳನ್ನು ಹೋಗಲಾಡಿಸಲು ಫೇಸ್‌ಪ್ಯಾಕ್ ಸಹಕಾರಿಯಾಗಿದೆ. ಮನೆಯಲ್ಲಿಯೇ ಕೆಲವೊಂದು ಸರಳ ಫೇಸ್‌ಪ್ಯಾಕ್‌ಗಳನ್ನು ತಯಾರಿಸುವುದರಿಂದ ಅಡ್ಡಪರಿಣಾಮಗಳನ್ನುಂಟು ಮಾಡುವುದಿಲ್ಲ. ಜೊತೆಗೆ ಹಲವಾರು ತ್ವಚೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.

Advertisement

ಅರಶಿನ ಮತ್ತು ಟೊಮೇಟೊ :- ಭಾರತೀಯ ಪ್ರತಿ ಮನೆಯಲ್ಲಿಯೂ ಅರಿಶಿಣ ಅಡುಗೆ ಜೊತೆ ಸೌಂದರ್ಯವರ್ಧಕವಾಗಿ ಬಳಕೆಯಾಗುತ್ತದೆ. ಔಷಧಿಗುಣಗಳಿಗೆ ಹೆಸರುವಾಸಿಯಾಗಿರುವ ಈ ಅರಿಶಿಣದ ಫೇಸ್ಪ್ಯಾಕ್ ಇಂದಿಗೂ ಕೂಡ ಎಲ್ಲರ ಅಚ್ಚುಮೆಚ್ಚು. ಅರಿಶಿನದಲ್ಲಿರುವ ಆಯುರ್ವೇದ ಗುಣಲಕ್ಷಣಗಳು ಪಿಗ್ಮೆಂಟೇಶನ್ ಮತ್ತು ಟ್ಯಾನ್ ಅನ್ನು ತೆಗೆದುಹಾಕುತ್ತದೆ. ಟೊಮೆಟೊದ ಬಳಕೆಯು ಡೀಪ್ ಕ್ಲೀನಿಂಗ್ ಗೆ ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ಟೊಮೆಟೊವನ್ನು ರುಬ್ಬಿಕೊಂಡು ಅದಕ್ಕೆ ಅರಿಶಿನ ಮತ್ತು ತೆಂಗಿನೆಣ್ಣೆ ಬೆರೆಸಿ ಮುಖಕ್ಕೆ ಹಚ್ಚಿ ಸುಮಾರು 15 ನಿಮಿಷಗಳ ಬಿಟ್ಟು ಮುಖ ತೊಳೆಯಬೇಕು. ಹೀಗೆ ಮಾಡಿದರೆ ತ್ವಚೆಯ ಕಾಂತಿ ಹೆಚ್ಚುತ್ತದೆ.

ಮುಲ್ತಾನಿ ಮಿಟ್ಟಿ ಮತ್ತು ಮೊಸರು:- ಮೊಸರು ಆರೋಗ್ಯಕ್ಕೆ ಎಷ್ಟು ಉತ್ತಮವೋ ಅಷ್ಟೇ ಉತ್ತಮ ಸೌಂದರ್ಯಕ್ಕೂ ಕೂಡ. ಮೊಸರು ತ್ವಚೆಗೆ ಅನ್ವಯಿಸುವುದರಿಂದ ಬಹಳಷ್ಟು ಪ್ರಯೋಜನವನ್ನು ಪಡೆಯಬಹುದು. ಮೊಸರಿನ ಜೊತೆಗೆ ಮುಲ್ತಾನ್ ಮಿಟ್ಟಿ ಇವೆರಡನ್ನೂ ಬೆರೆಸಿ ಮಿಶ್ರಣ ಮಾಡಿ. ನಿಮ್ಮ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ.ಇದು ಸಂಪೂರ್ಣವಾಗಿ ಒಣಗುವವರೆಗೆ, ಸುಮಾರು 20 ನಿಮಿಷಗಳಹಾಗೆಯೇ ಬಿಡಿ. ನಂತರದಲ್ಲಿ ಅದನ್ನು ತಣ್ಣೀರಿನ ಸಹಾಯದಿಂದ ತೊಳೆಯಿರಿ. ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ.

Advertisement

ಆಪಲ್ ಸೈಡರ್ ವಿನೆಗರ್ ಮತ್ತು ಜೇನುತುಪ್ಪ:- ಅನ್ನು ಜೇನುತುಪ್ಪದೊಂದಿಗೆ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ ಮತ್ತು ಸುಮಾರು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಮುಖವನ್ನು ಕ್ಲೀನ್ ಮತ್ತು ಮಾಯಿಶ್ಚರೈಸ್ ಮಾಡುತ್ತದೆ.

ನಿಂಬೆಹಣ್ಣು ಮತ್ತು ಅರಶಿನ:- ಫೇಸ್ ಮಾಸ್ಕ್ ಮತ್ತು ಫೇಸ್ ಪ್ಯಾಕ್​ಗಳಲ್ಲಿ ನಿಂಬೆ ಹಣ್ಣಿನ ರಸ ಸೇರಿಸುವುದರಿಂದ ಹಲವಾರು ಆರೋಗ್ಯಕರ ಲಾಭಗಳಾಗುತ್ತವೆ. ಒಂದು ಬೌಲ್‌ನಲ್ಲಿ ನಿಂಬೆ ರಸವನ್ನು ಹಿಂಡಿ ಮತ್ತು ಅದಕ್ಕೆ ಒಂದು ಚಮಚ ಅರಿಶಿನವನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಇದನ್ನು ಮುಖಕ್ಕೆ ಹಚ್ಚಿ ಸುಮಾರು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಶುದ್ದ ನೀರಿನಿಂದ ಮುಖವನ್ನು ತೊಳೆಯಿರಿ. ಇದು ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Related News

Advertisement
Advertisement