Himalayan Viagra: ಇದು ವಿಶ್ವದ ಅತ್ಯಂತ ದುಬಾರಿ ವಯಾಗ್ರ; ಇದರ ಗುಣಲಕ್ಷಣಗಳು ಏನು? ಇಲ್ಲಿದೆ ಸಂಪೂರ್ಣ ವಿವರ!
Himalayan Viagra: ಇದು ಒಂದು ಸಸ್ಯದ ಒಣ ಕಾಂಡದ ರೀತಿ ಕಂಡರೂ ಕೂಡಾ ಇದನ್ನು ಹಿಮಾಲಯದ ಚಿನ್ನ(Himalayan Viagra) ಎಂದು ಕರೆಯಲಾಗುತ್ತದೆ. ಇದನ್ನು ವಿಜ್ಞಾನದ ಭಾಷೆಯಲ್ಲಿ ಕಾರ್ಡಿಸೆಪ್ಸ್ ಫಂಗಸ್ ಅಥವಾ ಕ್ಯಾಟರ್ಪಿಲ್ಲರ್ ಫಂಗಸ್ ಎಂದು ಕರೆಯಲಾಗುತ್ತದೆ. ಇದೊಂದು ಶಿಲೀಂದ್ರ , ಟಬೆಟ್, ಭುತಾನ್, ಭಾರತ, ಚೀನಾ ಮತ್ತು ನೇಪಾಳದ ಎತ್ತರದ ಹಿಮಾಲಯ ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದನ್ನು ಔಷಧಿಗಳ ರೂಪದಲ್ಲಿ ಬಳಸಲಾಗುತ್ತದೆ. ಇದು ಎಷ್ಟು ಉಪಯುಕ್ತ ಎಂಬುವುದನ್ನು ಇಲ್ಲಿ ತಿಳಿಯೋಣ ಬನ್ನಿ.
ಆಯಾಸವನ್ನು ನಿವಾರಿಸಲು ಮತ್ತು ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಇದನ್ನು ದೀರ್ಘಕಾಲದವರೆಗೆ ಬಳಸಲಾಗುತ್ತದೆ. ಇದೇ ಕಾರಣಕ್ಕೆ ಇದನ್ನು ಹಿಮಾಲಯದ ವಯಾಗ್ರ ಎಂದೂ ಕರೆಯುತ್ತಾರೆ. ಜ್ಞಾಪಕಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಸಹಕಾರಿಯಾಗಿದೆ.
ಇದರ ಉದ್ದ ಸುಮಾರು 2 ಇಂಚು. TOI ವರದಿಯ ಪ್ರಕಾರ, ಇದು ಜೈವಿಕ ಸಕ್ರಿಯ ಅಣುಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದನ್ನು ಕಾರ್ಡಿಸೆಪಿನ್ ಎಂದು ಕರೆಯಲಾಗುತ್ತದೆ. ಈ ಕಾರಣದಿಂದಾಗಿ ಇದನ್ನು ವೈರಸ್ ಸಂಬಂಧಿತ ಕಾಯಿಲೆಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ. ಒಂದು ಕೆಜಿ ಕಾರ್ಡಿಸೆಪ್ಸ್ ಫಂಗಸ್ ಬೆಲೆ 65 ಲಕ್ಷ ರೂ. ಎಂದು ಹೇಳಲಾಗುತ್ತದೆ.
ಈ ಮೂಲಿಕೆ ಎಷ್ಟು ಸುರಕ್ಷಿತ?
ಇದನ್ನು ಪ್ರತಿದಿನ ತೆಗೆದುಕೊಂಡರೆ ಅದರ ಪ್ರಮಾಣವು 3 ರಿಂದ 6 ಗ್ರಾಂ ಗಿಂತ ಹೆಚ್ಚಿರಬಾರದು. ವೈದ್ಯಕೀಯ ಸಲಹೆಯಿಲ್ಲದೆ ಅಥವಾ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನದನ್ನು ತೆಗೆದುಕೊಂಡರೆ, ಅದರ ಅಡ್ಡಪರಿಣಾಮಗಳು ಅತಿಸಾರ, ಮಲಬದ್ಧತೆ ಮತ್ತು ಹೊಟ್ಟೆ ನೋವಿನ ರೂಪದಲ್ಲಿ ಕಂಡುಬರಬಹುದು.