For the best experience, open
https://m.hosakannada.com
on your mobile browser.
Advertisement

Curry Leaves Benifits: ಖಾಲಿ ಹೊಟ್ಟೆಯಲ್ಲಿ ಕರಿ ಬೇವನ್ನು ತಿನ್ನಬೇಕಂತೆ, ಇಲ್ಲಿದೆ ನೋಡಿ ಹೆಲ್ತ್ ಟಿಪ್ಸ್

Curry leaves Benefits: ಕೆಲವರು ಸಾಂಬಾರ್ ಮತ್ತು ದಾಲ್ ಜೊತೆಗೆ ಕರಿಬೇವಿನ ಸೊಪ್ಪನ್ನು ತಿನ್ನುತ್ತಾರೆ. ಇದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ
06:20 AM May 20, 2024 IST | ಸುದರ್ಶನ್
UpdateAt: 09:42 AM May 20, 2024 IST
curry leaves benifits  ಖಾಲಿ ಹೊಟ್ಟೆಯಲ್ಲಿ ಕರಿ ಬೇವನ್ನು ತಿನ್ನಬೇಕಂತೆ  ಇಲ್ಲಿದೆ ನೋಡಿ ಹೆಲ್ತ್ ಟಿಪ್ಸ್

Curry leaves Benefits: ಸಾಮಾನ್ಯವಾಗಿ ಕರಿಬೇವಿನ ಎಲೆಯನ್ನು ಅಡುಗೆಗೆ ಬಳಸುತ್ತಾರೆ. ಒಗ್ಗರಣೆಗಂತೂ ಕರಿಬೇವು ಬೇಕೇ ಬೇಕು. ಕೆಲವರು ಸಾಂಬಾರ್ ಮತ್ತು ದಾಲ್ ಜೊತೆಗೆ ಕರಿಬೇವಿನ ಸೊಪ್ಪನ್ನು ತಿನ್ನುತ್ತಾರೆ. ಇದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ

Advertisement

ಇದನ್ನೂ ಓದಿ: Belthangady: ಠಾಣೆಗೆ ನುಗ್ಗಿ ಪೋಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ ಶಾಸಕ ಹರೀಶ್ ಪೂಂಜ - ಕಾಂಗ್ರೆಸ್ ಹೇಳಿದ್ದೇನು ?!

ವಾಸ್ತವವಾಗಿ ಕರಿಬೇವಿನ ಸೊಪ್ಪಿನ ವಾಸನೆ ಬಹಳ ಚೆನ್ನಾರುತ್ತದೆ. ಇದರಿಂದ ತಯಾರಿಸುವ ದಾಲ್ ಮತ್ತು ಸಾಂಬಾರ್ ರುಚಿ ಉತ್ತಮವಾಗಿರುತ್ತದೆ.

Advertisement

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್ ಮಾಡಿಸಿದ್ದೇ ಡಿಕೆಶಿ ಅನ್ನೋ ಆರೋಪಕ್ಕೆ ಸಿಕ್ತು ಸಾಕ್ಷಿ - ಹೊಸ ಆಡಿಯೋ ಲೀಕ್ !!

ದೈನಂದಿನ ಭಕ್ಷ್ಯಗಳಲ್ಲಿ ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಹೃದಯ ಕಾಯಿಲೆಯಿಂದ ಹಿಡಿದು, ಡೆಂಗ್ಯೂ, ಅಜೀರ್ಣವನ್ನು ತೆಗೆದು ಹಾಕಲು ಮತ್ತು ಚಯಾಪಚಯ ದರವನ್ನು ಸಕ್ರಿಯಗೊಳಿಸಲು ಕರಿಬೇಕು ಬಹಳ ಸಹಕಾರಿ ಆಗಿದೆ.

ಕರಿಬೇವು ಕೂದಲು ಉದುರುವಿಕೆಯನ್ನು ನಿವಾರಿಸುತ್ತದೆ. ವಿಟಮಿನ್ ಎ ಮತ್ತು ಸಿ ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲನ್ನು ಆರೋಗ್ಯವಾಗಿಡುತ್ತದೆ. ಅಷ್ಟೇ ಅಲ್ಲ, ಕರಿಬೇವಿನ ಎಲೆಗಳು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಅಲ್ಲದೇ ಇದು ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಕರಿಬೇವಿನ ಎಲೆಗಳನ್ನು ನಿಯಮಿತವಾಗಿ ತಿನ್ನುವುದರಿಂದ ಹೃದ್ರೋಗವನ್ನು ತಡೆಯಬಹುದು.

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ಜಗಿಯುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ಮಲಬದ್ಧತೆ, ಆಮ್ಲೀಯತೆ, ಹೊಟ್ಟೆಯ ಸಮಸ್ಯೆ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ.

ಪ್ರತಿದಿನ ಕರಿಬೇವಿನ ಎಲೆಗಳು ಇನ್ಸುಲಿನ್ ಕಾರ್ಯವನ್ನು ಹೆಚ್ಚಿಸಲು ಪ್ರಾರಂಭಿಸುತ್ತವೆ. ಪರಿಣಾಮವಾಗಿ, ರಕ್ತದಲ್ಲಿನ ಸಕ್ಕರೆ ಪ್ರಮಾಣವು ಸಾಮಾನ್ಯ ಮಟ್ಟವನ್ನು ಮೀರುವುದಿಲ್ಲ. ಕರಿಬೇವಿನ ಎಲೆಗಳಲ್ಲಿರುವ ನಾರಿನಾಂಶವು ರಕ್ತದ ಸಕ್ಕರೆಯ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

Advertisement
Advertisement
Advertisement