For the best experience, open
https://m.hosakannada.com
on your mobile browser.
Advertisement

Health Tip: ನಿದ್ದೆ ಮಾಡುವಾಗ ಈ ಭಂಗಿಯಲ್ಲಿ ಮಲಗ್ತೀರಾ? ಹಾಗಿದ್ರೆ ನೀವು ತುಂಬಾ ಅದೃಷ್ಟವಂತರು!

10:49 AM May 15, 2024 IST | ಸುದರ್ಶನ್
UpdateAt: 10:49 AM May 15, 2024 IST
health tip  ನಿದ್ದೆ ಮಾಡುವಾಗ ಈ ಭಂಗಿಯಲ್ಲಿ ಮಲಗ್ತೀರಾ  ಹಾಗಿದ್ರೆ ನೀವು ತುಂಬಾ ಅದೃಷ್ಟವಂತರು
Advertisement

Health Tips: ದಿನನಿತ್ಯದ ಕೆಲಸ ಕಾರ್ಯ ಮಾಡಿ ಸುಸ್ತಾದ ಸಮಯದಲ್ಲಿ ಒಮ್ಮೆ ನಿದ್ದೆ ಬಂದರೆ ಸಾಕೆಂದು ಹೇಗೆ ಬೇಕು ಹಾಗೇ ಹಾಸಿಗೆ ಮೇಲೆ ಬಿದ್ದು ನಿದ್ದೆಗೆ ಜಾರುವವರೇ ಹೆಚ್ಚು. ಆದರೆ ದೈಹಿಕ ಹಾಗೂ ಮಾನಸಿಕ ಸ್ಥಿರತೆ ಕಾಪಾಡಲು ಕನಿಷ್ಠ ದಿನಕ್ಕೆ ಏಳರಿಂದ ಎಂಟು ಗಂಟೆ ನಿದ್ದೆ ಅವಶ್ಯಕವಾಗಿ ಬೇಕು. ಇನ್ನು ಕೆಲವರು ಹಾಸಿಗೆ ಬಿದ್ದ ಕೂಡಲೇ ಕಣ್ಣಿಗೆ ನಿದ್ದೆ ಹತ್ತಲು ವಿವಿಧ ಭಂಗಿಯಲ್ಲಿ ಮಲಗುತ್ತಾರೆ. ಹೆಚ್ಚಿನವರಿಗೆ ಮೊಣಕಾಲಿನ ನಡುವೆ ತಲೆದಿಂಬು ಇಟ್ಟು ಮಲಗುವ ಅಭ್ಯಾಸವಿರುತ್ತದೆ. ಸದ್ಯ ಈ ರೀತಿ ಮಲಗುವವರು ಆರೋಗ್ಯ ದೃಷ್ಟಿಯಲ್ಲಿ ತುಂಬಾ ಅದೃಷ್ಟವಂತರು. ಹೌದು, ಮೊಣಕಾಲಿನ ನಡುವೆ ತಲೆದಿಂಬು ಇಟ್ಟು ಮಲಗುವುದರಿಂದ ಹಲವು ಆರೋಗ್ಯ (Health Tips) ಸಮಸ್ಯೆಗಳಿಂದ ಪಾರಾಗಬಹುದಂತೆ. ಒಬ್ಬರಿಗಿಂತ ಮತ್ತೊಬ್ಬರ ನಿದ್ದೆ ಮಾಡುವ ಭಂಗಿಯು ಭಿನ್ನವಾಗಿರುವುದು ಸಹಜ. ಈ ನಿದ್ದೆ ಮಾಡುವ ಭಂಗಿಯು ಹಲವಾರು ಆರೋಗ್ಯ ಸಮಸ್ಯೆಗಳನ್ನು ತರಬಹುದು. ಆದರೆ ಕೆಲವು ನಿದ್ದೆಯ ಭಂಗಿಯಿಂದ ಸಮಸ್ಯೆಗಳು ದೂರ ಹೋಗುತ್ತವೆ.

Advertisement

ಇದನ್ನೂ ಓದಿ: Accident: ಪುತ್ತೂರು; ಬಸ್ ಮತ್ತು ಬೈಕ್‌ ನಡುವೆ ಭೀಕರ ಅಪಘಾತ! ಬೈಕ್ ಸವಾರ ಸ್ಥಳದಲ್ಲೇ ಮೃತ್ಯು!

ಸದ್ಯ ಮೊಣಕಾಲುಗಳ ನಡುವೆ ತಲೆ ಇಟ್ಟು ಮಲಗುವುದರಿಂದ ಆರಾಮವಾಗಿ ನಿದ್ದೆ ಬರುತ್ತದೆ. ಆಗ ನಿಮ್ಮ ನಿದ್ರಾಹೀನತೆ ಸಮಸ್ಯೆ ಮಾಯವಾಗುತ್ತದೆ. ಜೊತೆಗೆ ಸ್ನಾಯು ಸೆಳೆತ ಕಡಿಮೆಯಾಗುತ್ತದೆ. ಬೆನ್ನುಮೂಳೆಯ ಸಮಸ್ಯೆಯು ಕಾಡುವುದಿಲ್ಲ. ಅದಲ್ಲದೆ ದೇಹದ ಎಲ್ಲಾ ಭಾಗಗಳಿಗೂ ರಕ್ತ ಸಂಚಾರವಾಗುತ್ತದೆ.

Advertisement

ಇದನ್ನೂ ಓದಿ: KCET 2024: CET ಗೆ 2nd ಪಿಯುಸಿ ಅಂಕಗಳನ್ನು ಅಪ್ಲೋಡ್ ಮಾಡಲು ಲಾಸ್ಟ್ ಡೇಟ್ ಫಿಕ್ಸ್ !!

ಮುಖ್ಯವಾಗಿ ಗರ್ಭಿಣಿಯರು ಎಡಬದಿಯಲ್ಲಿ ಮಲಗುವುದು ಹಾಗೂ ಮೊಣಕಾಲುಗಳ ನಡುವೆ ತಲೆದಿಂಬು ಇಟ್ಟು ಮಲಗುವ ಅಭ್ಯಾಸವು ಹುಟ್ಟುವ ಮಗುವಿಗೆ ತುಂಬಾ ಒಳ್ಳೆಯದಂತೆ. ರಕ್ತ ಪರಿಚಲನೆಯು ಸರಿಯಾಗಿಯಾದರೆ ನೋವುಗಳು ಇದ್ದಲ್ಲಿ ಕಡಿಮೆಯಾಗುತ್ತವೆ. ಇನ್ನು ಮೊಣಕಾಲುಗಳ ನಡುವೆ ತಲೆದಿಂಬು ಇಟ್ಟುಕೊಂಡು ಮಲಗುವುದರಿಂದ ನರಗಳ ಸಮಸ್ಯೆಯೂ ದೂರವಾಗುತ್ತದೆ.

Advertisement
Advertisement
Advertisement