ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Health Tips: ನಿಮಗೆ 30 ವರ್ಷ ದಾಟಿದ್ದರೆ, ಮಹಿಳೆಯರೇ ಈ ಆಹಾರ ಖಂಡಿತ ಮಿಸ್‌ ಮಾಡಬೇಡಿ

10:13 PM Feb 07, 2024 IST | ಹೊಸ ಕನ್ನಡ
UpdateAt: 10:13 PM Feb 07, 2024 IST
Advertisement

ಮನುಷ್ಯನಿಗೆ ವಯಸ್ಸಾದಂತೆ ಅವನ ದೇಹಕ್ಕೆ ಪೋಷಕಾಂಶಗಳು ಬೇಕಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಹೆಚ್ಛಿನ ಪ್ರಮಾಣದ ಪೋಷಕಾಂಶಗಳು ಅಗತ್ಯ. 30 ವರ್ಷದ ನಂತರ ಇದರ ಆದ್ಯತೆ ಮತ್ತೋಷ್ಟು ಹೆಚ್ಚಾಗುತ್ತದೆ.

Advertisement

ಇದನ್ನೂ ಓದಿ: Health News: ಹೃದಯಾಘಾತ-ಪಾರ್ಶ್ವವಾಯು ಮುಖ್ಯ ಲಕ್ಷಗಳೇನು? WHO ನೀಡಿದೆ ಮಹತ್ವದ ಮಾಹಿತಿ

ಮಹಿಳೆಯರು ದುರ್ಬಲವಾಗುವುದಕ್ಕೆ ಪೀರಿಯಡ್ ಮತ್ತು ಗರ್ಭ ಧರಿಸುವುದು ಮುಖ್ಯ ಕಾರಣ.30 ವರ್ಷ ದಾಟಿದ ಮಹಿಳೆಯರು ತಮ್ಮ ಡಯೆಟ್ನಲ್ಲಿ ಈ ಕೆಲವು ಪೌಷ್ಟಿಕಾಂಶಗಳನ್ನು ಸೇರಿಸಿಕೊಳ್ಳಲೇಬೇಕು.

Advertisement

ಇಂದು ನಾವು ವಿಷಯುಕ್ತ ಆಹಾರವನ್ನು ಸೇವಿಸುತ್ತಿದ್ದೇವೆ. ಇದು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಛಿನ ಪ್ರಭಾವ ಬೀರುತ್ತದೆ.

ಮಹಿಳೆಯರ ದೇಹದಲ್ಲಿ ಪೌಷ್ಟಿಕಾಂಶಗಳ ನಷ್ಟ ಹೆಚ್ಚಾಗುವುದರಿಂದ ಅವರು ತಮ್ಮ ಆಹಾರದಲ್ಲಿ ಕೆಲವು ಪೌಷ್ಟಿಕಾಂಶಗಳನ್ನು ಸೇರಿಸಿಕೊಳ್ಳಲೇಬೇಕು. ಅಂತಹ ಕೆಲವು ಅಗತ್ಯ ನ್ಯೂಟ್ರಿಯೆಂಟ್ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಈ ಬಗ್ಗೆ ಖ್ಯಾತ ಪೌಷ್ಟಿಕತಜ್ಞರಾದ ಲೊವ್ನೀತ್ ಬಾತ್ರಾ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದು, 30 ವರ್ಷ ದಾಟಿದ ಮಹಿಳೆಯರಿಗೆ ಅಗತ್ಯವಾಗಿರುವ 5 ಪೋಷಕಾಂಶಗಳ ಬಗ್ಗೆ ಹೇಳಿದ್ದಾರೆ. ಅವುಗಳೆಂದರೆ,

ವಿಟಮಿನ್ ಡಿ: ಇದನ್ನು ಹಾರ್ಮೋನ್ಗಳ ಮಾಸ್ಟರ್ ಎನ್ನುತ್ತಾರೆ. ಇದು ನಮ್ಮ ದೇಹದಲ್ಲಿ ಹಾರ್ಮೋನ್ ಸಮತೋಲನವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಕಬ್ಬಿಣ: ನಮ್ಮಲ್ಲಿ ಬಹು ಜನರು ನನಗೆ ಆಯಾಸ ಆಗುತ್ತಿದೆ ಎಂದು ಹೇಳುತ್ತಾರೆ. ಅದಕ್ಕೆ ಕಾರಣ ಕಬ್ಬಿಣ ಅಂಶ. ಹೆಚ್ಚು ಕಬ್ಬಿಣ ಅಂಶ ಇರುವ ಆಹಾರವನ್ನು ಸೇವಿಸಿ. ಇದು ರಕ್ತ ಹೀನತೆಯನ್ನು ಹಾಗೂ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಹೀರಿಕೆಗೆ ಸಹಾಯ ಮಾಡುತ್ತದೆ.

ಒಮೆಗಾ 3: ಇದು ಹೃದಯ ಹಾಗೂ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ಹೆಚ್ಚು ಉಪಯುಕ್ತ ಇರುವ ಹಾರ್ಮೋನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

ಕ್ಯಾಲ್ಸಿಯಂ: ಮೂಳೆಗಳನ್ನು ಬಲ ಪಡಿಸುತ್ತದೆ.

ವಯಸ್ಸಾದಂತೆ ಮೂಳೆ ಸಾಂದ್ರತೆಯು ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ. ಬಲವಾದ ಮೂಳೆಗಳಿಗೆ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯ ಮತ್ತು ಶಕ್ತಿಗಾಗಿ ದೇಹದಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಸೇವನೆಯು ಮುಖ್ಯವಾಗಿದೆ.

ಫೋಲೇಟ್: ಇದು ಆಹಾರದಲ್ಲಿ ಬೆರೆಸಿಕೊಂಡು ತಿನ್ನಬಹುದಾದ ವಿಟಮಿನ್ ಆಗಿದೆ. ಇದು ನೀರಿನಲ್ಲಿ ಕರಗುತ್ತದೆ. ಗರ್ಭಿಣಿಯರು ಸಾಮನ್ಯವಾಗಿ ಇದನ್ನು ಸೇವಿಸುತ್ತಾರೆ. ಇದರಿಂದ ಮಗುವಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ .ಫೋಲಿಕ್ ಆಮ್ಲವು ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ.

Related News

Advertisement
Advertisement