For the best experience, open
https://m.hosakannada.com
on your mobile browser.
Advertisement

Children heart attack Symptoms: ಪೋಷಕರೇ ಎಚ್ಚರ - ಮಕ್ಕಳಗೆ ಹೃದಯಾಘಾತ ಆಗೋದಾದ್ರೆ ಈ ಲಕ್ಷಣಗಳು ಕಂಡುಬರುತ್ತೆ.

04:54 AM Jan 24, 2024 IST | ಹೊಸ ಕನ್ನಡ
UpdateAt: 05:15 AM Jan 24, 2024 IST
children heart attack symptoms  ಪೋಷಕರೇ ಎಚ್ಚರ   ಮಕ್ಕಳಗೆ ಹೃದಯಾಘಾತ ಆಗೋದಾದ್ರೆ ಈ ಲಕ್ಷಣಗಳು ಕಂಡುಬರುತ್ತೆ
Advertisement

Children heart attack Symptoms: ಹೃದಯಘಾತ ಮೊದಲೆಲ್ಲ ಪ್ರಾಯ ಆದವರಿಗೆ ಬಂದೆರಗುತ್ತಿತ್ತು. ಆದರೆ ಇಂದು ಚಿಕ್ಕವರು, ದೊಡ್ಡವರು ಎಂದು ನೋಡದೆ ಎಲ್ಲರಿಗೂ ಇದು ಅಟ್ಯಾಕ್ ಆಗುತ್ತಿದೆ. ಹಾಗೆ ನೋಡಿದರೆ ಇಂದು ಯುವ ಜನರಿಗೇ ಹೆಚ್ಚು ಹೃದಯಾಘಾತ ಆಗುತ್ತಿದೆ ಎನ್ನಬಹುದು. ಅದರಲ್ಲೂ 5-6ವರ್ಷದ ಪುಟ್ಟ ಕಂದಮ್ಮಗಳಿಗೂ ಹೃದಯಾಘಾತ ಉಂಟಾಗುವುದು, ಬಾಳಿ ಬದುಕಬೇಕಿದ್ದ ಕಂದಮ್ಮಗಳು ಎಳವೆಯಲ್ಲಿಯೇ ಕಮರಿ ಹೋಗುತ್ತಿರುವುದು ಅಘಾತಕಾರಿ ಸಂಗತಿಯಾಗಿದೆ.

Advertisement

ಇದನ್ನೂ ಓದಿ: Parliment election 2024: ಲೋಕಸಭಾ ಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ !!

ಹೀಗಾಗಿ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಕುರಿತು ಹೆಚ್ಚು ಗಮನಹರಿಸಬೇಕಾಗುತ್ತದೆ. ಆರೋಗ್ಯಕರ ಜೀವನ ನಡೆಸಲು ತಮ್ಮ ಜೀವನ ಶೈಲಿಯನ್ನೂ ಬದಲಿಸಿಕೊಳ್ಳಬೇಕಾಗುತ್ತದೆ. ಇನ್ನು ಮಕ್ಕಳಿಗೆ ಹೃದಯಾಘಾತ ಆಗುತ್ತದೆ ಎಂದಾದರೆ ಈ ಲಕ್ಷಣಗಳು(children heart attack Symptoms) ಕಂಡುಬರುತ್ತದೆ. ಹೀಗಾಗಿ ದಯವಿಟ್ಟು ಪೋಷಕರು ಇದನ್ನು ಗಮನಿಸಿ, ಎಚ್ಚೆತ್ತುಕೊಳ್ಳಬೇಕು.

Advertisement

ಮಕ್ಕಳಲ್ಲಿ ಹೃದಯಾಘಾತದ ಲಕ್ಷಣಗಳು ಹೀಗಿವೆ:

– ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪುವುದು

– ಆಯಾಸ

– ಎದೆಯಲ್ಲಿ ನೋವು

– ಅನಿಯಮಿತ ಉಸಿರಾಟ

– ಅತಿಯಾದ ಹೃದಯ ಬಡಿತ

ಮಕ್ಕಳಲ್ಲಿ ಹೃದಯಾಘಾತವನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಿ-

ಮಕ್ಕಳು ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಿ. ಇದರಿಂದ ಚಲನಶೀಲತೆ ಮತ್ತು ನಮ್ಯತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

• ಪ್ರೋಟೀನ್, ಫೈಬರ್ ಮತ್ತು ಖನಿಜ ಇರುವ ಆಹಾರಗಳನ್ನು ಹೆಚ್ಚಾಗಿ ಮಕ್ಕಳಿಗೆ ನೀಡಿ.

• ಮಗುವಿನ ದೇಹವನ್ನು ಯಾವಾಗಲೂ ಹೈಡ್ರೀಕರಿಸಿದಂತೆ ನೋಡಿಕೊಳ್ಳಿ. ಇದು ಎಲ್ಲಾ ಹಾನಿಕಾರಕ ಟಾಕ್ಸಿನ್‌ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

Advertisement
Advertisement
Advertisement