ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Tulasi: ಉಸಿರಾಟ ಸಮಸ್ಯೆಯಿಂದ ಬೊಜ್ಜು ಕರಗಿಸೋವಂತ ಎಲ್ಲಾ ರೋಗಕ್ಕೂ ಮನೆಯಲ್ಲೇ ಸಿಗೋ ಈ ಒಂದು ಎಲೆಯೇ ರಾಮಬಾಣ !!

04:17 PM Dec 30, 2023 IST | ಅಶ್ವಿನಿ ಹೆಬ್ಬಾರ್
UpdateAt: 04:17 PM Dec 30, 2023 IST
Advertisement

Tulsi Benefits: ಹಿಂದೂ ಧರ್ಮದಲ್ಲಿ (Hindu Religion)ಪೂಜನೀಯ ಸ್ಥಾನಮಾನ ಪಡೆದಿರುವ ತುಳಸಿ (Tulasi)ಸಸ್ಯದಲ್ಲಿ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ. ತುಳಸಿ ಸಸ್ಯಕ್ಕೆ ಸಂಬಂಧಿಸಿದ ಕೆಲವು ಪರಿಹಾರಗಳು ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು (Positivity)ತರುತ್ತದೆ ಎಂದು ನಂಬಲಾಗಿದೆ. ಭಾರತದಲ್ಲಿ ಬಹುತೇಕ ಮನೆಗಳಲ್ಲಿ ಕಂಡು ಬರುವ ತುಳಸಿ ಔಷಧೀಯ ಗಣಿ ಎಂದರು ಕೂಡ ತಪ್ಪಾಗದು. ತುಳಸಿಯಿಂದ ಏನೆಲ್ಲ ಆರೋಗ್ಯ ಪ್ರಯೋಜನಗಳಿವೆ(Tulsi Benefits) ಗೊತ್ತಾ?

Advertisement

 

ತುಳಸಿ ಎಲೆಗಳು ಮಾತ್ರವಲ್ಲ, ತುಳಸಿ ಸಸ್ಯದ ಪ್ರತಿಯೊಂದು ಭಾಗವೂ ಕೂಡ ಆರೋಗ್ಯಕ್ಕೆ ಅದ್ಭುತ ಪ್ರಯೋಜನವನ್ನು ನೀಡುತ್ತದೆ. ತುಳಸಿ ಬಳಕೆಯಿಂದ ಹಲವು ಗಂಭೀರ ಆರೋಗ್ಯ ಕಾಯಿಲೆಗಳಿಂದಲೂ(Health Benefits)ಪರಿಹಾರ ಪಡೆಯಬಹುದು.

Advertisement

# ಚರ್ಮಕ್ಕೆ ಪ್ರಯೋಜನಕಾರಿ:

ತುಳಸಿ ಸಸ್ಯವು ಚರ್ಮ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ನಿಯಮಿತವಾಗಿ ತುಳಸಿ ಬಳಕೆಯಿಂದ ಮೊಡವೆಗಳಿಂದ ಪರಿಹಾರ ಕಂಡುಕೊಳ್ಳಬಹುದು.ಅಷ್ಟೇ ಅಲ್ಲದೆ, ಸ್ವಚ್ಛವಾದ ಚರ್ಮವನ್ನು ಪಡೆಯಲು ನೆರವಾಗುತ್ತದೆ.

# ಉಸಿರಾಟದ ಆರೋಗ್ಯವನ್ನು ಹೆಚ್ಚಿಸುತ್ತದೆ:

ತುಳಸಿಯನ್ನು ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಉಪಯೋಗಿಸಲಾಗುತ್ತದೆ. ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಕೆಮ್ಮು, ಶೀತ ಮತ್ತು ಬ್ರಾಂಕೈಟಿಸ್‌ನಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

# ಜೀರ್ಣಕ್ರಿಯೆಗೆ ಸಹಕಾರಿ:

ತುಳಸಿ ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.ಅಜೀರ್ಣ, ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆ ನಿವಾರಿಸುತ್ತದೆ.

# ಉರಿಯೂತ ನಿವಾರಕ:

ತುಳಸಿಯ ಉರಿಯೂತದ ಗುಣಲಕ್ಷಣಗಳು ಉರಿಯೂತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ತುಳಸಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಕೀಲು ಮತ್ತು ಅಂಗಾಂಶಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ತುಳಸಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಅಂಶಗಳಿದ್ದು ಇದು ಗಾಯವನ್ನು ಬಹುಬೇಗ ಗುಣಪಡಿಸುತ್ತದೆ.

# ಒತ್ತಡ ಕಡಿತ ಮತ್ತು ಮಾನಸಿಕ ಯೋಗಕ್ಷೇಮ:

ತುಳಸಿಯಿಂದ ದೈಹಿಕ ಆರೋಗ್ಯ ಪ್ರಯೋಜನಗಳ ಜೊತೆಗೆ ತುಳಸಿ ಮಾನಸಿಕ ಯೋಗಕ್ಷೇಮದ ಮೇಲೆ ಕೂಡ ಸಕಾರಾತ್ಮಕ ಪ್ರಭಾವ ಬೀರುತ್ತದೆ. ತುಳಸಿಯನ್ನು ದಿನನಿತ್ಯ. ಸೇವಿಸುವುದರಿಂದ ಒತ್ತಡವನ್ನು ನಿರ್ವಹಿಸಲು ಮತ್ತು ಮಾನಸಿಕ ಆರೋಗ್ಯ ಕಾಪಾಡಲು ನೆರವಾಗುತ್ತದೆ.

# ಕೊಲೆಸ್ಟ್ರಾಲ್ ನಿರ್ವಹಣೆ:

ತುಳಸಿಯು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವ ಸಾಮರ್ಥ್ಯ ಒಳಗೊಂಡಿದೆ. ತುಳಸಿ ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸುವ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

Advertisement
Advertisement