Health Tip: ದಿನವೂ ಸೊಂಟ, ಮಂಡಿ ನೋವು ಕಾಡುತ್ತಾ?! ಹಾಲಿಗೆ ಈ ಒಂದು ವಸ್ತು ಹಾಕಿ ದಿನಕ್ಕೊಮ್ಮೆ ಗುಟುಕಿಸಿ ಸಾಕು, ಎಲ್ಲಾ ನೋವು ಮಂಗಮಾಯ
Health Tip: ಬಹುತೇಕರಿಗೆ ಬಿಸಿ ಹಾಲು ಕುಡಿಯುವ ಅಭ್ಯಾಸ ಇರಬಹುದು. ಅಂತವರು ಇಲ್ಲಿ ಗಮನಿಸಿ. ನೀವು ಹಾಲು ಮಾತ್ರ ಸೇವಿಸಿದರೆ ಹಾಲಿನ ಪೋಷಕ ಅಂಶ ಮಾತ್ರ ನಿಮಗೆ ದೊರೆಯುತ್ತದೆ. ಆದ್ರೆ ಬಿಸಿ ಹಾಲಿಗೆ ಈ ವಸ್ತು ಹಾಕಿ ದಿನಕ್ಕೊಮ್ಮೆ ಕುಡಿದರೆ ಸೊಂಟ ನೋವು ಮಂಡಿ ನೋವಿಗೆ ಸಿಗುವುದು ಶಾಶ್ವತ ಪರಿಹಾರ. ಆಗಲೇ ಹಾಲು ಸಂಪೂರ್ಣ ಆಹಾರ ಎಂದು ಕರೆಯಲ್ಪಡುತ್ತದೆ. ಏಕೆಂದರೆ ಇದರಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ.
ಹೌದು, ಹಾಲಿನಿಂದಲೇ ಮಾಡಲ್ಪಡುವ ಪದಾರ್ಥವೇ ತುಪ್ಪ. ತುಪ್ಪವನ್ನು ದ್ರವರೂಪದ ಚಿನ್ನ ಎಂದು ಕರೆಯುತ್ತಾರೆ. ಹಾಲಿನೊಂದಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು (Health Tip) ಪಡೆಯಬಹುದು. ತುಪ್ಪ ಸೇವಿಸುವ ಮೂಲಕ ಹಾಲಿನ ಕೊಬ್ಬಿನಲ್ಲಿರುವ ಕರಗುವ ಜೀವಸತ್ವಗಳನ್ನು (ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಮತ್ತು ವಿಟಮಿನ್ ಕೆ) ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ನೀಡುತ್ತದೆ.
ತುಪ್ಪ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಇದು ದೈಹಿಕ ಚಟುವಟಿಕೆಯಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಈ ಇದನ್ನು ಹಾಲಿನೊಂದಿಗೆ ಬೆರೆಸಲು ಸಲಹೆ ನೀಡಲಾಗುತ್ತದೆ. ಆದ್ದರಿಂದ ತುಪ್ಪದೊಂದಿಗೆ ಹಾಲು ಕುಡಿಯುವುದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ತೂಕ ನಷ್ಟಕ್ಕೆ ಇದು ತುಂಬಾ ಸಹಾಯಕವಾಗಿದೆ.
ಇನ್ನು ತುಪ್ಪ ಮತ್ತು ಹಾಲಿನ ಸಂಯೋಜನೆಯು ದೇಹಕ್ಕೆ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯನ್ನು ಒದಗಿಸುತ್ತದೆ. ಮೂಳೆಗಳ ಆರೋಗ್ಯಕ್ಕೆ ಇದು ಪ್ರಯೋಜನಕಾರಿ. ತುಪ್ಪವು ಕೀಲುಗಳಿಗೆ ನೈಸರ್ಗಿಕ ಲೂಬ್ರಿಕಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಕೀಲು ನೋವಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ಮುಖ್ಯವಾಗಿ ನಿದ್ರಾಹೀನತೆಯಿಂದ ಬಳಲುತ್ತಿರುವವರು ಪ್ರತಿದಿನ ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲಿಗೆ ತುಪ್ಪ ಬೆರೆಸಿ ಕುಡಿಯಿರಿ. ಇದು ಅವರ ನಿದ್ರಾಹೀನತೆಯ ಸಮಸ್ಯೆಯನ್ನು ಪರಿಹರಿಸುತ್ತದೆ.
ಅದಲ್ಲದೆ ಹೊಟ್ಟೆಯ ಆಮ್ಲಗಳ ಸ್ರವಿಸುವಿಕೆಯನ್ನು ಉತ್ತೇಜಿಸುವ ಮೂಲಕ ಮತ್ತು ಜೀರ್ಣಾಂಗವ್ಯೂಹದ ಆರೋಗ್ಯವನ್ನು ಸುಧಾರಿಸುತ್ತದೆ.
ಇದನ್ನು ಓದಿ: Bengaluru School Holiday:ನಾಳೆ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ರಜೆ ಇದ್ಯೋ, ಇಲ್ವೋ ?! ಇಲ್ಲಿದೆ ಮಾಹಿತಿ