ICMR: ಕೊರೊನಾ ಲಸಿಕೆ ಪಡೆದವರಿಗೆ ಹೃದಯಾಘಾತ ?! ICMR ಹೇಳಿದ್ದೇನು?
ICMR: ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಹೃದಯಾಘಾತವೇ ಹೆಚ್ಚು. ಇದು ಪುಟ್ಟ ಮಕ್ಕಳೆನ್ನದೆ ಎಲ್ಲರನ್ನೂ ಬಲಿಪಡೆಯುತ್ತಿದೆ. ಈ ಹೃದಯಾಘಾತ ಉಂಟಾಗಲು ಕೋವಿಡ್ ಲಸಿಕೆಯೇ(Covid vacation) ಕಾರಣ, ಇದನ್ನು ಪಡೆದವರಿಗಷ್ಟೆ ಹೆಚ್ಚು ಹೃದಯಾಘಾತವಾಗುತ್ತಿದೆ ಎಂಬುದಾಗಿ ಕೆಲವು ಅಧ್ಯಯನಗಳು ಹೇಳಿವೆ ಎಂದು ಹೆಚ್ಚಿನವರು ಹೇಳುತ್ತಿದ್ದರು. ಆದರೀಗ ಈ ಕುರಿತು ICMR ಸ್ಪಷ್ಟೀಕರಣ ನೀಡಿದೆ.
ಹೌದು, ಕರೋನಾ ಲಸಿಕೆಯಿಂದಲೇ ಹೃದಯಾಘಾತ ಸಂಭವಿಸುತ್ತಿದೆ ಎಂದು ಅನೇಕ ಮಂದಿ ಭಯಭೀತರಾಗಿದ್ದರು. ಆದರೀಗ ಇದು ಸುಳ್ಳು ಎಂಬ ಸುದ್ದಿ ಹೊರಬಿದ್ದಿದೆ. ಯಾಕೆಂದರೆ ಕೋವಿಡ್-19 ವ್ಯಾಕ್ಸಿನೇಷನ್‌ಗೂ ಮತ್ತು ದೇಶದಲ್ಲಿ ಸಂಭವಿಸುತ್ತಿರುವ ಹಠಾತ್ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
ಜನರಲ್ಲಿ ಈ ರೀತಿಯ ಆತಂಕ ಹೆಚ್ಚಿದ ಬಳಿಕ ಸಂಶೋದನಾ ಸಂಸ್ಥೆ, 18-45 ವರ್ಷ ವಯಸ್ಸಿನ ಭಾರತೀಯ ವಯಸ್ಕರಲ್ಲಿ ಹಠಾತ್ ಸಾವುಗಳಿಗೆ ಕಾರಣವೇನು ಎಂಬುದನ್ನು ಅಧ್ಯಯನ ಮಾಡಿದೆ. ಸಂಶೋಧಕರು ಈ ಬಗ್ಗೆ 729 ಪ್ರಕರಣಗಳ ಮಾಹಿತಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿದೆ. ಅಧ್ಯಯನ ಮಾಡಲಾದ ಪ್ರಕರಣಗಳು 18-45 ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳು ಯಾವುದೇ ಅಸ್ವಸ್ಥತೆಗಳಿಲ್ಲದೆ ಅಕ್ಟೋಬರ್ 1, 2021- ಮಾರ್ಚ್ 31, 2023 ರ ನಡುವೆ ನಿಗೂಢ ಕಾರಣಗಳಿಂದ ಮರಣ ಹೊಂದಿದ್ದಾರೆ. ಇದಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ತಿಳಿಸಿದೆ.
ಅಲ್ಲದೆ ಯುವಕರಲ್ಲಿ ಹಠಾತ್ ಹೃದಯಾಘಾತ ಸಂಭವಿಸುತ್ತಿದೆ. ಈ ಸಾವುಗಳಿಗೂ ಕೋವಿಡ್ ವ್ಯಾಕ್ಸಿನೇಷನ್‌ಗೂ ಯಾವುದೇ ಸಂಬಂಧ ಇಲ್ಲ. ಅದನ್ನು ಸಾಬೀತುಪಡಿಸಲು ಯಾವುದೇ ಪುರಾವೆ ನಮಗೆ ಕಂಡುಬಂದಿಲ್ಲ ಎಂದು ಸಂಶೋಧನಾ ತಂಡವು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಿದೆ.