ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Fenugreek Seeds Benefits: ಪುರುಷರೇ ದಿನಕ್ಕೆ ಒಂದು ಚಮಚ ಇದನ್ನು ಸೇವಿಸಿ ಸಾಕು - ಮತ್ತೆ ನಿಮ್ಮ ಸಾಮರ್ಥ್ಯದ ಚಮತ್ಕಾರ ನೋಡಿ

03:25 PM Nov 15, 2023 IST | ಅಶ್ವಿನಿ ಹೆಬ್ಬಾರ್
UpdateAt: 03:25 PM Nov 15, 2023 IST
Advertisement

Fenugreek Seeds Benefits: ಬಹಳ ಹಿಂದಿನ ಕಾಲದಿಂದಲೂ ಮೆಂತ್ಯವನ್ನು (Fenugreek)ಅಡುಗೆ ಪದಾರ್ಥವಾಗಿ ಮಾತ್ರವಲ್ಲದೆ ಔಷಧಿಯಾಗಿಯೂ ಬಳಕೆ ಮಾಡಲಾಗುತ್ತಿದೆ. ಮೆಂತ್ಯ ಬೀಜಗಳು ಸ್ವಲ್ಪ ಕಹಿ ರುಚಿಯನ್ನು ಹೊಂದಿದ್ದರು ಕೂಡ ಅನೇಕ ಉಪಯೋಗಗಳನ್ನು ಒಳಗೊಂಡಿದೆ.

Advertisement

ಮೆಂತ್ಯ ಕಾಳುಗಳು ಕೀಲು ನೋವು ಹೋಗಲಾಡಿಸುವ ಜೊತೆಗೆ ತೂಕ ಇಳಿಕೆಯಲ್ಲಿ ನೆರವಾಗುತ್ತವೆ. ಅಷ್ಟೇ ಅಲ್ಲದೆ ಲೈಂಗಿಕ ಸಮಸ್ಯೆಗಳನ್ನು ಹೊಂದಿರುವ ಪುರುಷರಿಗೂ ಕೂಡ ಹೆಚ್ಚು ಪ್ರಯೋಜನಕಾರಿಯಾಗಿದೆ. ಮೆಂತ್ಯ ಬೀಜಗಳಲ್ಲಿ ನರಿಂಗನಿನ್ ಎಂಬ ಪ್ಲೇವನಾಯ್ಡ್ ಅಂಶವಿದ್ದು, ಇದು ರಕ್ತದಲ್ಲಿನ ಲಿಪಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಇದರ ಜೊತೆಗೆ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನೆರವಾಗುತ್ತದೆ. ಮೆಂತ್ಯ ಬೀಜಗಳ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣ ಮಾಡಲು ನೆರವಾಗುತ್ತದೆ. ಮೆಂತ್ಯ ಬೀಜಗಳಲ್ಲಿರುವ ಹೈಪೊಗ್ಲಿಸಿಮಿಕ್ ಪರಿಣಾಮದಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಮೆಂತ್ಯ ಬೀಜಗಳಲ್ಲಿ ಲಿನೋಲೆನಿಕ್ ಮತ್ತು ಲಿನೋಲಿಕ್ ಆಸಿಡ್ ಸಮೃದ್ಧವಾಗಿದ್ದು, ಈ ಆಮ್ಲದ ಪೆಟ್ರೋಲಿಯಂ ಈಥರ್ ಸಾರವು ಉರಿಯೂತದ ಚಟುವಟಿಕೆಯನ್ನು ಒಳಗೊಂಡಿದೆ. ಇದು ದೇಹದ ಉರಿಯೂತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಮೆಂತ್ಯದಲ್ಲಿ ಹಲವು ರೀತಿಯ ಪಾಲಿಫಿನಾಲ್ ಅಂಶಗಳು ಕಂಡು ಬರಲಿದ್ದು, ಇದು ತೂಕವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಮೆಂತ್ಯವು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುವಲ್ಲಿ ನೆರವಾಗುತ್ತದೆ.

Advertisement

ಲೈಂಗಿಕ ಸಮಸ್ಯೆಗಳನ್ನು ಹೊಂದಿದ್ದರೆ, ಆಹಾರದಲ್ಲಿ ಮೆಂತ್ಯವನ್ನು ಬಳಕೆ ಮಾಡುವುದು ಉತ್ತಮ. ಅನೇಕ ಸಂಶೋಧನೆಗಳಲ್ಲಿ ಮೆಂತ್ಯ ಬೀಜಗಳಲ್ಲಿ ಕಂಡುಬರುವ ಸಪೋನಿನ್ ಪುರುಷರಲ್ಲಿ ಕಂಡುಬರುವ ಟೆಸ್ಟೋಸ್ಟೆರಾನ್ ಹಾರ್ಮೋನುಗಳನ್ನು ಉತ್ತೇಜನ ನೀಡುತ್ತದೆ. ಲೈಂಗಿಕ ಸಮಸ್ಯೆಗಳನ್ನು ಕೂಡ ನಿವಾರಿಸುತ್ತದೆ. ಪ್ರತಿದಿನ ಒಂದು ಚಮಚ ಮೆಂತ್ಯ ಬೀಜಗಳನ್ನು ಸೇವನೆ ಮಾಡಬಹುದು. ಮೆಂತ್ಯವು ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕಗಳಂತಹ ಗುಣಗಳನ್ನು ಒಳಗೊಂಡಿದ್ದು, ಇದರಿಂದ ಕೀಲು ನೋವನ್ನು ಹೋಗಲಾಡಿಸಲು ಸಹಕರಿಸುತ್ತದೆ.

Advertisement
Advertisement