H D Devegowda: ಹಾಸನ ಲೋಕಸಭಾ ಅಭ್ಯರ್ಥಿ ಯಾರೆಂದು ಗುಟ್ಟು ಬಿಟ್ಟ ದೇವೇಗೌಡ್ರು- ಇವರೇ ನೋಡಿ JDS-BJP ಮೈತ್ರಿ ಅಭ್ಯರ್ಥಿ !!
H D Devegowda: ಮುಂಬರುವ ಲೋಕಸಭಾ ಚುನಾವಣೆಯಲ್ಲಿ 90ರ ದೇವೇಗೌಡರು ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದು ಎಲ್ಲರಿಗೂಯಕ್ಷ ಪ್ರಶ್ನೆಯಾಗಿತ್ತು. ಆದರೀಗ ಇದಕ್ಕೆ ಸ್ವತಃ ದೇವೇಗೌಡರೇ ಉತ್ತರ ನೀಡಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ(Parliament election)ನಾನು ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಹೇಳಿದ್ದಾರೆ. ಇದರೊಂದಿಗೆ ಹಾಸನ ಲೋಕಸಭಾ ಅಭ್ಯರ್ಥಿ ಯಾರೆಂದು ಸುಳಿವನ್ನೂ ನೀಡಿದ್ದಾರೆ.
ಇದನ್ನೂ ಓದಿ: Electric cars ಮೇಲೆ ಸಖತ್ ಆಫರ್, ಈಗಲೇ ಖರೀದಿಸಿ!
ಹೌದು, ರಾಜ್ಯದ ಲೋಕಸಭಾ ಕ್ಷೇತ್ರಗಳ ಪೈಕಿ ಹೈವೋಲ್ಟೇಜ್ ಕ್ಷೇತ್ರವಾದ ಹಾಸನ ಲೋಕಸಭಾ ಕ್ಷೇತ್ರದ ಬಗ್ಗೆ ಹಲವರಿಗೆ ಕಣ್ಣಿತ್ತು. ಈಗಾಗಲೇ ಈ ಕುರಿತಂತೆ ಹಲವು ಸಾಕಷ್ಟು ಚರ್ಚೆಯಾಗಿದ್ದವು. ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿ ಹುಡುಕಾಟದಲ್ಲಿ ನಿರತವಾಗಿದೆ. ಈ ನಡುವೆ ಕೆಲ ತಿಂಗಳ ಹಿಂದೆ ಕುಮಾರಸ್ವಾಮಿ ಅವರು ನಮ್ಮ ಕುಟುಂಬದಿಂದ ಲೋಕಸಮರಕ್ಕೆ ಯಾರೂ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಹೀಗಾಗಿ ಈ ಸಲ ಹಾಸನ ಯಾರ ಪಾಲಾಗುತ್ತೆ ಎಂಬುದು ಎಲ್ಲರಿಗೂ ಕುತೂಹಲ ಕೆರಳಿಸಿತ್ತು. ಆದರೀಗ ದೇವೇಗೌಡರು(H D Devegowda)ಇದಕ್ಕೆ ತೆರೆ ಎಳೆದಿದ್ದಾರೆ.
ಬೇಲೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಚುನಾವಣೆಗೆ ನಿಲ್ಲುವುದಿಲ್ಲ. ಆದರೆ ಓರ್ವ ಯುವಕನನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಈ ಮೂಲಕ ಪರೋಕ್ಷವಾಗಿ ಮತ್ತೊಮ್ಮೆ ಪ್ರಜ್ವಲ್ ರೇವಣ್ಣ(Prajwal revanna)ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಗೌಡರ ಈ ಹೇಳಿಕೆ ಯಿಂದ ಜೆಡಿಎಸ್-ಬಿಜೆಪಿ ಅಭ್ಯರ್ಥಿಯಾಗಿ ಪ್ರಜ್ವಲ್ ಕಣಕ್ಕಿಳಿಯುವುದು ಪಕ್ಕಾ ಎನ್ನಲಾಗಿದೆ.