ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Haveri: ಭೀಕರ ರಸ್ತೆ ಅಪಘಾತ; 13 ಜನ ಸ್ಥಳದಲ್ಲೇ ಸಾವು

Haveri: ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತವೊಂದು ನಡೆದಿದ್ದು, ಇಬ್ಬರು ಮಕ್ಕಳು ಸೇರಿ 13ಜನ ಸಾವಿಗೀಡಾಗಿದ್ದಾರೆ.
08:42 AM Jun 28, 2024 IST | ಸುದರ್ಶನ್
UpdateAt: 08:42 AM Jun 28, 2024 IST
Advertisement

Haveri: ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತವೊಂದು ನಡೆದಿದ್ದು, ಇಬ್ಬರು ಮಕ್ಕಳು ಸೇರಿ 13ಜನ ಸಾವಿಗೀಡಾಗಿರುವ ದುರದುಷ್ಟಕರ ಘಟನೆಯೊಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್‌ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Advertisement

Belthangady: ವಿದ್ಯುತ್‌ ಸ್ಪರ್ಶಿಸಿ ಮೃತ ಪಟ್ಟ ಯುವತಿ ಪ್ರಕರಣ; ಪ್ರತೀಕ್ಷಾ ಕುಟುಂಬಕ್ಕೆ ಐದು ಲಕ್ಷ ನೀಡಲು ಮೆಸ್ಕಾಂಗೆ ಸೂಚನೆ

Advertisement

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು ಮೃತ ಹೊಂದಿದವರು ಎಂದು ವರದಿಯಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಭದ್ರಾವತಿಗೆ ಮರಳಿ ಹೋಗುತ್ತಿರುವ ಸಂದರ್ಭದಲ್ಲಿ ತಡರಾತ್ರಿ 3.30ಗಂಟೆಗೆ ಈ ಭೀಕರ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಟಿಟಿ ವಾಹನ ನುಜ್ಜುಗುಜ್ಜಾಗಿದ್ದು, ವಾಹನದಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಟಿಟಿ ವಾಹನದಲ್ಲಿ 17 ಜನರು ಪ್ರಯಾಣ ಮಾಡುತ್ತಿದ್ದು, ಇದರಲ್ಲಿ ಒಟ್ಟು 13 ಜನರು ಮೃತ ಹೊಂದಿದ್ದಾರೆ. ಗಾಯಗೊಂಡ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

NEET UG 2024 ಮರು ಪರೀಕ್ಷೆಗೆ ಕಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಕ್, ತನಿಖೆ ನಡೆಯುತ್ತಿದ್ದಾಗ ಕೌನ್ಸಿಲಿಂಗ್ ಗೆ ಅನುಮತಿ ಕೊಟ್ಟ ಕೋರ್ಟ್ ನಡೆಯೇ ಪ್ರಶ್ನಾರ್ಹ !!

Advertisement
Advertisement