For the best experience, open
https://m.hosakannada.com
on your mobile browser.
Advertisement

RSS: ಉತ್ತರ ಪ್ರದೇಶದಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಕಾಣವೇನು? RSS ಕೊಟ್ಟ ಕಾರಣಗಳಿವು !!

RSS: ಲೋಕಸಭಾ ಚುನಾವಣೆಯಲ್ಲಿ(Parliament Election) ಬಿಜೆಪಿ(BJP) ಒಂದು ಹಂತಕ್ಕೆ ಮಕಾಡೆ ಮಲಗಿದೆ. ಬಿಜೆಪಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಉತ್ತರ ಪ್ರದೇಶ(Uttar Pradesh) ಎಂದೇ ಹೇಳಬಹುದು.
02:02 PM Jun 30, 2024 IST | ಸುದರ್ಶನ್
UpdateAt: 02:06 PM Jun 30, 2024 IST
rss  ಉತ್ತರ ಪ್ರದೇಶದಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಕಾಣವೇನು  rss ಕೊಟ್ಟ ಕಾರಣಗಳಿವು

RSS: ಲೋಕಸಭಾ ಚುನಾವಣೆಯಲ್ಲಿ(Parliament Election) ಬಿಜೆಪಿ(BJP) ಒಂದು ಹಂತಕ್ಕೆ ಮಕಾಡೆ ಮಲಗಿದೆ. ಬಿಜೆಪಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಉತ್ತರ ಪ್ರದೇಶ(Uttar Pradesh) ಎಂದೇ ಹೇಳಬಹುದು. ಸುಮಾರು 80 ರಷ್ಟು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಈ ಹಿಂದೆ ಎರಡು ಬಾರಿ ಬಿಜೆಪಿ 70ಕ್ಕೂ ಅಧಿಕ ಸ್ಥಾನ ಗೆದ್ದು ಜಯಭೇರಿ ಬಾರಿಸಿತ್ತು. ಆದರೆ ಈ ಸಲ ಕೇವಲ 30ರ ಆಸುಪಾಸಿನಲ್ಲಿ ತೃಪ್ತಿ ಪಟ್ಟುಕೊಂಡಿದೆ. ಆದರೆ ಇಲ್ಲಿನ ಹೀನಾಯ ಸೋಲಿಗೆ ಕಾರಣಗಳೇನು ಎಂಬುದು ಪ್ರಶ್ನೆ ಯಾಗಿದೆ. ಇದೀಗ ಅಚ್ಚರಿ ಎಂಬಂತೆ RSS ಇದಕ್ಕೆ ಉತ್ತರ ನೀಡಿದೆ.

Advertisement

Renukaswamy Murder Case: ರೇಣುಕಾಸ್ವಾಮಿ ಕೊಲೆ ಕೇಸ್‌; ನಟ ದರ್ಶನ್‌ ವಿರುದ್ಧ ಹೇಳಿಕೆ ನೀಡಿದ ಪವಿತ್ರಾಗೌಡ

UP ಯಲ್ಲಿ ಬಿಜೆಪಿ ಸೋಲಿಗೆ RSS ಕೊಟ್ಟ ಕಾರಣಗಳು:
* ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಲು ದಲಿತ ಮತ್ತು ಹಿಂದುಳಿದ ವರ್ಗಗಳ ಮತಬ್ಯಾಂಕ್‌ ವಿಭಜನೆಯಾಗಿದ್ದೇ ಪ್ರಮುಖ ಕಾರಣ.
* ದಲಿತ ಮತ್ತು ಹಿಂದುಳಿದ ವರ್ಗದ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್-ಸಮಾಜವಾದಿ ಮೈತ್ರಿಕೂಟ ಯಶಸ್ವಿಯಾಗಿದ್ದು ಬಿಜೆಪಿ ಹಿನ್ನಡೆಗೆ ಕಾರಣವಾಯ್ತು
* ನಿರುದ್ಯೋಗ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಯುವಕರಲ್ಲಿ ಹೆಚ್ಚುತ್ತಿರುವ ಕೋಪವೇ ಬಿಜೆಪಿಯ ಹಿನ್ನಡೆಗೆ ಮತ್ತೊಂದು ಕಾರಣ

Advertisement

ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ(Dattatreya Hosabale) ಅವರು ಬಿಜೆಪಿಯ ಚುನಾವಣಾ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಮೂರು ದಿನಗಳ ಕಾಲ ನಡೆಸಿದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಕ್ರಮಗಳ ಬಗ್ಗೆಯೂ ಚರ್ಚೆ:
ಹೀನಾಯ ಸೋಲಿನಿಂದ ಪಾಠ ಕಲಿತ ಬಿಜೆಪಿ ಮಾತೃ ಸಂಸ್ಥೆಯಾದ ಸಂಘವು ಈಗ ಉದ್ಯೋಗ ಹೆಚ್ಚಿಸುವಂತಹ ವಿಷಯಗಳಲ್ಲಿ ಕೆಲಸ ಮಾಡಲು ನಿರ್ಧರಿಸಿದೆ. ಇದು ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ತಲುಪುವಂತೆ ಕಾರ್ಯ ನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲೇ ಉತ್ತರಪ್ರದೇಶದ ಪ್ರಮುಖ ಪ್ರದೇಶಗಳಲ್ಲಿನ ತನ್ನ ಪ್ರಚಾರಕರನ್ನು ಸ್ಥಳಾಂತರ ಮಾಡಿ ಮರು ಸಂಘಟನೆಗೆ ಕಾರ್ಯತಂತ್ರ ರೂಪಿಸಿದೆ.

Man Ki Bhat: 3ನೇ ಬಾರಿ ಪ್ರಧಾನಿ ಆದ ಬಳಿಕ ಮೊದಲ ‘ಮನ್ ಕಿ ಬಾತ್’ ಪ್ರಸಾರ – ಏನೆಲ್ಲಾ ವಿಚಾರ ತೆರೆದಿಟ್ಟರು ಮೋದಿ ?!

Advertisement
Advertisement
Advertisement