Harrassement to School Girl: ಶಾಲೆಗೆ ಹೋಗುತ್ತಿದ್ದ ಬಾಲಕಿಯ ಹಿಂಬಾಲಿಸಿ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿ; ವೀಡಿಯೋ ವೈರಲ್
Harrassement to School Girl: ಶಾಲೆ ಮುಗಿಸಿ ಬರುತ್ತಿದ್ದ ಬಾಲಕಿಯೋರ್ವಳನ್ನು ಕಾಮುಕನೋರ್ವ ಬೆನ್ನಟ್ಟಿ ಬಂದಿದ್ದು, ಲೈಂಗಿಕ ಕಿರುಕುಳ ನೀಡಿರುವ ಘಟನೆಯೊಂದು ನಡೆದಿದ್ದು, ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ ಹಾಗೆ ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ವೀಡಿಯೋ ಬಾಂಗ್ಲಾದೇಶದೆಂದು ಹೇಳಲಾಗುತ್ತಿದೆ. ಬಾಲಕಿಯೊಬ್ಬಳು ಓಣಿಯೊಂದರಲ್ಲಿ ತನ್ನ ಪಾಡಿಗೆ ತಾನು ಹೋಗುತ್ತಿದ್ದು, ಇದನ್ನು ಗಮನಿಸಿದ್ದ ಕಾಮುಕನೋರ್ವ ಆಕೆಯನ್ನು ಬೆನ್ನಟ್ಟಿ ಬಂದಿದ್ದು, ಆಕೆಯನ್ನು ತಬ್ಬಿ ಹಿಡಿದು ಕಿರುಕುಳ ನೀಡಿದ್ದಾರೆ. ಆಕೆ ಜೋರಾಗಿ ಬೊಬ್ಬೆ ಹೊಡೆದು ವಿರೋಧ ಮಾಡಿದಾಗ ಆಗ ದಿಕ್ಕು ತೋಚದೆ ಬಂದ ದಾರಿಯಲ್ಲೇ ವಾಪಸ್ ಹೋಗಿದ್ದಾನೆ. ಇವೆಲ್ಲಾ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಾ.17 ರ ಬೆಳಿಗ್ಗೆ 8.40 ರ ಸುಮಾರಿಗೆ ಈ ಘಟನೆ ನಡೆದಿದೆ. ಸಾಮಾಜಿ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಆತನನ್ನು ಬಂಧನ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬಾಲಕಿ ಇದಾದ ನಂತರ ಬಹಳ ಆಘಾತಗೊಂಡಿದ್ದು, ಆಕೆ ಅಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
One line for the mindset of the whole community pic.twitter.com/T2oQSXdbKC
— 𝐒𝐮𝐝𝐡𝐢𝐫 भारतीय 🇮🇳 (@seriousfunnyguy) March 18, 2024