ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Holiday: ಸರ್ಕಾರಿ ಉದ್ಯೋಗಿಗಳಿಗೆ ಇನ್ಮುಂದೆ ತಿಂಗಳಿಗೊಮ್ಮೆ ಸಿಗಲಿದೆ ವಿಶೇಷ ರಜೆ !!

02:55 PM Dec 12, 2023 IST | ಅಶ್ವಿನಿ ಹೆಬ್ಬಾರ್
UpdateAt: 02:55 PM Dec 12, 2023 IST
Image credit: TOI
Advertisement

Menstrual Leave: ಮಹಿಳೆಯರಲ್ಲಿ ಕಂಡುಬರುವ ಋತು ಚಕ್ರದ ಸಮಸ್ಯೆಗೆ ಮಹಿಳೆಯರಿಗೆ ರಜೆ ನೀಡಬೇಕು ಎಂಬ ಬೇಡಿಕೆ ಆಗಾಗ ಕೇಳಿ ಬರುತ್ತಿದೆ.ಇದಕ್ಕೆ ಸರ್ಕಾರ ಸ್ಪಂದಿಸಿದ್ದು, ಸಂಸತ್ತಿನ ಸಮಿತಿ ತನ್ನ ವರದಿಯನ್ನು ನೀಡಿದೆ. ಇದರಲ್ಲಿ ಮಹಿಳಾ ನೌಕರರಿಗೆ ವಿಶೇಷ 'ಮುಟ್ಟಿನ ರಜೆ' (Menstrual Leave)ಆರೋಗ್ಯ ಸಂಬಂಧಿತ ಸಮಸ್ಯೆಯಾಗಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

Advertisement

ಪಿರಿಯಡ್ಸ್ (ಋತುಸ್ರಾವ) ಮಹಿಳೆಯರ ದೇಹದಲ್ಲಿ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಇದರಲ್ಲಿ ನಿಮ್ಮ ಗರ್ಭಾಶಯದೊಳಗಿನ ರಕ್ತ ಮತ್ತು ಟಿಶ್ಯೂ ಯೋನಿಯ ಮೂಲಕ ಹೊರಬರುತ್ತದೆ. ಇದು ಪ್ರತಿ ತಿಂಗಳಿಗೊಮ್ಮೆ ಸಂಭವಿಸುತ್ತದೆ. ಹೆಚ್ಚಿನ ಮಹಿಳೆಯರು ಋತುಚಕ್ರದ ಕಾರಣದಿಂದಾಗಿ ದೌರ್ಬಲ್ಯವನ್ನು ಅನುಭವಿಸುತ್ತಾರೆ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಕೆಲಸದ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ.

ಸಮಿತಿಯು ಮಹಿಳೆಯರಿಗೆ ಮಾಸಿಕ ಅಥವಾ ವಾರ್ಷಿಕ ಋತುಚಕ್ರದ ರಜೆ ಅಥವಾ ಅನಾರೋಗ್ಯ ರಜೆ (ಎಸ್ಎಲ್)/ ಅರ್ಧ ವೇತನದ ಮೇಲೆ ರಜೆ ನೀಡುವಂತೆ ಶಿಫಾರಸು ಮಾಡಿದೆ. ಆದರೆ ಈ ರಜೆಗೆ ಪ್ರತಿಯಾಗಿ, ಯಾವುದೇ ರೀತಿಯ ವೈದ್ಯಕೀಯ ಪ್ರಮಾಣಪತ್ರವನ್ನು ಕೇಳುವ ಇಲ್ಲವೇ ರಜೆ ತೆಗೆದುಕೊಳ್ಳಲು ಸಮರ್ಥನೆಯನ್ನು ಕೇಳಬಾರದು ಎನ್ನುವುದನ್ನು ಕೂಡಾ ಸಮಿತಿ ಸೂಚನೆ ನೀಡಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ 'ಮುಟ್ಟಿನ ರಜೆ' ನೀತಿಯನ್ನು ರೂಪಿಸಲು ಕಾರ್ಮಿಕ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದು, ಈ ನೀತಿಯ ಪ್ರಕಾರ ಮುಟ್ಟಿನ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ರಜೆಗೆ ಅನುಮತಿ ನೀಡಲಾಗಿದೆ.

Advertisement

ಇದನ್ನೂ ಓದಿ: New Research: ಕೋಳಿ ಮೊದಲಾ? ಮೊಟ್ಟೆ ಮೊದಲಾ ? ಪ್ರಶ್ನೆಗೆ ಸಿಕ್ಕೇಬಿಡ್ತು ಉತ್ತರ !! ವಿಜ್ಞಾನಿಗಳು ಕೊಟ್ರು ನೋಡಿ ಅಚ್ಚರಿ ಆನ್ಸರ್

Related News

Advertisement
Advertisement