For the best experience, open
https://m.hosakannada.com
on your mobile browser.
Advertisement

Good news for women: ಗೃಹಲಕ್ಷ್ಮೀ, ಶಕ್ತಿ ಯೋಜನೆ ಬಳಿಕ ಮಹಿಳೆ ಯರಿಗೆ ಮತ್ತೆರಡು ಹೊಸ ಯೋಜನೆ ಜಾರಿ - ಸರ್ಕಾರದ ಹೊಸ ನಿರ್ಧಾರ, ಈ ದಿನದಿಂದಲೇ ಅರ್ಜಿ ಸಲ್ಲಿಸಿ

10:52 AM Nov 25, 2023 IST | ಕಾವ್ಯ ವಾಣಿ
UpdateAt: 11:28 AM Nov 25, 2023 IST
good news for women  ಗೃಹಲಕ್ಷ್ಮೀ  ಶಕ್ತಿ ಯೋಜನೆ ಬಳಿಕ ಮಹಿಳೆ ಯರಿಗೆ ಮತ್ತೆರಡು ಹೊಸ ಯೋಜನೆ ಜಾರಿ   ಸರ್ಕಾರದ ಹೊಸ ನಿರ್ಧಾರ  ಈ ದಿನದಿಂದಲೇ ಅರ್ಜಿ ಸಲ್ಲಿಸಿ
Img src: Kannada news
Advertisement

Good News For Women: ರಾಜ್ಯ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ (Good News For Women) ನೀಡಿದ್ದು, ಚೇತನ, ಧನಶ್ರೀ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಸೇವಾ ಕೇಂದ್ರ, ಗ್ರಾಮಒನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Advertisement

ಹೌದು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ 2023-24ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಚೇತನ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ, ದೇವದಾಸಿ ಪುನರ್ವಸತಿ ಹಾಗೂ ಉದ್ಯೋಗಿನಿ ಯೋಜನೆಗಳಿಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಡಿಸೆಂಬರ್ 22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಯೋಜನೆಗಳ ಲಾಭ ಪಡೆಯಲಿಚ್ಛಿಸುವವರು ಹತ್ತಿರದ ಬಾಪೂಜಿ ಸೇವಾ ಕೇಂದ್ರ, ಗ್ರಾಮಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಬಹುದು.

Advertisement

ಚೇತನ ಯೋಜನೆ: ದಮನಿತ ಆದಾಯೋತ್ಪನ್ನ ಕೈಗೊಳ್ಳಲು ಮಹಿಳೆಯರಿಗೆ ಚಟುವಟಿಕೆ 30 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಧನಶ್ರೀ ಯೋಜನೆ: ಹೆಚ್.ಐ.ವಿ. ಸೋಂಕಿತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ರೂ.30 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ.

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತ ಫಲಾನುಭವಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು 30 ಸಾವಿರಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

ಉದ್ಯೋಗಿನಿ ಯೋಜನೆ: ಈ ಯೋಜನೆಯಡಿ ಆದಾಯ ಮಹಿಳೆಯರು ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.

ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ: ಈ ಯೋಜನೆಯಡಿ 1993-94 ಮತ್ತು 2007-088 ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು 30 ಸಾವಿರಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

ಇದನ್ನು ಓದಿ: ಗಂಡ ಹೆಂಡತಿ ತುಂಬಾ ಜಗಳ ಮಾಡ್ತಾ ಇದ್ದೀರಾ? ಡಿವೋರ್ಸ್ ತನಕ ಹೋಗಬೇಡಿ ಈ ಟಿಪ್ಸ್ ಫಾಲೋ ಮಾಡಿ ಸಾಕು

Advertisement
Advertisement
Advertisement