Most Beautiful Women: ವಿಶ್ವದ 10 ಅತಿ ಸುಂದರ ಮಹಿಳೆಯರ ಪಟ್ಟಿ ಬಿಡುಗಡೆ - ಇದರಲ್ಲಿದ್ದಾರೆ ಭಾರತದ ಏಕೈಕ ನಟಿ !!
Most Beautiful Women: ಸೌಂದರ್ಯ ಇಂತಹವುದೇ ಅಂತ ಒಂದು ಸ್ಪಷ್ಟ ವ್ಯಾಖ್ಯಾನ ಇಲ್ಲ. ನೋಡುಗರ ದೃಷ್ಟಿಯಲ್ಲಿ ಸೌಂದರ್ಯ ಇರುತ್ತದೆ. ಪ್ರಪಂಚದಾದ್ಯಂತದ ಬಹು ಜನರ ಆದ್ಯತೆಗಳನ್ನು ಸಮೀಕ್ಷೆಯ ಮೂಲಕ ವಿಶ್ವದ 10 ಆಕರ್ಷಕ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಏಕೈಕ ನಟಿಯೊಬ್ಬರು ಸ್ಥಾನ ಪಡೆದಿದ್ದಾರೆ.
ಹೌದು, ಪ್ರಸಕ್ತ ವರ್ಷದ ವಿಶ್ವದ ಅತ್ಯಂತ ಸುಂದರ ಮಹಿಳೆ ಪಟ್ಟಿಯನ್ನು ಗೋಲ್ಡನ್ ರೇಶಿಯೋ(Golden Ratio) ಬಿಡುಗಡೆ ಮಾಡಿದೆ. ಬಾಹ್ಯ ಸೌಂದರ್ಯ ಮಾತ್ರವಲ್ಲ, ಹಲವು ಆಯಾಮ ಹಾಗೂ ಮಾನದಂಡಗಳನ್ನಿಟ್ಟುಕೊಂಡು ಈ ಪಟ್ಟಿ ತಯಾರಿಸಲಾಗಿದೆ. ಈ ಪೈಕಿ ವಿಶ್ವದ ಮೋಸ್ಟ್ ಬ್ಯೂಟಿಫುಲ್ ಮಹಿಳೆ ಅನ್ನೋ ಕಿರೀಟ ನಟಿ ಅನ್ಯ ಟೇಲರ್ ಜಾಯ್(Anya Taylor joy) ಪಾಲಾಗಿದ್ದರೆ ಇದರಲ್ಲಿ 9ನೇ ಸ್ಥಾನವನ್ನು ನಮ್ಮ ಭಾರತದ ಬಾಲಿವುಡ್ ನಟಿ ಪಡೆದುಕೊಂಡಿದ್ದಾರೆ. ಹಾಗಿದ್ರೆ ಆ ನಟಿ ಯಾರು? ಉಳಿದಂತೆ ಟಾಪ್ 10 ಲಿಸ್ಟ್ ನಲ್ಲಿ ಯಾರಿದ್ದಾರೆ? ನೋಡೋಣ ಬನ್ನಿ.
ಟಾಪ್ 10 ಪಟ್ಟಿಯಲ್ಲಿ ಹಾಲಿವುಡ್ ಸೇರಿದಂತೆ ಹಲವು ಸಿನಿಮಾ, ಮಾಡೆಲ್ ಕ್ಷೇತ್ರದ ಸುಂದರ ಮಹಿಳೆಯರು ಕಾಣಿಸಿಕೊಂಡಿದ್ದಾರೆ. ಈ ಪೈಕಿ 9ನೇ ಸ್ಥಾನದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಸ್ಥಾನ ಪಡೆದಿದ್ದಾರೆ. ಗೋಲ್ಡನ್ ರೇಶಿಯೋ ಲಿಸ್ಟ್‌ನಲ್ಲಿ ಅಲಿಯಾ ಭಟ್(Alia Bhat) ಶೇಕಡಾ 91.14 ರೇಟಿಂಗ್ ಪಡೆಯುವ ಮೂಲಕ 9ನೇ ಸ್ಥಾನದಲ್ಲಿದ್ದಾರೆ.
ವಿಶ್ವದ 10 ಅತ್ಯಂತ ಸುಂದರ ಮಹಿಳೆಯರು
1. ಅನ್ಯಾ ಟೇಲರ್-ಜಾಯ್ - 94.66%
2. ಝೆಂಡಯಾ - 94.37%
3. ಬೆಲ್ಲಾ ಹಡಿದ್ - 94.35%
4. ಮಾರ್ಗಾಟ್ ರಾಬಿ - 93.43%
5. ಸಾಂಗ್ ಹೈ-ಕ್ಯೋ - 92.67%
6. ಬೆಯಾನ್ಸ್ - 92.4%
7. ಟೇಲರ್ ಸ್ವಿಫ್ಟ್ - 91.64%
8. ಜಾಂಗ್ ಜಿಯಿ - 91.51%
9. ಆಲಿಯಾ ಭಟ್ - 91.14%
10. ನಜಾನಿನ್ ಬೊನಿಯಾಡಿ - 90.89%
ಏನಿದು ಗೋಲ್ಡನ್ ರೇಶಿಯೋ :
ಸೌಂದರ್ಯವನ್ನು ಅಲೆಯಲು ಗ್ರೀಕ್‌ನಲ್ಲಿ ಕಂಡುಕೊಂಡು ಪುರಾತನ ವಿಧಾನವೇ ಗೋಲ್ಡನ್ ರೇಶಿಯೋ. ಸೌಂದರ್ಯ, ಎತ್ತರ, ಮಾತು, ದೇಹ ಸೇರಿದಂತೆ ಹಲವು ಅಂಶಗಲನ್ನು ಪರಿಣಿಸಿ ಹೆಣ್ಣಿನ ಸೌಂದರ್ಯವನ್ನು ಅಲೆಯಲಾಗುತ್ತದೆ. ಇದೇ ಪಾರ್ಮುಲಾವನ್ನು ಲಿಯಾನಾರ್ಡೋ ಡಾ ವಿನ್ಸಿ ಚನ್ನ ಆರ್ಟ್ ವರ್ಕ್‌ಗೆ ಇದೇ ಲೆಕ್ಕಾಚಾರ ಅನುಸರಿಸುತ್ತಿದ್ದರು.