For the best experience, open
https://m.hosakannada.com
on your mobile browser.
Advertisement

Silk Saree Cleaning: ರೇಷ್ಮೆ ಸೀರೆಯನ್ನು ಮನೆಯಲ್ಲೇ ಈ ರೀತಿ ವಾಶ್ ಮಾಡಿದ್ರೆ ಸಾಕು ಹೊಸದರಂತೆ ಕಾಣುತ್ತೆ!

Silk Saree Cleaning: ಮನೆಯಲ್ಲಿ ರೇಷ್ಮೆಯನ್ನು ತುಂಬಾ ಸುಲಭವಾಗಿ ತೊಳೆಯಲು ಕೆಲವು ಸುಲಭವಾದ ಟಿಪ್ಸ್ ಇಲ್ಲಿದೆ ನೋಡಿ.
10:24 AM Jul 11, 2024 IST | ಕಾವ್ಯ ವಾಣಿ
UpdateAt: 10:24 AM Jul 11, 2024 IST
silk saree cleaning  ರೇಷ್ಮೆ ಸೀರೆಯನ್ನು ಮನೆಯಲ್ಲೇ ಈ ರೀತಿ ವಾಶ್ ಮಾಡಿದ್ರೆ ಸಾಕು ಹೊಸದರಂತೆ ಕಾಣುತ್ತೆ
Advertisement

Silk Saree Cleaning: ನೀವು ಏನೇ ಹೇಳಿ ರೇಷ್ಮೆ ಸೀರೆ ಡಿಮ್ಯಾಂಡ್ ಮಾತ್ರ ಯಾವತ್ತೂ ಕಡಿಮೆ ಆಗೋಕೆ ಚಾನ್ಸ್ ಇಲ್ಲ ಬಿಡಿ. ಹೌದು, ರೇಷ್ಮೆ ಸೀರೆ ಉಟ್ಟಾಗ ಮಹಿಳೆಗೆ ಇರುವ ಗಾಂಭೀರ್ಯವೇ ಬೇರೆ. ಅದಕ್ಕಾಗಿ ಪ್ರತೀ ಮಹಿಳೆಯೂ ಸಭೆ ಸಮಾರಂಭಗಳೇನೇ ಇರಲಿ ಮೊದಲ ಆಯ್ಕೆ ರೇಷ್ಮೆ ಸೀರೆ ಆಗಿರುತ್ತದೆ. ಅದರಲ್ಲೂ ದೊಡ್ಡ ಬಾರ್ಡರ್ ಇರುವ ಸೀರೆಗಳನ್ನು ಉಡಲು ಹೆಚ್ಚು ಇಷ್ಟ ಪಡುತ್ತಾರೆ. ಆದರೆ ಈ ರೇಷ್ಮೆ ಸೀರೆ ಕೊಳಕಾದರೆ, ಅದನ್ನು ಡ್ರೈ ಕ್ಲೀನ್ ಮಾಡಲು ಸಾಕಷ್ಟು ಹಣ ಖರ್ಚಾಗುತ್ತದೆ ಎಂದು ನೀವು ಅಂದುಕೊಳ್ಳುತ್ತಿದ್ದರೆ ಇನ್ಮುಂದೆ ಹಣದ ಚಿಂತೆ ಅಗತ್ಯವಿಲ್ಲ. ಹೌದು, ಮನೆಯಲ್ಲಿ ರೇಷ್ಮೆಯನ್ನು ತುಂಬಾ ಸುಲಭವಾಗಿ ತೊಳೆಯಲು ಕೆಲವು ಸುಲಭವಾದ ಟಿಪ್ಸ್ ಇಲ್ಲಿದೆ ನೋಡಿ.

Advertisement

Shubha Poonja: ಮದುವೆ ಆಗಿ 2 ವರ್ಷ, ಆದ್ರೂ ಪತಿದೇವ ನನಗದನ್ನು ಮಾಡೇ ಇಲ್ಲ – ಓಪನ್ ಆಗಿ ಗಂಡನ ಗುಟ್ಟು ರಟ್ಟು ಮಾಡಿದ ಶುಭ ಪೂಂಜ !!

ಸಿಲ್ಕ್ ಸೀರೆಯನ್ನು ತೊಳೆಯಲು (Silk Saree Cleaning) ಯೋಚಿಸುವಾಗ ಮೊದಲು ಲೇಬಲ್ ನೋಡಿ, ಏಕೆಂದರೆ ರೇಷ್ಮೆ ಸೀರೆಯನ್ನು ಸಾಬೂನಿನಿಂದ ತೊಳೆದರೆ ಅದರ ಗುಣ ನಾಶವಾಗುತ್ತದೆ. ಇನ್ನು ನೀವು ರೇಷ್ಮೆ ಸೀರೆಗಳನ್ನು ನಾಲ್ಕೈದು ಬಾರಿ ಉಟ್ಟ ನಂತರ ಒಗೆಯುವುದು ಉತ್ತಮ.

Advertisement

ಎಂದಿಗೂ ರೇಷ್ಮೆ ಸೀರೆಯನ್ನು ಅಪ್ಪಿತಪ್ಪಿಯೂ ಬಿಸಿ ನೀರಿನಲ್ಲಿ ತೊಳೆಯಬೇಡಿ. ಏಕೆಂದರೆ ಇದರಿಂದ ಸೀರೆ ಬಣ್ಣ ಕಳೆದುಕೊಳ್ಳುತ್ತದೆ. ಅದಕ್ಕಾಗಿ ರೇಷ್ಮೆ ಸೀರೆಯನ್ನು ತೊಳೆಯುವ ಮೊದಲು ತಣ್ಣೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿ ತೊಳೆಯಿರಿ.

ಮುಖ್ಯವಾಗಿ ನೀವು ಸೀರೆಯನ್ನು ನೀರಿನಲ್ಲಿ ನೆನೆಸಿದ ನಂತರ, ಒಂದು ಬಕೆಟ್ ಶುದ್ಧ ನೀರನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ಬಿಳಿ ವಿನೆಗರ್ ಸೇರಿಸಿ. ನಂತರ ಅದರಲ್ಲಿ ರೇಷ್ಮೆ ಸೀರೆಯನ್ನು ಅದ್ದಿ ಹತ್ತು ನಿಮಿಷ ಬಿಡಿ. ನಂತರ ಶುದ್ಧ ನೀರಿನಿಂದ ತೊಳೆದಾಗ ಸೀರೆಯ ಮೇಲಿನ ಕಲೆಗಳು ನಿವಾರಣೆಯಾಗುತ್ತವೆ.

ರೇಷ್ಮೆ ಸೀರೆ ತೊಳೆದ ನಂತರ ಗಟ್ಟಿಯಾಗಿ ಹಿಂಡಬೇಡಿ. ಸ್ವಲ್ಪ ಸಮಯದವರೆಗೆ ನೀರು ಹರಿದು ಹೋಗಲು ಹಾಗೆಯೇ ಬಿಡಿ. ಅದಾದ ನಂತರ ಸೀರೆಯನ್ನು ನೆರಳಿನಲ್ಲಿ ಒಣಗಿಸಬೇಕು. ತಪ್ಪಿಯು ಬಿಸಿಲಿನಲ್ಲಿ ರೇಷ್ಮೆ ಸೀರೆ ಒಣಗಿಸಬೇಡಿ ಯಾಕೆಂದರೆ ಇದರಿಂದ ಸೀರೆಯ ಬಣ್ಣ ಮಾಸಬಹುದು.

ಇನ್ನು ರೇಷ್ಮೆ ಸೀರೆಗಳನ್ನು ಯಾವಾಗಲೂ ಪ್ರತ್ಯೇಕ ಸ್ಥಳದಲ್ಲಿ ಇರಿಸಿ ಮತ್ತು ಅವುಗಳನ್ನು ಹತ್ತಿ ಬಟ್ಟೆಯಿಂದ ಚೆನ್ನಾಗಿ ಮುಚ್ಚಿ. ಆಗ ನಿಮ್ಮ ರೇಷ್ಮೆ ಸೀರೆಗಳನ್ನು ಸಂಪೂರ್ಣವಾಗಿ ಸುರಕ್ಷಿತವಾಗಿರಿಸುತ್ತದೆ.

ರೇಷ್ಮೆ ಸೀರೆ ಮ್ಯಾನೇಜ್ ಮಾಡುವುದು ಕಷ್ಟ ಆದರೂ ಸಹ ರೇಷ್ಮೆ ಬಟ್ಟೆ ಗೌರವದ ಪ್ರತೀಕ ಆದ್ದರಿಂದ ಎಂದಿಗೂ ರೇಷ್ಮೆ ಬಟ್ಟೆಯನ್ನು ಈ ರೀತಿಯಾಗಿ ತೊಳೆಯುವುದರಿಂದ ಸೀರೆ ಹೊಳಪು ಕಳೆಯದಂತೆ ನೋಡಿಕೊಳ್ಳಬಹುದು.

Rahul Dravid: ಮತ್ತೆ ಅಭಿಮಾನಿಗಳ ಮನ ಗೆದ್ದ ರಾಹುಲ್ ದ್ರಾವಿಡ್ – BCCI ಕೊಟ್ಟ 2.5 ಕೋಟಿ ರೂ ಚೆಕ್ ವಾಪಾಸ್ !!

Advertisement
Advertisement
Advertisement