ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mallapuram: ಎರಡು ವರ್ಷದ ಬಾಲಕಿ ಮೃತ ಪ್ರಕರಣ; ತಂದೆ ಫೈಝ್‌ ಬಂಧನ

Mallapuram: ಉದರಂಪೊಯಿಲ್‌ನಲ್ಲಿ ಎರಡೂವರೆ ವರ್ಷದ ಬಾಲಕಿಯ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ
07:55 AM Mar 27, 2024 IST | ಸುದರ್ಶನ್
UpdateAt: 07:55 AM Mar 27, 2024 IST
Advertisement

Mallapuram: ಉದರಂಪೊಯಿಲ್‌ನಲ್ಲಿ ಎರಡೂವರೆ ವರ್ಷದ ಬಾಲಕಿಯ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಲಿಕಾವ್ ನಿವಾಸಿ ಮುಹಮ್ಮದ್ ಫೈಝ್ ಮತ್ತು ಶಹಬಾತ್ ದಂಪತಿಯ ಪುತ್ರಿ ಫಾತಿಮಾ ನಸ್ರಿನ್ ನಿನ್ನೆ ಸಂಜೆ ಮೃತ ಹೊಂದಿತ್ತು. ಮಗುವಿನ ಸಾವು ಅಸ್ವಾಭಾವಿಕ ಎಂದು ತಾಯಿ ಹಾಗೂ ಸಂಬಂಧಿಕರು ಆರೋಪಿಸಿದ ಹಿನ್ನೆಲೆಯಲ್ಲಿ ಪೊಲೀಸರು ತಂದೆ ಫಯೀಜ್ ನನ್ನು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ನಸ್ರ್ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ: Tiruvananthapuram: ವೈದ್ಯಕೀಯ ಕಾಲೇಜಿನ ಯುವ ವೈದ್ಯೆ ಆತ್ಮಹತ್ಯೆ; ಡೆತ್‌ನೋಟ್‌ ಪತ್ತೆ

ಶಹಬಾತ್ ಮತ್ತು ಆತನ ಸಂಬಂಧಿಕರು ಫಯೀಜ್ ಮಗುವನ್ನು ಹೊಡೆದು ಕೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವಿಗೆ ಗಂಟಲಲ್ಲಿ ಆಹಾರ ಸಿಕ್ಕಿದೆ ಎಂಬ ನೆಪದಲ್ಲಿ ವಂದೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ನಸ್ರೀನ್ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಮಗುವಿನ ಮೃತದೇಹವನ್ನು ಮಂಚೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

Advertisement

ಇದನ್ನೂ ಓದಿ: Bengaluru: ಯೆಮನ್ ಯುವಕನ ದೇಹದಲ್ಲಿ 2 ವರ್ಷದಿಂದ ಸಿಲುಕಿಕೊಂಡಿದ್ದ ಬುಲೆಟ್ ಹೊರ ತೆಗೆದ ಬೆಂಗಳೂರು ವೈದ್ಯರು

ಕಾಳಿಕಾವು ಬಳಿಯ ಉದಿರಂಪೊಯಿಲ್ ಮೂಲದ ಆರೋಪಿ ಕೊಂತತ್ತೋಡಿಕ ಮುಹಮ್ಮದ್ ಫೈಝ್ (24), ಮಗುವಿನ ತಂದೆ ತನ್ನ ಮಗುವನ್ನೇ ಸಾಯಿಸಿದ ಆರೋಪವನ್ನು ಎದುರಿಸುತ್ತಿದ್ದಾನೆ.

ಶವಪರೀಕ್ಷೆಯ ವರದಿಯ ಪ್ರಕಾರ ಮಗುವಿನ ದೇಹದಲ್ಲಿ ಸುಮಾರು 60 ಗಾಯಗಳಿದ್ದು, ಆಕೆಯು ಆಹಾರ ಸಿಲುಕಿ ಉಸಿರು ಗಟ್ಟಿ ಮೃತ ಹೊಂದಿದ್ದಾಳೆ ಎಂಬ ಮಾತು ಆರಂಭಿಕ ಹೇಳಿಕೆಗೆ ವಿರುದ್ಧವಾಗಿದೆ. ಮಗುವಿನ ಮೇಲೆ ನಡೆದ ಹಲ್ಲೆ, ಮುರಿದ ಪಕ್ಕೆಲುಬು ಮತ್ತು ಅವಳ ಎದೆ ಮತ್ತು ತಲೆಯಲ್ಲಿ ಆದ ಗಾಯಗಳು ಸೇರಿದಂತೆ ಮಗು ನಸ್ರಿನ್ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ.

Advertisement
Advertisement