Supreme court: ಇನ್ಮುಂದೆ ಈ ರೈತರಿಗೆ ಸಿಗೋಲ್ಲ ಕನಿಷ್ಠ ಬೆಂಬಲ ಬೆಲೆ - ಸುಪ್ರೀಂ ಕೋರ್ಟ್ ನಿಂದ ಖಡಕ್ ಆದೇಶ!!
Supreme court : ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ತಾಂಡವವಾಡುತ್ತಿದ್ದು ನಗರದ ಸ್ಥಿತಿ ಚಿಂತಾಜನಕವಾಗಿದೆ. ಇದಕ್ಕೆ ವಾಹನಗಳ ದಟ್ಟನೆ ಒಂದು ಕಾರಣವಾದರೆ ಮತ್ತೊಂದು ಪ್ರಮುಖ ಕಾರಣವೆಂದರೆ ಅಲ್ಲಿನ ಸುತ್ತಮುತ್ತಲಿನ ರೈತರು ಹುಲ್ಲನ್ನು ಸುಡುವುದು. ಹೀಗಾಗಿ ಈ ಸಮಸ್ಯೆಯನ್ನು ತಪ್ಪಿಸಲು ಸುಪ್ರೀಂ ಕೋರ್ಟ್(Supreme court) ಖಡಕ್ ಆದೇಶವೊಂದನ್ನು ನೀಡಿದೆ.
ಹೌದು, ದೇಶದ ರಾಜಧಾನಿ ದೆಹಲಿ(Delhi) ಸುತ್ತಮುತ್ತಲಿನ ರೈತರು ಹುಲ್ಲು ಸುಡುವುದು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದು, ಹುಲ್ಲು ಸುಡುವುದನ್ನು ತಡೆಯುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಒಂದು ವೇಳೆ ಹುಲ್ಲು ಸುಡುವುದನ್ನು ಯಾರು ಮುಂದುವರೆಸುತ್ತಾರೋ ಅಂತಹ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆಯನ್ನು ನೀಡಬೇಡಿ ಎಂದು ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿದೆ.
ಅಂದಹಾಗೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧೂಲಿಯಾ ಅವರನ್ನೊಳಗೊಂಡ ನ್ಯಾಯಪೀಠವು 'ಜನರಿಗೆ ಅದರಲ್ಲೂ ಮುಖ್ಯವಾಗಿ ಮಕ್ಕಳ ಜೀವದ ಮೇಲೆ ದುಷ್ಪರಿಣಾಮ ಬೀರುವ ಕ್ರಮ ಸ್ಥಗಿತಗೊಳಿಸುವಂತೆ ನೀಡಿರುವ ಆದೇಶವನ್ನು ಉಲ್ಲಂಘಿಸುವ ಮತ್ತು ಬೆಂಕಿ ಹಾಕುವ ರೈತರ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯಡಿ ಏಕೆ ಖರೀದಿಸಬೇಕು?. ಮಾಲಿನ್ಯ ತಡೆಗೆ ನ್ಯಾಯಾಲಯ ಇಷ್ಟೊಂದು ಸಲಹೆಗಳನ್ನು ನೀಡಿದರೂ, ನಿಯಮ ಉಲ್ಲಂಘಿಸುವುದನ್ನು ಮುಂದುವರಿಸಿರುವವರಿಗೆ ಹಣಕಾಸು ನೆರವು ಏಕೆ ನೀಡಬೇಕು? ಅವರಿಗೆ ಕನಿಷ್ಠ ಬೆಂಬಲ ಬೆಲೆಯನ್ನೂ ನೀಡಬಾರದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನು ಓದಿ: SCSS New Rules: ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಈ ನಿಯಮಗಳಲ್ಲಿ ಮಹತ್ವದ ಬದಲಾವಣೆ !!