ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Farmers protest: ಮೋದಿ ಜನಪ್ರಿಯತೆ ಗಗನಕ್ಕೇರಿದೆ, ಅದನ್ನು ಕಡಿಮೆ ಮಾಡಲೆಂದೇ ದೆಹಲಿ ಪ್ರತಿಭಟನೆ - ರೈತ ನಾಯಕನ ಅಘಾತಕಾರಿ ವಿಡಿಯೋ ವೈರಲ್!!

06:36 AM Feb 16, 2024 IST | ಹೊಸ ಕನ್ನಡ
UpdateAt: 06:52 AM Feb 16, 2024 IST
Advertisement

Farmers protest: ಕನಿಷ್ಠ ಬೆಂಬಲ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ(Farmers protest) ಉದ್ದೇಶವೇ ಬೇರೆಯದ್ದಾಗಿದೆ. ಈ ಕುರಿತು ರೈತ ನಾಯಕ ಅಘಾತಕಾರಿ ವಿಡಿಯೋವೊಂದು ಭಾರೀ ವೈರಲ್ ಆಗ್ತಿದೆ.

Advertisement

ಇದನ್ನೂ ಓದಿ: ಅಡಿಕೆಗೆ ನೈಸರ್ಗಿಕ ಗೊಬ್ಬರ ಒದಗಿಸುವುದು ಹೇಗೆ!! ಇಲ್ಲಿದೆ ಸುಲಭ ಮಾರ್ಗ!!

https://x.com/MeghUpdates/status/1757961114783273424?t=2OpqyzsbYASgLg2oy3cdtA&s=08

Advertisement

ಹೌದು, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra modi) ಅವರ ಜನಪ್ರಿಯತೆ ಹೆಚ್ಚಿದೆ. ರಾಮಮಂದಿರ(Rama mandir) ಉದ್ಘಾಟನೆ ಬಳಿಕ ಅದು ಉತ್ತುಂಗಕ್ಕೇರಿದೆ. ಹೀಗಾಗಿ ಮೋದಿಯ ಜನಪ್ರಿಯತೆಯನ್ಶು ಕುಗ್ಗಿಲಸು ನಾವು ರೈತರು ಪ್ರತಿಭಟನೆ ಮಾಡಲಾಗುತ್ತಿದೆ ಎಂದು ರೈತ ನಾಯಕ ಜಗಜೀತ್ ಸಿಂಗ್ ದಲ್ಲೆವಾಲ್(Jagajeeth singh dalleval) ಹೇಳುವ ವಿಡಿಯೋ ಒಂದು ವೈರಲ್ ಆಗಿದ್ದು ದೇಶಾದ್ಯಂತ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ. ಚುನಾವಣೆ ಸಮೀಪದಲ್ಲಿ ಬೃಹತ್ ರೈತ ಪ್ರತಿಭಟನೆ ಹಿಂದೆ ಬಹುದೊಡ್ಡ ಟೂಲ್‌ಕಿಟ್ ಅಡಗಿದೆ ಅನ್ನೋ ಆರೋಪ ಕೇಳಿಬರುತ್ತಿರುವುದರ ಬೆನ್ನಲ್ಲೇ ರೈತ ನಾಯಕನ ಈ ಹೇಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿದೆ.

ಅಂದಹಾಗೆ ರೈತ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡ ನಾಯಕರಲ್ಲಿ ಪ್ರಮುಖರಾಗಿರುವ ಜಗ್‌ಜಿತ್ ಸಿಂಗ್ ದಲ್ಲೇವಾಲ್ ನೀಡಿರುವ ಹೇಳಿಕೆ ಭಾರಿ ವೈರಲ್ ಆಗಿದೆ. ರೈತರನ್ನು ಮೂರನೇ ಸುತ್ತಿನ ಮಾತುಕತೆಗೆ ಕೇಂದ್ರ ಸರ್ಕಾರ ಆಹ್ವಾನಿಸಿದೆ. ಕಳೆದ ಎರಡು ಸುತ್ತಿನ ಮಾತುಕತೆ ವಿಫಲವಾಗಿದೆ. ಇದೀಗ ಮೂರನೇ ಮಾತುಕತೆಗೂ ಮೊದಲೇ ಜಗ್‌ಜಿತ್ ಸಿಂಗ್ ದಲ್ಲೇವಾಲ್ ನೀಡಿದ ಹೇಳಿಕೆ ವೈರಲ್ ಆಗಿದೆ.

ಈ ಬೆನ್ನಲ್ಲೇ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ದಲ್ಲೆವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿ 'ದಲ್ಲೆವಾಲ್ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಇದು ಕಮೆಂಟ್ ಮಾಡುವುದಕ್ಕೆ ಸೂಕ್ತವಾದ ಸಮಯವಲ್ಲ. ಏಕೆಂದರೆ ಸರ್ಕಾರದ ವಿರುದ್ಧ ರೈತರನ್ನು ಯಾರೋ ಎತ್ತಿ ಕಟ್ಟುತ್ತಿದ್ದಾರೆ ಎಂಬುದು ಈಗ ಸ್ಪಷ್ಟವಾಗಿದೆ. ರೈತರನ್ನು ಪಂಜಾಬ್ ಸರ್ಕಾರ ತಡೆಯಬಹುದಿತ್ತು. ಆದರೆ, ಅವರು ಆ ಕೆಲಸ ಮಾಡಲಿಲ್ಲ. ಇದೊಂದು ರಾಜಕೀಯ ಹೇಳಿಕೆಯಾಗಿದ್ದು, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರೆ ಜನ ಪ್ರಧಾನಿ ಮೋದಿಗೆ ಬೆಂಬಲ ನೀಡುವುದನ್ನು ನಿಲ್ಲಿಸುತ್ತಾರೆಯೇ. ಈ ರೀತಿಯ ಹೇಳಿಕೆ ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಕಿಡಿಕಾರಿದ್ದಾರೆ.

Advertisement
Advertisement