Online Meeting: ಟಾಯ್ಲೆಟ್‌ನಲ್ಲಿ ಕುಳಿತು ಜೂಮ್ ಮೀಟಿಂಗ್‌ಗೆ ಅಟೆಂಡ್ ಆದ ಮಾಜಿ ಮೇಯರ್; ಮುಂದಾಗಿದ್ದು ಏನು ಗೊತ್ತಾ?
Online Meeting: ಬ್ರೆಜಿಲ್‌ನ ಮಾಜಿ ಮೇಯರೊಬ್ಬರು ತನ್ನ ಪಕ್ಷದ ಸಭೆಯಲ್ಲಿ ಭಾಗಿಯಾದ ಸಂದರ್ಭದಲ್ಲಿ ಎಡವಟ್ಟು ಮಾಡಿಕೊಂಡ ಘಟನೆಯೊಂದು ಇದೀಗ ವೈರಲ್ ಆಗಿದೆ. ಮೂರು ಬಾರಿ ಬ್ರೆಜಿಲ್‌ನ ರಿಯೊ ಡಿ ಜನೈರೊದ ಮೇಯರ್ ಆಗಿದ್ದ ಸೀಸರ್ ಮಾಯಾ ಇವರು ಇತರ ಕೌನ್ಸಿಲ್ ಸದಸ್ಯರೊಂದಿಗಿನ ಅಧಿವೇಶನಕ್ಕಾಗಿ ಆನ್‌ಲೈನ್‌ನಲ್ಲಿ ಜಾಯಿನ್ ಆಗಿದ್ದಾರೆ.
Modi Cabinet: ಮೋದಿ ಸಂಪುಟದಲ್ಲಿ ಕರ್ನಾಟಕದ 5 ಮಂದಿಗೆ ಸ್ಥಾನ !!
ಝೂಮ್‌ಕಾಲ್ ಮೂಲಕ ಲಾಗಿನ್ ಆದ ಇವರು ಕೌನ್ಸಿಲರ್ ಪಾಬ್ಲೋ ಮೆಲ್ಲೋ ಅವರು ಅಧಿವೇಶನವನ್ನು ನಡೆಸುತ್ತಿದ್ದರು.
ಸಭೆ ನಡೆಯುವ ಸಂದರ್ಭದಲ್ಲಿ ಸೀಸರ್ ಅವರು ಟಾಯ್ಲೆಟ್‌ನಲ್ಲಿ ಕೂತಿದ್ದು, ಝೂಮ್ ಕಾಲ್ ಮೂಲಕ ಮೀಟಿಂಗ್ ನಡೆಯುತ್ತಿದ್ದು, ಇವರು ಕ್ಯಾಮೆರಾವನ್ನು ತನ್ನ ಕಾಲಿನತ್ರ ಇಟ್ಟಿದ್ದಾರೆ. ಕೂಡಲೇ ಎಲ್ಲರಿಗೂ ಇವರು ಟಾಯ್ಲೆಟ್‌ನಲ್ಲಿ ಕೂತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಇದು ಗೊತ್ತಾದ ತಕ್ಷಣವೇ ಸೀಸರ್ ಕ್ಯಾಮರಾವನ್ನು ತನ್ನ ಮುಖದತ್ತ ತಿರುಗಿಸಿದ್ದಾರೆ.
ಕೂಡಲೇ ಇತರ ಸದಸ್ಯರು ಮುಜುಗರಕ್ಕೆ ಒಳಗಾಗಿದ್ದು, ಕ್ಯಾಮರಾವನ್ನು ಆಫ್‌ಮಾಡಿ ಎಂದು ಕೌನ್ಸಿಲರ್ ಸೀಸರ್ ಅವರಿಗೆ ಹೇಳಿದ್ದಾರೆ.
ನಡುರಸ್ತೆಯಲ್ಲೇ ಅಪ್ರಾಪ್ತ ಬಾಲಕನೊಬ್ಬ ಅಪ್ರಾಪ್ತ ಬಾಲಕಿ ಹಣೆಗೆ ಸಿಂಧೂರವಿಟ್ಟ ದೃಶ್ಯ ವೈರಲ್!