For the best experience, open
https://m.hosakannada.com
on your mobile browser.
Advertisement

EPFO Update: ಇಪಿಎಫ್ ಖಾತೆಗೆ ನಿಮ್ಮ ಹಣ ಜಮಾ ಆಗುತ್ತಿದೆಯೇ? ಅದನ್ನು ತಿಳಿಯೋದು ಹೇಗೆ ಗೊತ್ತಾ

05:07 PM Nov 20, 2023 IST | ಅಶ್ವಿನಿ ಹೆಬ್ಬಾರ್
UpdateAt: 05:52 PM Nov 20, 2023 IST
epfo update  ಇಪಿಎಫ್ ಖಾತೆಗೆ ನಿಮ್ಮ ಹಣ ಜಮಾ ಆಗುತ್ತಿದೆಯೇ  ಅದನ್ನು ತಿಳಿಯೋದು ಹೇಗೆ ಗೊತ್ತಾ
Advertisement

EPFO Update: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ) ಖಾತೆ ಹೊಂದಿದ್ದರೆ, ನೀವು ಈ ಮಾಹಿತಿ ಅರಿತಿರುವುದು ಒಳ್ಳೆಯದು. ಸಾಮಾನ್ಯವಾಗಿ ತಿಂಗಳ ವೇತನ ಪಡೆಯುವ ಎಲ್ಲರೂ ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (EPF) ಖಾತೆ ಹೊಂದಿರುವುದು ಕಾಮನ್.

Advertisement

ಇಪಿಎಫ್( EPF)ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳ ಪಾಲಿಗೆ ಪಿಎಫ್ (PF) ಮೊತ್ತವು ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವ ಖಾತೆ ಎಂದರೇ ತಪ್ಪಾಗಲಾರದು. ಜನಪ್ರಿಯ ಉಳಿತಾಯ(Savings)ಯೋಜನೆ ಇಪಿಎಫ್ ವೇತನ ಪಡೆಯುವ ನೌಕರರು ತಮ್ಮ ಬೇಸಿಕ್ ಸ್ಯಾಲರಿಯಿಂದ ಶೇಕಡ 12 ರಷ್ಟು ಕಡಿತಗೊಳಿಸುವ ಮೂಲಕ ಪ್ರತಿ ತಿಂಗಳು ಪಿಂಚಣಿ ಕಾರ್ಪಸ್ ಅನ್ನು ರಚಿಸಲಾಗುತ್ತದೆ.

ಉದ್ಯೋಗದಾತರು ಪ್ರತಿ ತಿಂಗಳು ಅವರ ಸಂಬಳದಿಂದ ಇಪಿಎಫ್ ಮೊತ್ತವನ್ನು (EPFO Update) ಕಡಿತಗೊಳಿಸುತ್ತಾರೆ. ಕಂಪನಿಯು ಕೂಡಾ ಅಷ್ಟೇ ಮೊತ್ತವನ್ನು ಠೇವಣಿ ಪಿಎಫ್ ಖಾತೆಗೆ ಜಮಾ ಮಾಡಬೇಕಾಗುತ್ತದೆ. ಇದರ ಮೇಲೆ ವಾರ್ಷಿಕ ಬಡ್ಡಿ ಸಿಗಲಿದೆ. ಕಂಪನಿಯು ಠೇವಣಿ ಮಾಡಿದ ಶೇಕಡಾ 12 ರಲ್ಲಿ, ಕಂಪನಿಯು 3.67 ಶೇಕಡಾವನ್ನು ಪಿಎಫ್ ಖಾತೆಯಲ್ಲಿ ಮತ್ತು ಉಳಿದ ಶೇಕಡಾ 8.33 ಪಿಂಚಣಿ ಯೋಜನೆಯಲ್ಲಿ ಠೇವಣಿ ಮಾಡುತ್ತದೆ. ಕಂಪನಿಯು ಪಿಎಫ್ ಹಣವನ್ನು ನಿಮ್ಮ ಪಿಎಫ್ ಖಾತೆಗೆ ಜಮಾ ಮಾಡುತ್ತಿದೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸುವುದು ಅವಶ್ಯಕ.

Advertisement

PF ಖಾತೆಯಲ್ಲಿ ಹಣ ಜಮೆಯಾಗಿದೆಯೇ ಎಂದು ತಿಳಿಯುವುದು ಹೇಗೆ? :
* ಉದ್ಯೋಗಿಗಳು ತಮ್ಮ ಪಿಎಫ್ ಪಾಸ್ಬುಕ್ನಿಂದ ಕಂಪನಿಯು ಉದ್ಯೋಗಿಗಳ ಖಾತೆಗೆ ಹಣವನ್ನು ಜಮಾ ಮಾಡುತ್ತಿದೆಯೇ /ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು.
* ಇದಕ್ಕಾಗಿ ಪಾಸ್ಬುಕ್ ಪರಿಶೀಲಿಸಲು, ಉದ್ಯೋಗಿಗಳು ಮೊದಲು ಇಪಿಎಫ್ಒ ಪೋರ್ಟಲ್ಗೆ ಭೇಟಿ ನೀಡಿ.
* ನಿಮ್ಮ UAN ಸಂಖ್ಯೆಯನ್ನು ಇಲ್ಲಿ ಸಕ್ರಿಯಗೊಳಿಸಲಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
* EPFO ವೆಬ್ಸೈಟ್ಗೆ ಹೋಗಿ, 'Our Services' ಟ್ಯಾಬ್ಗೆ ಹೋಗಿ ಮತ್ತು 'for employees' ಆಯ್ಕೆಯನ್ನು ಆರಿಸಿಕೊಳ್ಳಿ.
* ಇದಾದ ಬಳಿಕ, 'member passbook' ಅನ್ನು ಕ್ಲಿಕ್ ಮಾಡಿ.
* ಇದಾದ ಬಳಿಕ, ನಿಮ್ಮ UAN ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿಕೊಳ್ಳಿ.
* ಲಾಗಿನ್ ಆದ ನಂತರ, ನಿಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.
* ನಿಮ್ಮ PF ಖಾತೆಯ ಬ್ಯಾಲೆನ್ಸ್, ಎಲ್ಲಾ ಠೇವಣಿಗಳ ವಿವರಗಳಂತಹ ವಿವರಗಳನ್ನು ಗಮನಿಸಬಹುದು.

ಇದನ್ನು ಓದಿ: Extramarital Affair: ಮದುವೆಯಾಗಿದ್ದರು ಲವ್ವರ್ ಜೊತೆ ಲವ್ವಿ -ಡವ್ವಿ: ರೆಡ್ ಹ್ಯಾಂಡ್ ಆಗಿ ಪತಿಯ ಮುಂದೆ ಸಿಕ್ಕಿಬಿದ್ದ ಪತ್ನಿ! ಮುಂದೆ ನಡೆದದ್ದೇ ಬೇರೆ!!

Advertisement
Advertisement
Advertisement