ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

EPFO: ನಿಮ್ಮ ಪಿಎಫ್ ಹಣಕ್ಕೆ ಹೆಚ್ಚು ಬಡ್ಡಿ ಪಡೆಯುವುದು ಹೇಗೆ!!

09:58 AM Feb 08, 2024 IST | ಹೊಸ ಕನ್ನಡ
UpdateAt: 10:40 AM Feb 08, 2024 IST
Advertisement

EPFO: ಪಿಎಫ್ ಎಂಬುದು ಪ್ರತಿಯೊಬ್ಬ ಉದ್ಯೋಗಿಯ ಉಳಿತಾಯವಾಗಿದೆ. ತಿಂಗಳ ಕೊನೆಯಲ್ಲಿ ಒಂದು ರೂಪಾಯಿ ಸಹ ಉಳಿಯುವುದಿಲ್ಲ ಎನ್ನುವವರಿಗೆ ಪಿಎಫ್ ಬಹುದೊಡ್ಡ ಉಳಿತಾಯ. ಪ್ರತಿ ತಿಂಗಳ ಸಂಬಳದ ಸ್ವಲ್ಪ ಭಾಗವನ್ನು ಉದ್ಯೋಗಿಗಳ ಭವಿಷ್ಯ ನಿಧಿಗೆ ಉಳಿತಾಯ ಮಾಡುತ್ತಾರೆ.

Advertisement

ಇದನ್ನೂ ಓದಿ: 'KPTCL' 404 ಎಇ ನೇಮಕಾತಿ; ಹೈಕೋರ್ಟ್‌ನಿಂದ ಸಿಹಿ ಸುದ್ದಿ

ಈ ಹಣ ಹೆಚ್ಚಾಗಿ ಸಿಕ್ಕರೆ ಖುಷಿ. ಅದಕ್ಕೆ ಸ್ವಲ್ಪ ಪ್ರಯತ್ನ ಬೇಕು. ಇದರಿಂದ 4 ಪಟ್ಟು ಹೆಚ್ಚಿಸಬಹುದು.ದೀರ್ಘಾವಧಿಯ ಉಳಿತಾಯಕ್ಕೆ ಪಿಎಫ್ ಅತ್ಯಂತ ಜನಪ್ರಿಯ ಮಾರ್ಗ. ಉದ್ಯೋಗಿಯೊಬ್ಬ ತನ್ನ ಮೂಲ ವೇತನ ಮತ್ತು ತುಟ್ಟಿಭತ್ಯೆಯ 12 ಪ್ರತಿಶತವನ್ನು ಪಿಎಫ್ ಖಾತೆಗೆ ಕೊಡುಗೆಯಾಗಿ ನೀಡುತ್ತಾನೆ. ಉದಾಹರಣೆಗೆ ನೋಡುವುದಾದರೆ, ವ್ಯಕ್ತಿಯೊಬ್ಬನ ವೇತನ ಮತ್ತು ರೂ 18,000 ಆಗಿದ್ದರೆ ಅವರ ಪಿಎಫ್ ಕೊಡುಗೆ ರೂ 18000 x 12/100= ರೂ 2,160 ಆಗಿರುತ್ತದೆ ಎಂದು ಲೆಕ್ಕ ಹಾಕಬಹುದು.

Advertisement

ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕನಿಷ್ಠ ಪಿಎಫ್ ನೀಡುತ್ತಿದ್ದರೆ, ಅವರು ತಮ್ಮ ಪಿಎಫ್ ಹೆಚ್ಚಿಸಬಹುದು. ಅಲ್ಲಿನ ಉದ್ಯೋಗಿಗಳು ತಮ್ಮ ಪಿಎಫ್ ಹೆಚ್ಚಿಸುವಂತೆ ಕಂಪನಿಗೆ ಮನವಿ ಮಾಡ್ಬೇಕು.

ಇದರಿಂದ ನಿಮ್ಮ ಕೈಗೆ ಹಣ ಕಮ್ಮಿ ಸಿಗುತ್ತದೆ. ಆದರೆ ಪಿಎಫ್ ನ ಉಳಿತಾಯ ಹೆಚ್ಚಾಗುತ್ತದೆ. ಇದಲ್ಲದೆ, ಪ್ರತಿ ತ್ರೈಮಾಸಿಕದ ನಂತರ, ಕೈಯಲ್ಲಿ ನಿಮ್ಮ ವೇತನವು ಹೆಚ್ಚಾಗುತ್ತದೆ.

ನಿಮ್ಮ ಇಪಿಎಫ್ ಕೊಡುಗೆಯನ್ನು 12% ಕ್ಕಿಂತ ಹೆಚ್ಚು ಹೆಚ್ಚಿಸುವುದು ಹೇಗೆ?

ನೀವೇನಾದರೂ ಪಿಎಫ್ ಹೆಚ್ಚಿಸಲು ನಿರ್ಧರಿಸಿದ್ದರೆ, ಹೀಗೆ ಮಾಡಿ ಸ್ವಯಂಪ್ರೇರಿತ ಭವಿಷ್ಯ ನಿಧಿ ಮೂಲಕ ಮಾಡಬಹುದು. ಅದನ್ನು ನೀವು ನೇರವಾಗಿ ಮಾಡಲು ಆಗುವುದಿಲ್ಲ. ಎಲ್ಲ ಕೆಲಸಗಾರ ಅನುಮತಿಯ ನಂತರ ಹೆಚ್ಚಿಸಲು ಸಾಧ್ಯ. ಈಗೆ ಮಾಡುವ ಮೂಲಕ ಉದ್ಯೋಗಿ ಯಾವುದೇ ಮಿತಿಯಿಲ್ಲದೆ ಇಪಿಎಫ್ ಕೊಡುಗೆಯನ್ನು ತನಗೆ ಬೇಕಾದಷ್ಟು ಹೆಚ್ಚಿಸಬಹುದು. ವಿಪಿಎಫ್‌ನ ಪ್ರಯೋಜನಗಳು ಇಪಿಎಫ್‌ನಂತೆಯೇ ವಿವರಿಸಬಹುದು.

ವಿಪಿಎಫ್ ವರ್ಷಕ್ಕೆ 8.10 ಪ್ರತಿಶತದಷ್ಟು ಆದಾಯವನ್ನು ನೀಡುತ್ತದೆ. 

ವಿಪಿಎಫ್ ನಿಂದಾಗಿ ವರ್ಷಕ್ಕೆ 8.10 ಪ್ರತಿಶತದಷ್ಟು ಆದಾಯವನ್ನು ಪಡೆಯಬಹುದು. ಇಲ್ಲಿ ಹೂಡಿಕೆ ಮಾಡುವ ಮೂಲಕ ಜನರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯುತ್ತಾರೆ.ವ್ಯಕ್ತಿಯೊಬ್ಬ ಪಿಎಫ್ ಮತ್ತು ವಿಪಿಎಫ್‌ನಲ್ಲಿ ವಾರ್ಷಿಕವಾಗಿ ರೂ 2.5 ಲಕ್ಷಕ್ಕಿಂತಲೂ ಅಧಿಕ ಮೊತ್ತವನ್ನು ಹೂಡಿಕೆ ಮಾಡಿದರೆ, ಇಪಿಎಫ್‌ನಲ್ಲಿನ ಆದಾಯವು ತೆರಿಗೆಗೆ ಒಳಪಡುತ್ತದೆ.

ವಿಪಿಎಫ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ?

ಇದರಲ್ಲಿ ನೀವು ಹೂಡಿಕೆ ಮಾಡಲು ನಿಮ್ಮ ಕಂಪನಿಯ ಎಚ್ ಆರ್ ಗೆ ತಿಳಿಸಬೇಕಾಗುತ್ತದೆ. ಅವರ ಸಲಹೆಯಂತೆ ಇಪಿಎಫ್‌ ಖಾತೆಯ ಜೊತೆ ವಿಪಿಎಫ್ ಖಾತೆಯನ್ನು ತೆರೆಯಬಹುದು. ನೀವು ಮಾಸಿಕ ಕಡಿತಗಳು, ಶೇಕಡಾವಾರು ಇತ್ಯಾದಿ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ವಿಪಿಎಫ್‌ ಲಾಕ್-ಇನ್ ಅವಧಿಯು ಐದು ವರ್ಷಗಳು.

ತೆರಿಗೆ ಕಡಿತ ಮತ್ತು ಹಣ ವರ್ಗಾವಣೆ

ನೀವು ನಿಮ್ಮ ಕಂಪನಿಯನ್ನು ಬದಲಾಯಿಸಿದರೆ, ಇವಿಪಿಎಫ್‌ ಮೊತ್ತವನ್ನು ಸುಲಭವಾಗಿ ನಿಮ್ಮ ಹೊಸ ಕಂಪನಿಗೆ ವರ್ಗಾಯಿಸಬಹುದು. ಇದಕ್ಕೆ ಯಾವುದೇ ತೆರಿಗೆ ವಿಧಿಸುವುದಿಲ್ಲ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ಬರುತ್ತದೆ. ಇದರಿಂದ ಒಂದು ವರ್ಷದಲ್ಲಿ 1.50 ಲಕ್ಷದವರೆಗೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

Advertisement
Advertisement